ಶಕ್ತಿಪೀಠ ಆಶೀರ್ವಾದದಿಂದಾದ್ರು ಕಾಟೇರನಿಗೆ ಸಿಗುತ್ತಾ ಜೈಲಿನಿಂದ ಮುಕ್ತಿ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಟೆಂಪಲ್ ರನ್ …
ನ್ಯೂಸ್ ಆ್ಯರೋ : ದರ್ಶನ್ ಬಿಡುಗಡೆಗಾಗಿ ಕಾನೂನು ಹೋರಾಟದಲ್ಲಿ ಬ್ಯುಸಿಯಾಗಿರುವ ಪತ್ನಿ ವಿಜಯಲಕ್ಷ್ಮಿ ಇದೀಗ ದೇವರ ಮೊರೆ ಹೋಗಿದ್ದಾರೆ. ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಮೇಲಿನ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಬಿಗಿಗೊಂಡಿದೆ. ಈ ಚಾರ್ಜ್ ಶೀಟ್‌ನಲ್ಲಿ ಪ್ರಕರಣ ಸ್ಫೋಟಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಈ ಚಾರ್ಜ್ ಶೀಟ್ ಮಾಹಿತಿಗಳು ದರ್ಶನ್ ಗೆ ಜೈಲೂಟ ಖಾಯಂ ಎನ್ನುವಂತಿದೆ.
ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟ ಮುಂದುವರಿಸಿದ್ದಾರೆ. ದರ್ಶನ್ ಗೆ ಜೈಲಿಂದ ಮುಕ್ತಿ ಕೊಡಿಸಲು ಜಾಮೀನು ವಿಚಾರದ ಕುರಿತು ವಕೀಲರ ಬಳಿ ಚರ್ಚಿಸಿದ್ದು, ಎಲ್ಲಾ ಕಾನೂನು ಹೋರಾಟಗಳನ್ನು ಕೈಗೊಂಡಿದ್ದಾರೆ.
ಇದರ ಜೊತೆಗೆ ವಿಜಯಲಕ್ಷ್ಮಿ ದೇವರ ಮೊರೆ ಹೋಗಿದ್ದು, ಟೆಂಪಲ್ ರನ್ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ನವಚಂಡಿಕಾ ಹೋಮ ನಡೆಸಿದ್ದರು. ಇದರ ನಂತರ ಭೀಮನ ಅಮಾವಾಸ್ಯೆ ದಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ವಿಶೇಷ ಪೂಜೆ ಕೂಡಾ ಸಲ್ಲಿಸಿದ್ದರು. ಇದೀಗ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಇದು ಭಾರತದ ಪುರಾತನ ಶಕ್ತಿಪೀಠ. 51 ಶಕ್ತಿಪೀಠಗಳಲ್ಲಿ ಗುವಾಹಟಿ ಕಾಮಾಕ್ಯಾ ದೇವಾಲವೇ ಈ ಕಾರ್ಣಿಕದ ಕ್ಷೇತ್ರ. ಗುವಾಹಟಿ ನಗರದ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ಕಾಮಾಕ್ಷಿ ದೇವಿ ನೆಲಸಿದ್ದಾಳೆ. ಪವರ್ ಫುಲ್’ ಶಕ್ತಿ ದೇವತೆ ಎನ್ನಿಸಿಕೊಂಡಿರುವ ಕಾಮಾಕ್ಷಿ ಮಾತೆಯನ್ನು ಪೂಜಿಸುವ ಭಕ್ತಾಧಿಗಳ ಸಂಖ್ಯೆ ಎಣಿಕೆಗೆಬಾರದು. ಇಲ್ಲಿ ದೇವಿಯ ವಿಗ್ರಹವಿಲ್ಲ. ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತದೆ.
ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಬಹುತೇಕರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಬಾಲಿವುಡ್, ಸ್ಯಾಂಡಲ್ ವುಡ್ ಎನ್ನದೇ ದೇಶದ ಗಣ್ಯಾತಿ ಗಣ್ಯರು ಬಂದು ಈ ತಾಯಿಯ ದರ್ಶನ ಪಡೆಯುತ್ತಾರೆ.
Leave a Comment