ಮಿಸೆಸ್ ಅರ್ಥ್ ಕಿರೀಟ ಮುಡಿಗೇರಿಸಿಕೊಂಡ ಉಡುಪಿಯ ವೈದ್ಯೆ; 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟಕ್ಕೆ ಮುತ್ತಿಕ್ಕಿದ ಡಾ.ಶೃತಿ

SHRUTI
Spread the love

ನ್ಯೂಸ್ ಆ್ಯರೋ: ಉಡುಪಿಯ ಮಧುಮೇಹ ತಜ್ಞೆ ಡಾ.ಶೃತಿ ಬಲ್ಲಾಳ್ ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್ನ್ಯಾಶನಲ್ ಟೂರಿಸಂ – 2024 ಕಿರೀಟ ಗೆದ್ದುಕೊಂಡಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರುತಿ ಬಲ್ಲಾಳ್, ಮಂಗಳೂರು ವಲಯ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದೇನೆ. ನಂತರ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ ಅರ್ಥ್ ಇಂಟರ್ ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದು ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದೆ.

1307970 Ud D14 Shruthi

ನಂತರ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯು ಬಹಳ ಸವಾಲಿನದ್ದಾಗಿತ್ತು. ಇಲ್ಲಿ 10 ದಿನಗಳ ಕಾಲ ನಡೆದ ಸೌಂದರ್ಯದ ಜೊತೆಗೆ ಬುದ್ದಿಮತ್ತೆ, ದಯೆ, ಪರಿಸರದ ಬಗ್ಗೆ ತೋರಿದ ಬದ್ದತೆಯು ಜ್ಯೂರಿಗಳ ಗಮನ ಸೆಳೆದು ಈ ಪ್ರಶಸ್ತಿಯನ್ನು ಗೆದ್ದುಕೊಂಂಡಿದ್ದೇನೆ ಎಂದರು.

ಈ ಪ್ರಶಸ್ತಿಯೊಂದಿಗೆ ತನ್ನನ್ನು 5 ದೇಶಗಳಲ್ಲಿ ಪರಿಸರದ ಬಗ್ಗೆ ಜಾಗೃತಿಗಾಗಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ. ಈ ಅಂತರಾಷ್ಟ್ರೀಯ ಸ್ಪರ್ಧೆಗೆ ತನ್ನನ್ನು ಆಸ್ಟ್ರಲ್ ಮಿಸೆಸ್ ಇಂಡಿಯಾದ ಕರ್ನಾಟಕ ನಿರ್ದೇಶಕಿ ಪ್ರತಿಭಾ ಸೌನ್ಶಿಮಠ್ ಮಾರ್ಗದರ್ಶನ ಮಾಡಿದ್ದರು ಎಂದು ಅವರು ತಿಳಿಸಿದರು.

ಇನ್ನು ಈ ಮೂಲಕ ಕರಾವಳಿ ಬೆಡಗಿಯರ ಸಾಧನೆಯ ಪಟ್ಟಿಗೆ ಮತ್ತೊಂದು ‌ಗರಿ ಸೇರಿದಂತಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಈ ಬೆಡಗಿ ಸದ್ಯ ಸೌಂದರ್ಯ ಸ್ಪರ್ಧೆಯಲ್ಲಿ ವಿಶ್ವ ಗಮನ ಸೆಳೆದಿರೋದು ವಿಶೇಷವಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!