700 ಸಿನಿಮಾ, 4 ಮಕ್ಕಳ ತಂದೆ ಜೊತೆ ಪ್ರೀತಿ – ಹೇಗಿತ್ತು ಗೊತ್ತಾ ಬಾಲಿವುಡ್‌ನ ಮೊದಲ ಐಟಂ ಗರ್ಲ್ ಜೀವನ?

700 ಸಿನಿಮಾ, 4 ಮಕ್ಕಳ ತಂದೆ ಜೊತೆ ಪ್ರೀತಿ – ಹೇಗಿತ್ತು ಗೊತ್ತಾ ಬಾಲಿವುಡ್‌ನ ಮೊದಲ ಐಟಂ ಗರ್ಲ್ ಜೀವನ?

ನ್ಯೂಸ್ ಆ್ಯರೋ : 60-70ರ ದಶಕದಲ್ಲಿ ಭಾರತೀಯ ಸಿನಿ ತಂಗದ ಕನಸಿನ ರಾಣಿ ಎಂದೇ ಖ್ಯಾತಿ‌ ಪಡೆದಿದ್ದ ನಟಿ ಹೆಲೆನ್. ಈ ಬಾಲಿವುಡ್ ಬೆಡಗಿಯನ್ನು ಭಾರತೀಯ ಚಿತ್ರರಂಗದ ಮೊಟ್ಟ ಮೊದಲ ಐಟಂ ಗರ್ಲ್ ಎಂದರೆ ತಪ್ಪಿಲ್ಲ. ತನ್ನ ಸಿನಿ ಜರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು‌ ಕಂಡಿರುವ ಹೆಲೆನ್ ತನ್ನ ಜೀವಿತಾವಧಿಯಲ್ಲಿ ಬರೋಬ್ಬರಿ 700 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೂ ಕೂಡ ಹೆಲೆನ್ ಜೀವನ ಅಷ್ಟೊಂದು ಸುಂದರವಾಗಿರಲಿಲ್ಲ.

4 ಮಕ್ಕಳ ತಂದೆಯೊಂದಿಗಿನ ಪ್ರೀತಿ, ಸಿನಿ‌ ಜಗತ್ತಿನಲ್ಲಾದ ಅವಮಾನ ಹೀಗೆ ಸಾಕಷ್ಟು ನೋವುಂಡ ಸಿನಿ ಲೋಕದ ರಾಣಿ ಹೆಲೆನ್ ಬದುಕಿನ ರೋಚಕ ಕಹಾನಿ‌ ಇಲ್ಲಿದೆ.

ಹುಟ್ಟು ಬರ್ಮಾದಲ್ಲಿ, ಖ್ಯಾತಿ ಭಾರತದಲ್ಲಿ!

ಬಾಲಿವುಡ್‌ನ ಖ್ಯಾತ ನೃತ್ಯಗಾರ್ತಿ ಹಾಗೂ ನಟಿಯಾಗಿದ್ದ ಹೆಲೆನ್ 1936ರ ನವೆಂಬರ್ 21 ರಂದು ಬರ್ಮಾದಲ್ಲಿ ಜನಿಸಿದರು. ಹೆಲೆನ್ ಅನ್ನೇ ರಿಚರ್ಡ್ಸನ್ ಅವರ ಪೂರ್ಣ ಹೆಸರು. ಎರಡನೇ ಮಹಾಯುದ್ಧದಲ್ಲಿ ಅವರ ತಂದೆ ನಿಧನರಾದ ಬಳಿಕ ಹೆಲೆನ್ ಮತ್ತು ಕುಟುಂಬ ಬರ್ಮಾ ತೊರೆದು ಭಾರತಕ್ಕೆ ಬಂದರು. ತಾಯಿ ನರ್ಸ್ ಆಗಿದ್ದರೂ ಕೂಡ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದನ್ನರಿತ ಹೆಲೆನ್ ಕೆಲಸಕ್ಕಾಗಿ ಅಲೆದಾಡಿದರು. ಹೆಲೆನ್ ಸೌಂದರ್ಯ ಅವರನ್ನು ಸಿನಿ ಜಗತ್ತಿಗೆ ಕಾಲಿಡುವಂತೆ ಮಾಡಿತು.

19ನೇ ವರ್ಷಕ್ಕೆ ಸಿನಿಮಾಗೆ ಎಂಟ್ರಿ!

ಹೆಲೆನ್ 19 ವರ್ಷದವಳಿದ್ದಾಗ, ಚಲನಚಿತ್ರ ಜಗತ್ತಿಗೆ ಪ್ರವೇಶಿಸುವ ಅವಕಾಶವನ್ನು ಪಡೆದರು. ಅವರು ‘ಹೌರಾ ಬ್ರಿಡ್ಜ್’ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಈ ಹಾಡಿನ ನಂತರ ಅವರನ್ನು ಬಾಲಿವುಡ್‌ನಲ್ಲಿ ಐಟಂ ಗರ್ಲ್ ಎಂದು ಕರೆಯಲು ಪ್ರಾರಂಭಿಸಿದರು.

ಹಿಂದಿ ಚಿತ್ರರಂಗದ ಮೊದಲ ಐಟಂ ಗರ್ಲ್ ಎಂದೂ ಕರೆಯುತ್ತಾರೆ. ಹೆಲೆನ್ ಆ ಕಾಲದ ಹಾಟೆಸ್ಟ್ ನಟಿಯರಲ್ಲಿ ಒಬ್ಬಳು. ಆ ಕಾಲದಲ್ಲಿ ಅವರನ್ನು ತೆರೆಯ ಮೇಲೆ ನೋಡಿ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಹೆಲೆನ್ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದರು, ಸಾಲು ಸಾಲು ಅವಕಾಶಗಳು ಹುಡುಕಿ‌ ಬಂದವು.

4 ಮಕ್ಕಳ ತಂದೆಯೊಂದಿಗೆ ಪ್ರೀತಿ!

ಸಾಕಷ್ಟು ಅವಕಾಶಗಳು, ಅಗತ್ಯಕ್ಕೂ ಮೀರಿದ ಆರ್ಥಿಕ ಅಂತಸ್ತು, ದೇಶದೆಲ್ಲೆಡೆ ಹೆಸರು ಇಷ್ಟಿದ್ದರೂ ಕೂಡ ಹೆಲೆನ್ ದಾರಿ ತಪ್ಪಿ ಬಿಟ್ಟರು. ಸಲೀಂ ಖಾನ ಎಂಬ ನಿರ್ದೇಶಕರೊಂದಿಗೆ ಆತ್ಮೀಯತೆ ಬೆಳೆಯಿತು. ಕ್ರಮೇಣ ಆ ಆತ್ಮೀಯತೆ ಪ್ರೀತಿಗೆ ತಿರುಗಿ ಇಬ್ಬರೂ ಪ್ರೀತಿಸ ತೊಡಗಿದರು. ಆದರೆ ಸಲೀಂ ಖಾನ್ ಅದಾಗಲೇ ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿದ್ದರು.

ಹೆಲೆನ್ ಅವರಿಂದಾಗಿ ಸಲೀಂ ವೈಯಕ್ತಿಕ ಜೀವನ ಹಾಳಾಯಿತು. ಇನ್ನೊಂದೆಡೆ ಹೆಲೆನ್ ಹೆಸರು, ಜೀವನ, ಆರ್ಥಿಕ ಸ್ಥಿತಿಯೂ ಕೂಡ ದುಸ್ತರವಾಯಿ. ಬರೋಬ್ಬರಿ 700 ಸಿನಿಮಾಗಳಲ್ಲಿ ನಟಿಸಿದ ಹೆಲೆನ್ ದುರಂತ ಬದುಕಿನ ಐಟಂ ಗರ್ಲ್ ಎನಿಸಿಕೊಂಡರು..!

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *