ನೀಟ್ ಕೌನ್ಸೆಲಿಂಗ್ ನಲ್ಲಿ ಸೀಟು ಪಡೆಯುವುದು ಹೇಗೆ? – ಭಾರತದ ಟಾಪ್ ಮೆಡಿಕಲ್ ಕಾಲೇಜು ಯಾವುದು?

ನೀಟ್ ಕೌನ್ಸೆಲಿಂಗ್ ನಲ್ಲಿ ಸೀಟು ಪಡೆಯುವುದು ಹೇಗೆ? – ಭಾರತದ ಟಾಪ್ ಮೆಡಿಕಲ್ ಕಾಲೇಜು ಯಾವುದು?

ನ್ಯೂಸ್ ಆ್ಯರೋ‌ : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET UG) ಫಲಿತಾಂಶ ಹೊರ ಬಿದ್ದಿದೆ. ಕೌನ್ಸೆಲಿಂಗ್ ಜುಲೈಯಿಂದ ಅಕ್ಟೋಬರ್ ನಡುವೆ ನಡೆಸಲಾಗುವುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

ಕೌನ್ಸೆಲಿಂಗ್ ದಿನಾಂಕ ಯಾವಾಗ ನಿರ್ಧಾರ?

ನೀಟ್ ಫಲಿತಾಂಶ ಪ್ರಕಟಗೊಂಡ ಒಂದು ತಿಂಗಳೊಳಗೆ ಕೌನ್ಸೆಲಿಂಗ್ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಲಿದೆ. ಈ ಬಳಿಕ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ(ಎಂಸಿಸಿ)ಶೇ. 15ರಷ್ಟು ಸೀಟು ಭರ್ತಿಗೆ ನೇಮಕಾತಿ ನಡೆಸಲಿದೆ. ಉಳಿದ ಶೇ. 85ರಷ್ಟು ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್ ಆಯೋಜಿಸಲಿದೆ.

ಸೀಟು ಹಂಚಿಕೆ

ದೇಶದಲ್ಲಿ 1,04,083 ಎಂ.ಬಿ.ಬಿ.ಎಸ್. ಮತ್ತು 27,868 ಬಿ.ಡಿ.ಎಸ್. ಸೀಟುಗಳಿವೆ. ನೀಟ್ ಕೌನ್ಸೆಲಿಂಗ್ ಮೂಲಕ ಹಂಚಿಕೆಯಾಗುವ ಬಿ.ಎಸ್.ಸಿ. ನರ್ಸಿಂಗ್ ಸೀಟುಗಳ ಸಂಖ್ಯೆ 1,000. ಈ ಬಾರಿ ನೀಟ್ ಗೆ ಹಾಜರಾದ 20.38 ಲಕ್ಷ ಅಭ್ಯರ್ಥಿಗಳ ಪೈಕಿ 11,45,976 ಮಂದಿಗೆ ಮಾತ್ರ ಅರ್ಹತೆ ಲಭಿಸಿದೆ.

ಎಂ.ಬಿ.ಬಿ.ಎಸ್. ಸೀಟು ಪಡೆಯುವುದು ಹೇಗೆ?

ಆಫ್ ಲೈನ್ ಮತ್ತು ಆನ್ ಲೈನ್ ಮೂಲಕ ಎಂ.ಬಿ.ಬಿ.ಎಸ್. ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಇದಕ್ಕೆ ಅರ್ಹತೆ ಪಡೆಯಲು ನೀಟ್ ಪರೀಕ್ಷೆಯಲ್ಲಿ ಕಟ್ ಆಫ್ ಅಂಕ ಪಡೆಯಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕಟ್ ಆಫ್ ಅಂಕ ಶೇ. 50ರಷ್ಟಿದ್ದರೆ ಮೀಸಲು ಅಭ್ಯರ್ಥಿಗಳಿಗೆ ಇದು ಶೇ. 40. ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಎಂಸಿಸಿ ಪೋರ್ಟಲ್ ನಲ್ಲಿ ನೋಂದಾಯಿಸಬೇಕು.

ಅಭ್ಯರ್ಥಿಯು ಕೌನ್ಸೆಲಿಂಗ್ ಶುಲ್ಕ ಪಾವತಿಸಬೇಕು ಹಾಗು ತನ್ನಿಚ್ಛೆಯ ಕೋರ್ಸ್, ಕಾಲೇಜುಗಳ ಆದ್ಯತೆಗಳನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳು ಭರ್ತಿ ಮಾಡಿದ ಆಯ್ಕೆಗಳು, ನೀಟ್ ಅಖಿಲ ಭಾರತ ಶ್ರೇಣಿ, ಮೀಸಲಾತಿ ಮತ್ತು ಸೀಟ್ ಮ್ಯಾಟ್ರಿಕ್ಸ್ ಆಧರಿಸಿ ಎಂಸಿಸಿ ಸಿಟು ಹಂಚಿಕೆ ಮಾಡಲಾಗುತ್ತದೆ.

ಭಾರತದ ಆಯ್ದ ಟಾಪ್ ಮೆಡಿಕಲ್ ಕಾಲೇಜುಗಳು..

ಆಲ್ ಇಂಡಿಯಾ ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ದಿಲ್ಲಿ, ಪೋಸ್ಟ್ ಗ್ರಾಜುಯೇಟ್ ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್, ಚಂಡೀಗಢ, ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ವೆಲ್ಲೂರು, ತಮಿಳುನಾಡು, ನಿಮ್ಹಾನ್ಸ್, ಬೆಂಗಳೂರು, ಜವಹಾರಲಾಲ್ ಇಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್, ಪಾಂಡಿಚೇರಿ, ಅಮೃತ ವಿಶ್ವ ವಿದ್ಯಾಪೀಠಂ, ಕೊಯಂಬತ್ತೂರು, ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬನಾರಸ್ ಹಿಂದೂ ವಿವಿ, ವಾರಣಾಸಿ, ಕಸ್ತೂರಿ ಬಾ ಮೆಡಿಕಲ್ ಕಾಲೇಜು, ಮಣಿಪಾಲ, ಉಡುಪಿ, ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *