
Neethu Vanajakshi : ಬಿಗ್ ಬಾಸ್ 10ರ ಮಂಗಳಮುಖಿಯ ಬಗ್ಗೆ ನಿಮಗ್ಗೊತ್ತಾ? – ಮಂಜುನಾಥ್ ಆಗಿದ್ದಾತ ನೀತು ಆಗಿದ್ದು ಹೇಗೆ?
- ಮನರಂಜನೆ
- October 18, 2023
- No Comment
- 208
ನ್ಯೂಸ್ ಆ್ಯರೋ : ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭವಾದ ಬಳಿಕ ನೀತು ವನಜಾಕ್ಷಿ ಬಗ್ಗೆ ಮನೆಮನೆಯಲ್ಲೂ ಚರ್ಚೆ ನಡೆಯುತ್ತಿದೆ. ಈ ನೀತು ಯಾರು, ಎಲ್ಲಿಂದ ಬಂದಿದ್ದು, ಹಿಂದೆ ಹೇಗಿದ್ದರು… ಇತ್ಯಾದಿ… ಇವರ ಬಗ್ಗೆ ಹುಡುಕುತ್ತಿದ್ದಾಗ ಸಿಕ್ಕಿದ್ದು ಇಷ್ಟು… ಇವನ್ನು ವಿವರವಾಗಿ ನಾವು ಇಲ್ಲಿ ಹೇಳಲಿದ್ದೇವೆ..
ನೀತು ಅವರ ಮೊದಲಿನ ಹೆಸರು ಮಂಜುನಾಥ್. ಹುಟ್ಟುವಾಗ ಹುಡುಗನಂತೆ ಇದ್ದವರು ಬೆಳೆಯುತ್ತಾ ಬದಲಾಗುತ್ತಾ ಹೋದರು. ಅವರ ದೇಹದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಪ್ರಾರಂಭವಾದವು. ಪರಿಣಾಮ ಅವರು ಸಂಪೂರ್ಣವಾಗಿ ದೈಹಿಕವಾಗಿ, ಮಾನಸಿಕವಾಗಿಯೂ ಬದಲಾದರು.
ಆಗ ಅವರು ಏಳನೇ ತರಗತಿಯಲ್ಲಿ ಓದುತ್ತಿದ್ದರು. ಅವರ ಮನಸ್ಸು ಹುಡುಗರ ಕಡೆ ಹೆಚ್ಚಾಗಿ ಸೆಳೆಯುತ್ತಿತ್ತು. ಹೀಗೇಕೆ ಎನ್ನುವ ಪ್ರಶ್ನೆ ಶುರುವಾದಾಗಲೇ ಅವರಿಗೆ ನಾನು ಅವನಲ್ಲ ಅವಳು ಎನ್ನುವ ಭಾವನೆ ಮೂಡಿತ್ತು.



ಎಲ್ಲರೊಂದಿಗೆ ಆಡಿ ನಲಿಯುತ್ತಿದ್ದವರು ಏಕಾಏಕಿ ಎಲ್ಲವನ್ನೂ ನಿಲ್ಲಿಸಿ ಬಿಟ್ಟರು. ಪ್ರಾರಂಭದಲ್ಲಿ ಇದನ್ನು ಒಪ್ಪಿಕೊಳ್ಳುವುದು ಅವರಿಗೂ ದೊಡ್ಡ ಸವಾಲಾಗಿತ್ತು. ಆದರೆ ಕ್ರಮೇಣ ಮಂಜುನಾಥ್ ಆಗಿದ್ದವರು ನೀತು ವನಜಾಕ್ಷಿಯಾಗಿ ಬದಲಾದರು.
ತಾಯಿ ವನಜಾಕ್ಷಿ ಅವರು ಜೊತೆಗೆ ನಿಂತರು. ಮಗನಲ್ಲಿ ಆದ ಬದಲಾವಣೆಯನ್ನು ಅವರ ಒಪ್ಪಿಕೊಂಡರು. ಸಮಾಜದಿಂದ ದೂರವಾಗಲು ಬಿಡದೆ ಎಲ್ಲರೊಂದಿಗೂ ಬೆರೆಯಲು ಅವಕಾಶ ಮಾಡಿಕೊಟ್ಟರು. ಹೀಗಾಗಿ ನೀತು ಅವರ ಹೆಸರಿನೊಂದಿಗೆ ತಾಯಿಯ ಹೆಸರೂ ಸೇರಿಕೊಂಡಿದೆ.

ಸದ್ಯ ತಮ್ಮದೇ ಟ್ಯಾಟೂ ಸ್ಟುಡಿಯೋ, ಹೋಟೆಲ್ ಹೊಂದಿರುವ ನೀತು ಅವರ ಬಾಲ್ಯದ ಫೋಟೋಗಳನ್ನು ಅವರ ಕುಟುಂಬದವರೇ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.