
Sunaina Yeella : ಇದ್ದಕ್ಕಿದ್ದ ಹಾಗೇ ‘ಗಂಗೆ ಬಾರೆ ತುಂಗೆ ಬಾರೆʼ ನಟಿಗೆ ಏನಾಯ್ತು? – ಕೈಯಲ್ಲಿ ಡ್ರಿಪ್ಸ್ ಮೂಗಿನಲ್ಲಿ ಟ್ಯೂಬ್ : ನಟಿ ಸುನೈನಾಗೆ ಏನಾಗಿದೆ?
- ಮನರಂಜನೆ
- October 21, 2023
- No Comment
- 77
ನ್ಯೂಸ್ ಆ್ಯರೋ : ಕನ್ನಡದ ʼಗಂಗೆ ಬಾರೆ ತುಂಗೆ ಬಾರೆʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಸುನೈನಾ ಅವರು ಇದ್ದಕ್ಕಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೋಟೋದ ಕೆಳಗಡೆ ನನಗೆ ಸ್ವಲ್ಪ ಸಮಯ ಕೊಡಿ. ನಾನು ಹಿಂತಿರುಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ನಟಿಗೆ ಏನಾಯ್ತು ಎಂದು ಅವರ ಫ್ಯಾನ್ಸ್ ತುಂಬಾ ಆತಂಕಗೊಂಡಿದ್ದಾರೆ.
ಕೈಯಲ್ಲಿ ಡ್ರಿಪ್ಸ್ ಮೂಗಿನಲ್ಲಿ ಟ್ಯೂಬ್ ಹಾಕಿಸಿಕೊಂಡು ಆಸ್ಪತ್ರೆಯ ಬೆಡ್ ಮೇಲೆ ಮಲಗಿ ನಟಿ ‘ಥಂಬ್ಸ್ ಅಪ್’ ಸಿಗ್ನಲ್ ನೀಡಿರುವ ದೃಶ್ಯ ಚಿತ್ರದಲ್ಲಿದೆ.
ಸ್ವತಃ ಈ ಫೋಟೋವನ್ನು ಸುನೈನಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ, “ನನಗೆ ಸ್ವಲ್ಪ ಸಮಯ ಕೊಡಿ. ನಾನು ಹಿಂತಿರುಗುತ್ತೇನೆ…” ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಆದ್ರೆ ಸುನೈನಾಗೆ ಅಪಘಾತವಾಯ್ತಾ ಅಥವಾ ಅವರ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದರ ಬಗ್ಗೆ ಬರೆದುಕೊಂಡಿಲ್ಲ.
ನಟಿ ಸುನೈನಾ ಸದ್ಯ ಕೆಲವು ವೆಬ್ ಸಿರೀಸ್ ಮತ್ತು ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂತಿಮವಾಗಿ “ರೆಜಿನಾ” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.