ಹೋಟೆಲ್ ಮಹಡಿಯಿಂದ ಬಿದ್ದು ಗಾಯಕ ಸಾವು; ಇದು ಕೊಲೆಯೋ? ಆತ್ಮಹತ್ಯೆಯೋ?
ನ್ಯೂಸ್ ಆ್ಯರೋ: ಅಕ್ಟೋಬರ್ 16 ರಂದು ಪ್ರಸಿದ್ಧ ಗಾಯಕರೊಬ್ಬರು ಹೋಟೆಲ್ ಮಹಡಿಯಿಂದ ಬಿದ್ದು ನಿಧನರಾಗಿದ್ದಾರೆ. ಪ್ರಸಿದ್ಧ ಬ್ಯಾಂಡ್ ‘ಒನ್ ಡೈರೆಕ್ಷನ್’ ನ ಮಾಜಿ ಗಾಯಕ ಲಿಯಾಮ್ ಪೇನ್ ಹೋಟೆಲ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ಗಾಯಕ ಲಿಯಾಮ್ ಪೇನ್ ಕೊನೆಯುಸಿರೆಳೆದಿದ್ದಾರೆ.
ತಮ್ಮ 31ನೇ ವಯಸ್ಸಿನಲ್ಲಿ ಜಗತ್ತಿಗೆ ಶಾಶ್ವತವಾಗಿ ವಿದಾಯ ಹೇಳಿದ್ರು. ಗಾಯಕನ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಅಂತರ ರಾಷ್ಟ್ರೀಯ ಮಾಧ್ಯಮನ ಗಾಯಕನ ಸಾವಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದೆ.
ಘಟನೆ ಬಗ್ಗೆ ಮಾಧ್ಯಮಗಳಿಗೆ ವರದಿ ನೀಡಿರುವ ಪೊಲೀಸರು ಲಿಯಾಮ್, ನಗರದ ಕಾಸಾ ಸರ್ ಹೋಟೆಲ್ನ ಮೂರನೇ ಮಹಡಿಯ ತನ್ನ ರೂಮಿನ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಅಕ್ಟೋಬರ್ 16ರ ಸಂಜೆ ಐದು ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು. ಲಿಯಾಮ್ ಮಾದಕ ದ್ರವ್ಯ ವ್ಯಸನಿಯಾಗಿದ್ದ, ಸಂಜೆ ಬಳಿಕ ವಿಚಿತ್ರವಾಗಿ ವರ್ತಿಸುತ್ತಿದ್ದನಂತೆ. ಲ್ಯಾಪ್ಟಾಪ್ನನ್ನು ಒಡೆದು ಹಾಕಿದ್ದ. ಡ್ರಗ್ಸ್ ಹೆಚ್ಚಾಗಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಲಿಯಾಮ್ ಅವರ ಹಠಾತ್ ನಿಧನಕ್ಕೆ ಹಲವು ಕಲಾವಿದರು ದುಃಖ ವ್ಯಕ್ತಪಡಿಸಿದ್ದಾರೆ. ಗಾಯಕನ ಹಠಾತ್ ನಿಧನದಿಂದ ಅನೇಕ ಸ್ಟಾರ್ಸ್ ಆಘಾತ ವ್ಯಕ್ತಪಡಿಸಿದ್ದಾರೆ. ಚಾರ್ಲಿ ಪುತ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ‘ನಾನು ಇದೀಗ ಆಘಾತದಲ್ಲಿದ್ದೇನೆ. ಲಿಯಾಮ್ ಯಾವಾಗಲೂ ನನಗೆ ತುಂಬಾ ಹತ್ತಿರದವ. ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ ಮೊದಲ ಪ್ರಮುಖರಲ್ಲಿ ಅವರು ಒಬ್ಬರು. ಅವನು ಹೋದನೆಂದು ನನಗೆ ನಂಬಲಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
Leave a Comment