ಈ ಬಾರಿ ಬಿಗ್ ಬಾಸ್ ಹೊಸ ಮನೆಯಲ್ಲಿ ಹೊಸ ಆಟ – 4 ತಿಂಗಳಲ್ಲಿ ನಿರ್ಮಾಣವಾದ ದೊಡ್ಮನೆಯ ವಿಡಿಯೋ ರಿಲೀಸ್‌ ಮಾಡಿದ ಕಿಚ್ಚ ಸುದೀಪ್

ಈ ಬಾರಿ ಬಿಗ್ ಬಾಸ್ ಹೊಸ ಮನೆಯಲ್ಲಿ ಹೊಸ ಆಟ – 4 ತಿಂಗಳಲ್ಲಿ ನಿರ್ಮಾಣವಾದ ದೊಡ್ಮನೆಯ ವಿಡಿಯೋ ರಿಲೀಸ್‌ ಮಾಡಿದ ಕಿಚ್ಚ ಸುದೀಪ್

ನ್ಯೂಸ್‌ ಆ್ಯರೋ : ಬಿಗ್‌ಬಾಸ್‌ ಸೀಸನ್ 10 ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಟಿವಿ ಪರದೆ ಮೇಲೆ ದೊಡ್ಮನೆ ಆಟ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಸುದೀಪ್‌ ಅವರು, ಸೀಸನ್ 10ರ ವಿಶೇಷತೆಯನ್ನು ವಿವರಿಸಿದರು. ಈ ವೇಳೆ ಬಿಗ್​ ಬಾಸ್​ ಮನೆಯ ನಿರ್ಮಾಣದ ವಿಟಿಯೊಂದನ್ನು ರಿಲೀಸ್ ಮಾಡಲಾಯಿತು.

ಅಕ್ಟೋಬರ್​ 8 ರಂದು ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್​ಬಾಸ್ ಸೀಸನ್ 10ಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಎಂದಿನಂತೆ ಈ ಕಾರ್ಯಕ್ರಮದ ಮುಂದಾಳತ್ವವನ್ನು ಕಿಚ್ಚ ಸುದೀಪ್ ಅವರು ನಿರ್ವಹಿಸಲಿದ್ದಾರೆ.

ಸೀಸನ್ 10ಕ್ಕೆ ಹೊಸ ಬಿಗ್ ಬಾಸ್ ಮನೆ ನಿರ್ಮಾಣ

10ನೇ ಸೀಸನ್‌ಗೆ ಈ ಬಾರಿ ದೊಡ್ಮನೆಗೆ ಹೊಸ ಲುಕ್‌ ಅನ್ನು ನೀಡಲಾಗಿದೆ. 4ತಿಂಗಳಿನಿಂದ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಮನೆಯಲ್ಲಿ- ಹೊಸ ಆಟಕ್ಕೆ ಸಿದ್ಧತೆ ಮಾಡಿಕೊಳ್ಳಲಿದೆ.

ಇನ್ನೂ ವಿಶೇಷತೆಯೆಂದರೆ ಭಾರತದ ಎಲ್ಲಾ ಭಾಷೆಗಳಲ್ಲಿ ನಡೆಯುವ ಬಿಗ್ ಬಾಸ್​ ಶೋನಲ್ಲಿ ಕನ್ನಡದ ಮನೆಯೇ ಅತಿ ದೊಡ್ಡ ಎಂದು ಹೇಳಲಾಗಿದೆ.

ದೊಡ್ಮನೆಗೆ ಎಂಟ್ರಿ ಕೊಡಲಿದೆ ಚಾರ್ಲಿ

ನ್ಯಾಶನಲ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಈ ಸಿನಿಮಾದಲ್ಲಿ ಎಲ್ಲರನ್ನು ರಂಜಿಸಿದ್ದ ಚಾರ್ಲಿ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ. ಮೊದಲ ಸ್ಪರ್ಧಿಯಾಗಿ ಚಾರ್ಲಿ ಎಂಟ್ರಿಯಾಗಲಿದ್ದಾಳೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *