ಕೊನೆಗೂ ತೆರೆಗೆ ಬರಲು ಸಜ್ಜಾದ ಎಮರ್ಜೆನ್ಸಿ; ರಿಲೀಸ್ ಡೇಟ್ ಅನೌನ್ಸ್ ಮಾಡಿದ ಕಂಗನಾ !
ನ್ಯೂಸ್ ಆ್ಯರೋ: ಎಮರ್ಜೆನ್ಸಿ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅಭಿನಯದ ಹಾಗೂ ನಿರ್ಮಾಣದ ಎಮರ್ಜೆನ್ಸಿ ಚಿತ್ರ ಸಾಕಷ್ಟು ವಿವಾದಗಳಿಗೆ ತುತ್ತಾಗಿತ್ತು. ಈ ಕಾರಣಕ್ಕಾಗಿ ವಿಳಂಬಗೊಂಡಿದ್ದ ಚಿತ್ರದ ಬಿಡಗಡೆಗೆ ಕೊನೆಗೂ ಇದೀಗ ದಿನಾಂಕ ನಿಗದಿಯಾಗಿದೆ.
1970ರ ದಶಕದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಘೋಷಿಸಿದ ತುರ್ತು ಪರಿಸ್ಥಿತಿ ಕುರಿತ ಸಿನಿಮಾ ಆದ ಕಾರಣ ಎಮರ್ಜೆನ್ಸಿ ಚಿತ್ರ ಬಾರೀ ಚರ್ಚೆಗೆ ಕಾರಣವಾಗಿತ್ತು. ಸೆನ್ಸಾರ್ ಮಂಡಳಿತ ಆಕ್ಷೇಪದಿಂದ ಚಿತ್ರ ಬಿಡುಗಡೆಗೆ ಅಡಚಣೆಯಾಗಿತ್ತು. ಆದ್ರೆ ಇದೀಗ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಜನವರಿ 17ಕ್ಕೆ ಚಿತ್ರ ಬಿಡುಗಡೆಯಾಗಿಲಿದೆ ಎಂದು ನಟಿ- ಸಂಸದೆ ಕಂಗನಾ ಹೇಳಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂಗನಾ, ರಾಷ್ಟ್ರದ ಅತ್ಯಂತ ಶಕ್ತಿಶಾಲಿ ಮಹಿಳೆಯ ಮಹಾಕಾವ್ಯ ಕಥೆ ಮತ್ತು ಭಾರತದ ಹಣೆಬರಹವನ್ನು ಬದಲಾಯಿಸಿದ ಕ್ಷಣ ಎಮರ್ಜೆನ್ಸಿ ಸಿನಿಮಾ 17/01/2025 ರಂದು ಚಿತ್ರಮಂದಿರಗಳಲ್ಲಿ ಅನಾವರಣಗೊಳ್ಳುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಚಿತ್ರದ ಬಿಡುಗಡೆಗೆ ಅನುಮತಿ ಸಿಗದ ಕಾರಣ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಬೇಕಿದ್ದ ದಿನಾಂಕವನ್ನು ಮುಂದೂಡಲಾಗಿತ್ತು. ಆ ನಂತರ ತಮ್ಮ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ನಿರ್ಮಾಪಕರು ಬಾಂಬೆ ಹೈಕೋರ್ಟ್‌ನ ಮೆಟ್ಟಿಲೇರಿದ್ರು.
ಸೆನ್ಸಾರ್ ಮಂಡಳಿ ಚಿತ್ರದಲ್ಲಿ ಮೂರು ದೃಶ್ಯಗಳನ್ನು ಕತ್ತರಿಸುವಂತೆ ಚಿತ್ರತಂಡಕ್ಕೆ ಸೂಚಿಸಿತ್ತು. ಆದರೆ ಕಂಗನಾ ಮತ್ತು ನಿರ್ಮಾಪಕರು ಆ ದೃಶ್ಯಗಳನ್ನು ಕತ್ತರಿಸಲು ಚಿತ್ರತಂಡ ಒಪ್ಪಿರಲಿಲ್ಲ. ಆ ನಂತರ ಬಾಂಬೆ ಹೈಕೋರ್ಟ್ ಪ್ರಕರಣ ಇತ್ಯರ್ಥವಾದ ಪರಿಣಾಮ ಸಿನಿಮಾಗೆ ಇದೀಗ ಸೆನ್ಸಾರ್ ಸರ್ಟಿಫಿಕೇಟ್ ದೊರೆತಿತ್ತು. ಅಂತಿಮವಾಗಿ ಇದೀಗ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ.
Leave a Comment