ಗಣೇಶ ಹಬ್ಬಕ್ಕೆ ಮನೆಯಲ್ಲಿ ಸಿಹಿ ತಿಂಡಿ ಮಾಡ್ಬೇಕು ಅಂತ ಇದ್ದೀರಾ….? ಹಾಕಿದ್ರೆ ಇಲ್ಲಿದೆ ವೆರೈಟಿ ಮೋದಕ ಮಾಡುವ ವಿಧಾನ….
ನ್ಯೂಸ್ ಆ್ಯರೋ : ಇನ್ನೇನು ನಾಳೆ ವಿಘ್ನ ನಿವಾರಕನ ಹಬ್ಬ. ಎಲ್ಲ ಕಾರ್ಯಗಳಿಗೂ ಇವನೇ ಅಧಿಪತಿ. ಈತನನ್ನು ಪಾರ್ವತಿ ಪುತ್ರ, ವಿನಾಯಕ, ಸಂಕಷ್ಟಹರ, ಮೋದಕ ಪ್ರಿಯ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.
ನಮ್ಮೆಲ್ಲರ ಕಷ್ಟಗಳನ್ನು ಕಳೆದು ಬಾಳಿನಲ್ಲಿ ಸುಖ ಸಂತೋಷ ಹಾಗೂ ನೆಮ್ಮದಿಯನ್ನು ಕರುಣಿಸುವ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಮೋದಕ ಪ್ರಿಯನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತೇವೆ. ಹಾಗಾದ್ರೆ ಇಲ್ಲಿದೆ ವಿವಿಧ ತರಹದ ಮೋದಕ ಮಾಡುವ ವಿಧಾನ
ರವೆ ಮೋದಕ
ಬೇಕಾಗುವ ಸಾಮಾಗ್ರಿಗಳು
1. ಮೈದಾ ಹಿಟ್ಟು – 1 ಕಪ್
2. ಚಿರೋಟಿ ರವೆ – 1/4 ಕಪ್
3. ಉಪ್ಪು – ಚಿಟಿಕೆ
4. ಬೆಲ್ಲ
5. ಕೊಬ್ಬರಿ ತುರಿ – 1 ಕಪ್
6. ಏಲಕ್ಕಿ ಪುಡಿ
7. ಗಸಗಸೆ – 1 ಚಮಚ
8. ಎಳ್ಳು
9. ಗೋಡಂಬಿ, ಬಾದಾಮಿ – 3-4 ಚಮಚ
10. ಎಣ್ಣೆ
ಮೊದಲಿಗೆ ಒಂದು ಬೌಲ್‍ಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ. ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ. ಊರ್ಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಊರ್ಣ ಸೇರಿಸಿ ಮಧ್ಯಕ್ಕೆ ಮಡಚಿ ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಊರ್ಣ ಆಚೆ ಬಾರದಂತೆ ನೋಡಿಕೊಳ್ಳಿ. ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಈಗ ಬಿಸಿಬಿಸಿಯಾದ ಮೋದಕ ಸಿದ್ಧ.
ಸ್ಟೀಮ್ ಮೋದಕ
ಬೇಕಾಗುವ ಸಾಮಗ್ರಿ:
ಅಕ್ಕಿ ಹಿಟ್ಟು-1 ಕಪ್
ಕಾಯಿ ತುರಿ-1 ಕಪ್
ಬೆಲ್ಲದ ಪುಡಿ-1 ಕಪ್
ತುಪ್ಪ-2 ಚಮಚ
ಗಸಗಸೆ-1 ಚಮಚ
ಏಲಕ್ಕಿ ಪುಡಿ-ಸ್ವಲ್ಪ
ಉಪ್ಪು-1 ಚಿಟಿಕೆ.
ಒಂದು ಲೋಟ ನೀರನ್ನು ಚೆನ್ನಾಗಿ ಬಿಸಿ ಮಾಡಿ. ಅದಕ್ಕೆ ಅಕ್ಕಿ ಹಿಟ್ಟು ಕಲಸಿ, ಹಾಗೆಯೇ ಅದರೊಂದಿಗೆ ಉಪ್ಪು ಮತ್ತು ತುಪ್ಪ ಹಾಕಿ. ಆ ಬಳಿಕ ಈ ಮಿಶ್ರಣವನ್ನು ಗಂಟಾಗದಂತೆ ಚೆನ್ನಾಗಿ ತಿರುವಿ. ಇದಾದ ಮೇಲೆ ಏಲಕ್ಕಿ ಪುಡಿ , ಗಸೆಗಸೆ, ಬೆಲ್ಲ ಮತ್ತು ಕಾಯಿ ತುರಿ ಬೆರೆಸಿ ಹೂರಣ ಮಾಡಿ . ಸ್ವಲ್ಪೊತ್ತಿನ ಬಳಿಕ ಉಕ್ಕರಿಸಿದ ಹಿಟ್ಟನ್ನು ತುಪ್ಪ ಸವರಿ ಸಣ್ಣ ಉಂಡೆ ಮಾಡಿ ಚಪ್ಪಟೆಯನ್ನಾಗಿಸಿ. ಅದರೊಳಗೆ ಹೂರಣವಿಟ್ಟು ಎಲ್ಲಾ ತುದಿ ಸೇರಿಸಿ ಮುಚ್ಚಿ. ಇದನ್ನು ಸ್ಟೀಮಿಂಗ್ ಅಥವಾ ಹಬೆಯ ಮೂಲಕ ಬೇಯಿಸಬೇಕು.
Leave a Comment