ಇನ್​ಸ್ಟಾಗ್ರಾಮ್​ ನಲ್ಲಿ ಏಕಾಏಕಿ 11ಸಾವಿರ ಹಿಂಬಾಲಕರನ್ನು ಕಳೆದುಕೊಂಡ ಸಂಗೀತಾ ಶೃಂಗೇರಿ…! – ಈ ವಾರ ಬಿಗ್ಬಾಸ್ ಮನೆಯಲ್ಲಿ ವಿಲನ್ ಆಗಿದ್ದೇ ತಪ್ಪಾಯ್ತಾ..?

ಇನ್​ಸ್ಟಾಗ್ರಾಮ್​ ನಲ್ಲಿ ಏಕಾಏಕಿ 11ಸಾವಿರ ಹಿಂಬಾಲಕರನ್ನು ಕಳೆದುಕೊಂಡ ಸಂಗೀತಾ ಶೃಂಗೇರಿ…! – ಈ ವಾರ ಬಿಗ್ಬಾಸ್ ಮನೆಯಲ್ಲಿ ವಿಲನ್ ಆಗಿದ್ದೇ ತಪ್ಪಾಯ್ತಾ..?

ನ್ಯೂಸ್ ಆ್ಯರೋ : ಬಿಗ್ಬಾಸ್ ಕನ್ನಡ 10ರ ಸೀಸನ್ ನನ್ನು ಜನರು ಅತ್ಯಂತ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಇದರಿಂದ ಟಿಆರ್ ಪಿ ಹೆಚ್ಚಾಗುತ್ತಿದೆ. ಈ ರಿಯಾಲಿಟಿ ಶೋಗಳ ಮೂಲಕ ಧಾರವಾಹಿಯ ಬೇಡಿಕೆ ಕುಸಿಯುತ್ತಿದೆ ಎನ್ನಲಾಗ್ತಿದೆ. ಬಿಗ್ ಬಾಸ್ ಮನೆ ಎಂದ ಮೇಲೆ ಅಲ್ಲಿ ಕೋಪ, ಜಗಳ, ಪ್ರೀತಿ, ರಂಪಾಟ ಎಲ್ಲವೂ ಮಾಮೂಲಿ. ಆದರೆ ಮನಸ್ತಾಪಗಳಿಂದ ಬೇಸತ್ತ ಸಂಗೀತಾ ಶೃಂಗೇರಿ ಈಗ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಮಾತು ಮಾತಿಗೆ ತಾವು ಮನೆ ತೊರೆಯುವುದಾಗಿ ಅವರು ಹೇಳುತ್ತಿದ್ದಾರೆ. ಇದು ಡ್ರಾಮಾ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಸಂಗೀತಾ, ಕಾರ್ತಿಕ್, ತನಿಷಾ ನಡುವೆ ಒಂದೊಳ್ಳೆ ಬಾಂಡ್ ಕ್ರಿಯೇಟ್ ಆಗಿತ್ತು. ಇವರು ಮೂವರು ಯಾವುದೇ ವಿಚಾರದಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಪರಸ್ಪರ ಬೆಂಬಲಿಸುತ್ತಾ ಬರುತ್ತಿದ್ದರು. ಆದರೆ ನಂತರ ನಡೆದ ಕೆಲ ಟಾಸ್ಕ್ ವಿಚಾರವಾಗಿ ಸೇವ್ ಮಾಡುವ ವಿಷಯದಲ್ಲಿ ಸಂಗೀತಾ ಕಾರ್ತಿಕ್ ಮತ್ತು ತನಿಷಾ ಅವರಿಂದ ಬೇಸರಕ್ಕೊಳಪಟ್ಟಿದ್ದರು.

ಈ ರೀತಿ ಮಾಡುವುದು ಸರಿಯಲ್ಲ ಎಂದು ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರೇ ಹೇಳಿದ್ರು ಸಂಗೀತಾ ಮಾತ್ರ ಡೋಂಟ್ ಕೇರ್ ಎನ್ನುವಂತೆ ವರ್ತಿಸಿದ್ದರು. ನಂತರದ ವಾರಗಳಲ್ಲಿ ಸಂಗೀತಾ ವರ್ತನೆ ಸಂಪೂರ್ಣವಾಗಿ ಬದಲಾಗಿದೆ.

ಈ ವಾರ ವಿಲನ್ ನಂತೆ ಕಾಣಿಸಿಕೊಳ್ತಿದ್ದಾರೆ ಸಂಗೀತಾ…!

ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿಲನ್ ಆಗಿದ್ದಾರೆ. ಅವರು ತಂಡ ಒಂದು ಚಾಲೆಂಜ್ ನೀಡಿತ್ತು. ಇದರ ಪ್ರಕಾರ ಕಾರ್ತಿಕ್ ಹಾಗೂ ಸಂತೋಷ್​ ತಲೆಯನ್ನು ಶೇವ್ ಮಾಡಬೇಕಿತ್ತು. ಅವರು ಈ ಚಾಲೆಂಜ್​ನ ಸ್ವೀಕರಿಸಿದರು. ಈ ಘಟನೆ ಕಾರ್ತಿಕ್ ಮಹೇಶ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಇದು ಸಂಗೀತಾ ಬಿಗ್ ಬಾಸ್ ಜರ್ನಿ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ ಕಳೆದುಕೊಂಡ್ರು ಸಂಗೀತಾ…!

ಇನ್​ಸ್ಟಾಗ್ರಾಮ್​ನಲ್ಲಿ ಸಂಗೀತಾ ಶೃಂಗೇರಿ ಅವರಿಗೆ 11 ಸಾವಿರ ಹಿಂಬಾಲಕರು ಕಡಿಮೆ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಯಾವುದೇ ಸೆಲೆಬ್ರಿಟಿ ಬಿಗ್ ಬಾಸ್​ಗೆ ಕಾಲಿಟ್ಟರೆ ಅವರ ಖ್ಯಾತಿ ಹೆಚ್ಚುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಹಿಂಬಾಲಕರ ಸಂಖ್ಯೆ ಜಾಸ್ತಿ ಆಗುತ್ತಾ ಹೋಗುತ್ತದೆ. ಬಿಗ್ ಬಾಸ್ ಜರ್ನಿ ಆರಂಭ ಆದಾಗ ಎಷ್ಟು ಜನ ಹಿಂಬಾಲಕರು ಇದ್ದರೋ ಜರ್ನಿ ಕೊನೆಗೊಳ್ಳುವಾಗ ಆ ಸಂಖ್ಯೆಯಲ್ಲಿ ದ್ವಿಗುಣ ಆದ ಉದಾಹರಣೆಯೂ ಸಾಕಷ್ಟು ಇದೆ.

ನಟಿ ಸಂಗೀತಾ ಶೃಂಗೇರಿ ಅವರಿಗೂ ಹಾಗೆಯೇ ಆಗಿದೆ. ಅವರ ಹಿಂಬಾಲಕ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇತ್ತು. ಆದರೆ, ಈ ಸಂಖ್ಯೆ ಈಗ ಏಕಾಏಕಿ ಕುಸಿದಿದೆ. ತಲೆ ಬೋಳಿಸುವ ಟಾಸ್ಕ್ ಕೊಡುವುದಕ್ಕೂ ಮೊದಲು ಸಂಗೀತಾಗೆ 4.49 ಲಕ್ಷ ಹಿಂಬಾಲಕರು ಇದ್ದರು. ಅಂದರೆ 449 ಸಾವಿರ ಫಾಲೋವರ್ಸ್​. ಶೇವಿಂಗ್ ಘಟನೆ ಆದ ಬಳಿಕ ಈ ಸಂಖ್ಯೆ 4.38 ಲಕ್ಷಕ್ಕೆ ಇಳಿಕೆ ಆಗಿದೆ. ಅಂದರೆ, 438 ಸಾವಿರ ಹಿಂಬಾಲಕರು ಆಗಿದ್ದಾರೆ. ಇದು ಆಟದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಸಂಖ್ಯೆ ದಿನ ಕಳೆದಂತೆ ಇಳಿಕೆ ಆಗುತ್ತಲೇ ಇದೆ. ಒಟ್ಟಾರೆಯಾಗಿ ಬಿಗ್ಬಾಸ್ ನೊಳಗಡೆ ಇವರು ತೋರಿಸುವ ಒಂದೊಂದು ವ್ಯಕ್ತಿತ್ವವೂ ಹೊರಗಡೆ ಅವರ ಖ್ಯಾತಿಯನ್ನು ಡ್ಯಾಮೇಜ್ ಮಾಡುವಲ್ಲಿ ಪಾತ್ರ ವಹಿಸುತ್ತದೆ. ಸಂಗೀತಾ ಅವರ ಅಭಿಮಾನಿಗಳೇ ಅವರ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಬೈಯ್ಯುತ್ತಿದ್ದಾರೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *