ಕಬ್ಬಿಣದ ಕಾವಲಿಯನ್ನೂ ನಾನ್ ಸ್ಟಿಕ್ ತವಾ ಮಾಡಬಹುದು – ಹೇಗೆ ಗೊತ್ತಾ? ಮಾಹಿತಿ ಇಲ್ಲಿದೆ..

ಕಬ್ಬಿಣದ ಕಾವಲಿಯನ್ನೂ ನಾನ್ ಸ್ಟಿಕ್ ತವಾ ಮಾಡಬಹುದು – ಹೇಗೆ ಗೊತ್ತಾ? ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ‌ : ಗರಿಗರಿಯಾದ ದೋಸೆ ಮಾಡಬಹುದು ಎನ್ನುವ ಕಾರಣಕ್ಕೆ ನಾನ್ ಸ್ಟಿಕ್ ತವಾಗಳು ಭಾರೀ ಜನಪ್ರಿಯವಾಗಿದ್ದವು. ಆದರೆ ಇದರಲ್ಲಿನ ಟೆಫ್ಲಾನ್ ಪದರ ಆರೋಗ್ಯಕ್ಕೆ ಹಾನಿಕಾರ ಎಂಬ ಕಾರಣಕ್ಕೆ ಈಗ ಹಲವರು ಸಾಂಪ್ರದಾಯಿಕ ಕಬ್ಬಿಣದ ಕಾವಲಿಯೆಡೆಗೆ ಮುಖ ಮಾಡಿದ್ದಾರೆ. ಆದರೆ ಕಬ್ಬಿಣದ ಕಾವಲಿಯಲ್ಲಿ ನಾನ್ ಸ್ಟಿಕ್ ನಂತೆ ಗರಿಗರಿ ದೋಸೆ ಮಾಡಲು ಆಗುವುದಿಲ್ಲ ಎನ್ನುವುದು ಬಹುತೇಕರ ದೂರು. ಇದಕ್ಕೂ ಪರಿಹಾರವಿದೆ. ಕೆಲವೊಂದು ಮಾರ್ಗಗಳ ಮೂಲಕ ಕಬ್ಬಿಣದ ಕಾವಲಿಯನ್ನೂ ನಾನ್ ಸ್ಟಿಕ್ ತವಾದಂತೆ ಪರಿವರ್ತಿಸಬಹುದು. ಅದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

ಬಿಸಿ ಕಾವಲಿಯ ಮೇಲೆ ನೀರು ಹಾಕಬೇಡಿ

ಬಹುತೇಕರು ದೋಸೆ ಎಲ್ಲಾ ಹೊಯ್ದ ಮೇಲೆ ಕಾವಲಿ ಬಿಸಿ ಇರುವಂತೆಯೇ ತೊಳೆಯಲು ನಲ್ಲಿಯ ಕೆಳಗೆ ಇಡುತ್ತಾರೆ. ಇದು ತಪ್ಪು. ಕಾವಲಿ ತಣ್ಣಗಾಗಲು ಬಿಡಿ. ಬಳಿಕ ಸ್ವಲ್ಪ ಬಿಸಿ ನೀರನ್ನು ಅದರ ಮೇಲೆ ಹಾಕಿ ಸ್ವಲ್ಪ ಹೊತ್ತು ನೆನೆಸಿ. ಆಮೇಲೆ ಗರಗರ ಉಜ್ಜದೆ ಸ್ವಲ್ಪ ಸೋಪು ಹಾಕಿ ಮೆದುವಾಗಿ ಉಜ್ಜಿ ತೊಳೆಯಿರಿ.

ನೀರಿನ ಪಸೆ ಇಲ್ಲದಿರಲಿ

ತೊಳೆದ ಕಬ್ಬಿಣದ ಕಾವಲಿಯನ್ನು ಹಾಗೇ ಇಟ್ಟರೆ ಬೇಗ ತುಕ್ಕು ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ನೀರ ಪಸೆ ಎಲ್ಲವನ್ನೂ ಬಟ್ಟೆಯಿಂದ ಒರೆಸಿ ಇಡಿ.

ಸೀಸನ್ ಮಾಡಿ

ಕಬ್ಬಿಣದ ಕಾವಲಿ ನಾನ್ ಸ್ಟಿಕ್ ನಂತೆ ವರ್ತಿಸಲು ಅದನ್ನು ಸೀಸನ್ ಮಾಡಿಡುವುದು ತುಂಬಾ ಅಗತ್ಯ.

ಸೀಸನ್ ಮಾಡುವ ವಿಧಾನ:

ನೀರ ಪಸೆ ಇಲ್ಲದ ಕಾವಲಿ ಮೇಲೆ ಒಂದೆರಡು ಬಿಂದು ಎಳ್ಳೆಣ್ಣೆಯನ್ನು ಹಾಕಿ ಎಲ್ಲಾ ಭಾಗಗಳಿಗೂ ಹರಡುವಂತೆ ಉಜ್ಜಿ. ನಂತರ ಒಲೆಯ ಮೇಲೆ ಹದ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ ಇನ್ನೇನು ಹೊಗೆ ಎಳುತ್ತದೆ ಎನ್ನುವಾಗ ಉರಿ ಬಂದ್ ಮಾಡಿ.

ಎಣ್ಣೆಯ ತೆಳುವಾದ ಪದರ ಇರಲಿ.

ಸೀಸನ್ ಮಾಡಿದ ಕಾವಲಿಯನ್ನು ಹಾಗೆಯೇ ತಣ್ಣಗಾಗಲು ಬಿಡಿ. ಬಳಿಕ ಹೆಚ್ಚುವರಿ ಎಣ್ಣೆಯನ್ನು ಟಿಶ್ಯೂ ಅಥವಾ ಬಟ್ಟೆಯಲ್ಲಿ ಒರೆಸಿ ತೆಗೆಯಿರಿ. ಎಣ್ಣೆಯ ತೆಳುವಾದ ಪದರ ಹಾಗೆಯೇ ಇರಲಿ.

ಜತನ ಮಾಡಿ

ಹೀಗೆ ಕಬ್ಬಿಣದ ಕಾವಲಿಗೆ ತುಕ್ಕು ಹಿಡಿಯದಂತೆ ಸೀಸನ್ ಮಾಡುತ್ತಾ ಜತನದಿಂದ ಕಾಪಾಡುತ್ತಾ ಬಂದರೆ ಯಾವ ನಾನ್ ಸ್ಟಿಕ್ ಗೂ ಕಡಿಮೆ ಇಲ್ಲದಂತೆ ಬಳಸಬಹುದು, ಗರಿಗರಿಯಾದ ದೋಸೆಯನ್ನೂ ಮಾಡಬಹುದು.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *