ಚೀನಾದಲ್ಲಿ ಮತ್ತೆ ಹೊಸ ಸೋಂಕು, ಮಕ್ಕಳಲ್ಲಿ ವೇಗವಾಗಿ ಹರಡ್ತಿದೆ ಈ ಡೇಂಜರಸ್ ರೋಗ – ಶಾಲೆಗಳು ಬಂದ್, ತುರ್ತು ಪರಿಸ್ಥಿತಿ ನಿರ್ಮಾಣ..!

ಚೀನಾದಲ್ಲಿ ಮತ್ತೆ ಹೊಸ ಸೋಂಕು, ಮಕ್ಕಳಲ್ಲಿ ವೇಗವಾಗಿ ಹರಡ್ತಿದೆ ಈ ಡೇಂಜರಸ್ ರೋಗ – ಶಾಲೆಗಳು ಬಂದ್, ತುರ್ತು ಪರಿಸ್ಥಿತಿ ನಿರ್ಮಾಣ..!

ನ್ಯೂಸ್ ಆ್ಯರೋ : ಭಾರತದಲ್ಲಿ ಕೊರೋನಾ ಸೋಂಕು ಒಮ್ಮೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಆರ್ಥಿಕ ಮಟ್ಟ ಕುಸಿಯುವಂತೆ ಮಾಡಿತ್ತು. ಸಾವಿರಾರು ಜನ ಕೊರೋನಾ ಸೋಂಕಿಗೆ ಬಲಿಯಾದರು. ಕೊರೋನಾದ ಬಳಿಕ ಮತ್ತೆ ಮೊದಲಿನಂತಾಗಲು, ಚೇತರಿಸಿಕೊಳ್ಳಲು ಭಾರತ ಮತ್ತು ಇತರ ದೇಶ ಪಟ್ಟ ಕಷ್ಟ ಹಲವು, ಎದುರಿಸಿದ ಸವಾಲು ನೂರಾರು. ಇದೀಗ ಮತ್ತೆ ಚೀನಾ ವಿಶ್ವಕ್ಕೆ ಅಂತಹುದೇ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ….!

ಇದೀಗ ಕೊರೊನಾ ಮಹಾಮಾರಿಯಿಂದ ಹೆಣಗಾಡುತ್ತಿರುವ ಚೀನಾದಲ್ಲಿ ಹೊಸ ರೋಗವೊಂದು ದೊಡ್ಡ ಮಟ್ಟದಲ್ಲಿ ಬಾಧಿಸುತ್ತಿದೆ. ಹೌದು. ಚೀನಾದ ಶಾಲೆಗಳಲ್ಲಿ ಮತ್ತೊಂದು ರೋಗವು ವೇಗಗತಿಯಲ್ಲಿ ಹರಡುತ್ತಿದೆ. ಇಲ್ಲಿನ ಶಾಲೆಗಳಲ್ಲಿ ನಿಗೂಢ ನ್ಯುಮೋನಿಯಾ ಉಲ್ಬಣಗೊಳ್ಳುತ್ತಿದ್ದು, ಈ ಆತಂಕಕಾರಿ ಪರಿಸ್ಥಿತಿ ಕೋವಿಡ್ ಬಿಕ್ಕಟ್ಟಿನ ಆರಂಭದ ದಿನಗಳನ್ನು ನೆನಪಿಸುತ್ತಿದೆ.

ಈಶಾನ್ಯಕ್ಕೆ 500 ಮೈಲುಗಳಷ್ಟು ದೂರದಲ್ಲಿರುವ ಬೀಜಿಂಗ್ ಮತ್ತು ಲಿಯಾನಿಂಗ್‌ನಲ್ಲಿರುವ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ದಾಖಲಿಸಲಾಗುತ್ತಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ನಿಗೂಢ ನ್ಯುಮೋನಿಯಾದಿಂದಾಗಿ ಏಕಾಏಕಿ ಹೆಚ್ಚಿನ ಶಾಲೆಗಳನ್ನು ಮುಚ್ಚಲಾಗಿದೆ.

ನ್ಯುಮೋನಿಯಾ ರೋಗದ ಲಕ್ಷಣವೇನು..?

ಈ ರೋಗದಿಂದ ಬಳಲುತ್ತಿರುವ ಮಕ್ಕಳು ಶ್ವಾಸಕೋಶದಲ್ಲಿ ಊತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಲಕ್ಷಣಗಳನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ ಉಸಿರಾಟದ ತೊಂದರೆ, ಕೆಮ್ಮು ಆರ್ ಎಸ್ ವಿಯಂತಹ ಇತರ ಲಕ್ಷಣಗಳು ಆ ಮಕ್ಕಳಲ್ಲಿ ಕಂಡುಬರುವುದಿಲ್ಲ. ಓಪನ್ ಆ್ಯಕ್ಸೆಸ್​ ಸರ್ವಿಲನ್ಸ್​ ಪ್ಲಾಟ್​ಫಾರಂ ProMed ಮಂಗಳವಾರ, ವಿಶೇಷವಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ರೋಗನಿರ್ಣಯ ಮಾಡದ ನ್ಯುಮೋನಿಯಾದ ಉದಯೋನ್ಮುಖ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ವರದಿಗಳು ಈ ರೋಗದ ಬಗ್ಗೆ ಏನು ಹೇಳುತ್ತದೆ..?

ಈ ಬಗ್ಗೆ ತಿಳಿಸಿದ ProMed ಈ ಪ್ರಕೋಪ ಏಕಾಏಕಿ ಹೇಗೆ ಆರಂಭವಾಯಿತು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಏಕೆಂದರೆ ಇಷ್ಟೊಂದು ಮಕ್ಕಳು ಇಷ್ಟು ಬೇಗ ಬಾಧಿತರಾಗುವುದು ಸಹಜವಲ್ಲ’ ಎಂದಿದೆ. ಅಲ್ಲದೇ ಇದು ಮತ್ತೊಂದು ಸಾಂಕ್ರಾಮಿಕ ರೋಗವಾಗಬಹುದೇ ಎಂದು ಊಹಿಸುವುದು ಬಹಳ ಅವಸರದಿಂದ ತೆಗೆದುಕೊಳ್ಳೋ ನಿರ್ಧಾರವಾಗುತ್ತದೆ. ಆದರೆ ನಾವು ಇನ್ನೂ ಎಚ್ಚರಿಕೆ ವಹಿಸಬೇಕು ಎಂದು ವರದಿ ಹೇಳಿದೆ.

ಚೀನಾದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ..?

ಸೂಚನೆಯೇ ಇಲ್ಲದೆ ಚೀನಾದಲ್ಲಿ ಈ ಖಾಯಿಲೆ ಮಕ್ಕಳನ್ನು ಭಾಧಿಸಿದೆ. ಈ ರೋಗ ಮುಂದೆ ಯಾವ ರೀತಿ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಪತ್ತೆಹಚ್ಚಲು ವೈದ್ಯರಂತೂ ಹರಸಾಹಸ ಪಡುತ್ತಿದ್ದಾರೆ. ಏಕಾಏಕಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅನಾರೋಗ್ಯದ ಮಕ್ಕಳಿದ್ದಾರೆ ಎಂದು ತೈವಾನೀಸ್ ಔಟ್ಲೆಟ್ ಎಫ್ಟಿವಿ ನ್ಯೂಸ್ ವರದಿ ಮಾಡಿದೆ. ಅಧಿಕಾರಿಗಳು ಸಾಂಕ್ರಾಮಿಕ ರೋಗವನ್ನು ಮರೆಮಾಚುತ್ತಿದ್ದಾರೆಯೇ ಎಂದು ಪೋಷಕರು ಪ್ರಶ್ನಿಸಿದ್ದಾರೆ ಎಂದು ಅದು ಹೇಳಿದೆ. ಆದರೆ ಹೊಸ ಏಕಾಏಕಿ ಮೈಕೋಪ್ಲಾಸ್ಮಾ ನ್ಯುಮೋನಿಯಾಕ್ಕೆ ಸಂಬಂಧಿಸಿರಬಹುದು ಎಂಬ ಅನುಮಾನಗಳಿವೆ. ಇದನ್ನು ವಾಕಿಂಗ್ ನ್ಯುಮೋನಿಯಾ ಎಂದೂ ಕರೆಯುತ್ತಾರೆ. ಸದ್ಯ ಇದು ಚೀನಾದಲ್ಲಿ ಬಹಳ ವೇಗವಾಗಿ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *