ಬಿಗ್ ಬಾಸ್ ದೀಪಿಕಾ ದಾಸ್ ಸಂಸಾರದಲ್ಲಿ ಏನಾಯ್ತು ?; ಮದುವೆಯಾಗಿ 8 ತಿಂಗಳಿಗೆ ಅಳಿಯನ ಮೇಲೆ ಕೇಳಿ ಬಂತು ಆರೋಪ
ನ್ಯೂಸ್ ಆ್ಯರೋ: ಬಿಗ್ ಬಾಸ್ ಮಾಜಿ ಸ್ಪರ್ಧಿ, ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ಮದುವೆಯಾಗಿ 8 ತಿಂಗಳಾಗಿದೆ. ಇದೀಗ ದೀಪಿಕಾ ದಾಸ್ ತಾಯಿ ಪದ್ಮಲತಾ ಅವರಿಗೆ ಬೆದರಿಕೆ ಕರೆಗಳು ಬಂದಿದೆ. ಮಧ್ಯರಾತ್ರಿ ದೂರವಾಣಿ ಕರೆ ಮಾಡಿರುವ ದುಷ್ಕರ್ಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ದೀಪಿಕಾ ದಾಸ್ ತಾಯಿ ಪದ್ಮಲತಾ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ದೂರವಾಣಿ ಕರೆ ಮಾಡಿರುವ ಅಪರಿಚಿತರು ನಿಮ್ಮ ಅಳಿಯ ದೀಪಕ್ ಕುಮಾರ್ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ನಿಮ್ಮ ಅಳಿಯ ಬಡಾವಣೆಗಳನ್ನ ಮಾಡಿ ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಹೇಳಿದ್ದಾರೆ. ಹೀಗಾಗಿ ಯಶವಂತ್ ಬಿನ್ ಕೃಷ್ಣಮೂರ್ತಿ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ.
ಇದಾದ ಬಳಿಕ ನನ್ನ ಮಗಳು ದೀಪಿಕಾದಾಸ್ಗೂ ಕರೆ ಮಾಡಿ ಹೀಗೆ ಹೇಳಿದ್ದಾನೆ. ನಿಮಗೆ ತಿಳಿದಿಲ್ಲವೇ, ಪುನೀತ್ ಸಮಾಧಿ ಬಳಿ ಆಣೆ ಮಾಡಿ ಹೇಳಿ ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ನನ್ನ ಮಗಳು ಕೂಡ, ಕಾನೂನಾತ್ಮಕ ಕ್ರಮ ಕೈಗೊಳ್ಳಿ ಎಂದಿದ್ದಾಳೆ. ಮಾಧ್ಯಮಗಳಿಗೆ ಸುದ್ದಿ ನೀಡಿ ನಿಮ್ಮ ಹೆಸರಿಗೆ ಧಕ್ಕೆ ತರುತ್ತೇವೆ. ಹಣ ನೀಡಿ ಇಲ್ಲದಿದ್ರೆ ನಿಮ್ಮ ಹೆಸರು ಬರೆದಿಟ್ಟು ಸಾಯೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪದ್ಮಲತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಗಳ ಬಗ್ಗೆ ದೀಪಿಕಾ ದಾಸ್ ಪತಿ ದೀಪಕ್ ಅವರು ತಡೆಯಾಜ್ಞೆ ದಾವೆ ಹಾಕಿದ್ದು, ವಿಚಾರಣೆ ಹಂತದಲ್ಲಿದೆ. ಮಗಳು, ಅಳಿಯನ ಹೆಸರು ಬಳಸಿಕೊಂಡು ಅವರ ಘನತೆಗೆ ಕುತ್ತು ತರೋ ಪ್ರಯತ್ನ ಮಾಡಲಾಗುತ್ತಿದೆ. ಅವರು ಒಪ್ಪದ ಕಾರಣ ಪದೇ ಪದೇ ನನಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಯಶವಂತ ಎಂಬುವವರು ನಾನು ಹಣ ಕೊಡದಿದ್ರೆ ಸಾಯುವುದಾಗಿ ಬೆದರಿಕೆ ಹಾಕಿದ್ದಾನೆ. ಯಶವಂತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ಪದ್ಮಲತಾ ವಿನಂತಿ ಮಾಡಿಕೊಂಡಿದ್ದಾರೆ. ಪದ್ಮಲತಾ ಅವರ ದೂರಿನ ಹಿನ್ನೆಲೆಯಲ್ಲಿ ಆರೋಪಿಗಾಗಿ ಪೊಲೀಸರು ಹುಡಕಾಟ ನಡೆಸುತ್ತಿದ್ದಾರೆ.
Leave a Comment