ವೈವಾಹಿಕ ಜೀವನಕ್ಕೆ ಮತ್ತೊಬ್ಬ ಸ್ಟಾರ್ ನಟಿ? – ನಟಿ ರಾಶಿ ಖನ್ನಾ ಅವರನ್ನು ಮದುವೆ ಆಗ್ತಾ ಇರೋರು ಯಾರು?

ವೈವಾಹಿಕ ಜೀವನಕ್ಕೆ ಮತ್ತೊಬ್ಬ ಸ್ಟಾರ್ ನಟಿ? – ನಟಿ ರಾಶಿ ಖನ್ನಾ ಅವರನ್ನು ಮದುವೆ ಆಗ್ತಾ ಇರೋರು ಯಾರು?

ನ್ಯೂಸ್ ಆ್ಯರೋ‌ : ಹಿಂದಿ ಸೇರಿ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ, ವೆಬ್ ಸೀರಿಸ್ ಗಳಲ್ಲಿ ನಟಿಸಿರುವ ರಾಶಿ ಖನ್ನಾ ಶೀಘ್ರದಲ್ಲಿಯೇ ಹಸೆ ಮಣೆಗೇರಲಿದ್ದಾರೆಯೇ? ಸದ್ಯ ಹೀಗೊಂದು ಸುದ್ದಿ ಹರಿದಾಡುತ್ತಿದೆ.

ಅಧಿಕೃತವಾಗಿ ದೃಢವಾಗಿಲ್ಲ

ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೆ. ಆದರೆ ಆತ ಕೈಕೊಟ್ಟಿದ್ದರಿಂದ ಖಿನ್ನತೆಗೆ ಜಾರಿದ್ದೆ. ಬಳಿಕ ಒಬ್ಬ ಒಳ್ಳೆಯ ಸ್ನೇಹಿತನ ಪರಿಚಯವಾಯಿತು ಎಂದು ರಾಶಿ ಇತ್ತೀಚೆಗೆ ಹೇಳಿಕೊಂಡಿದ್ದರು. ಆ ವ್ಯಕ್ತಿ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿದ್ದು, ಶೀಘ್ರ ವಿವಾಹವಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯ ಈ ಸುದ್ದಿ ಅಂತೆ ಕಂತೆ ಹಂತದಲ್ಲಿದ್ದು ಅಧಿಕೃತ ರೂಪ ಪಡೆದಿಲ್ಲ.

ರಾಶಿ ನಾಯಕಿಯಾಗಿ ನಟಿಸಿರುವ ಸಿನಿಮಾಗಳು ಇತ್ತೀಚೆಗೆ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂದೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಸದ್ಯ ರಾಶಿ ಕೈಯಲ್ಲಿ ಹಿಂದಿಯ ‘ಯೋಧ’, ತಮಿಳಿನ ‘ಆರ್ನಮನೈ-4’, ‘ಮೇಧಾವಿ’ ಚಿತ್ರಗಳು ಬಿಟ್ಟರೆ ಬೇರೆ ಚಿತ್ರಗಳಿಲ್ಲ. ಇತ್ತೀಚೆಗೆ ರುದ್ರ, ಫಾರ್ಸಿ ಹಿಂದಿ ವೆಬ್ ಸೀರಿಸ್ ಮೂಲಕ ಅವರು ಗಮನ ಸೆಳೆದಿದ್ದರು.

2013ರಲ್ಲಿ ‘ಮದ್ರಾಸ್ ಕೆಫೆ’ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದ ರಾಶಿ 2014ರಲ್ಲಿ ‘ಮನಂ’ ಸಿನಿಮಾದ ಅತಿಥಿ ಪಾತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟಿದ್ದರು. 2017ರಲ್ಲಿ ‘ವಿಲನ್’ ಸಿನಿಮಾ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2018ರಲ್ಲಿ ತೆರೆಕಂಡ ‘ಇಮೈಕಾ ನೋಡಿಗಳ್’ ರಾಶಿ ನಟಿಸಿದ ಮೊದಲ ತಮಿಳು ಚಿತ್ರ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *