ಈ ರಕ್ತದ ಗುಂಪಿನವ್ರಿಗೆ ಕ್ಯಾನ್ಸರ್ ಸಾಧ್ಯತೆ ಬಹಳ ಕಡಿಮೆ..!
ನ್ಯೂಸ್ ಆ್ಯರೊ: ಮನುಷ್ಯನ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ರಕ್ತದ ಅವಶ್ಯಕತೆ ಇದೆ. ಆಮ್ಲಜನಕ ರಕ್ತದ ಮುಖಾಂತರ ಇಡೀ ದೇಹಕ್ಕೆ ಸರಬರಾಜಾಗುತ್ತದೆ. ಇದೆಲ್ಲಾ ಸರಿಯಾಗಿ ನಡೆಯಬೇಕಾದ್ರೆ ರಕ್ತದ ಪಾತ್ರ ಬಹಳಷ್ಟು ಮುಖ್ಯ…!
ಈ ಸುದ್ದಿಯನ್ನು ಸಹ ಓದಿ: ಒಂದು ದೇಶ – ಒಂದು ಚುನಾವಣೆಗೆ ಕೋವಿಂದ್ ಸಮಿತಿ ಶಿಫಾರಸ್ಸುಗಳು
ಮುಖ್ಯವಾಗಿ ಮಾನವನಲ್ಲಿ ನಾಲ್ಕು ರೀತಿಯ ರಕ್ತದ ಗುಂಪುಗಳಿವೆ – ಎ, ಬಿ, ಎಬಿ ಮತ್ತು ಒ. ರಕ್ತದ ಗುಂಪು ಒ ಅನ್ನು ಸಾರ್ವತ್ರಿಕ ದಾನಿ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಈ ರಕ್ತದ ಗುಂಪು ಹೊಂದಿರುವ ಜನರು ಇತರ ಯಾವುದೇ ರಕ್ತದ ಗುಂಪು ಹೊಂದಿರುವ ಜನರಿಗೆ ರಕ್ತದಾನ ಮಾಡಬಹುದು. ಅಪಘಾತದ ಸಮಯದಲ್ಲಿ ಒಂದೇ ರಕ್ತದ ಗುಂಪು ಕಂಡುಬರದಿದ್ದಾಗ, ಒ ರಕ್ತದ ಗುಂಪನ್ನು ನೀಡುವ ಮೂಲಕ ಯಾವುದೇ ರೋಗಿಯ ಜೀವವನ್ನು ಉಳಿಸಬಹುದು.ಆದರೆ ಈ ರಕ್ತದ ಗುಂಪುಗಳಲ್ಲಿ ಕ್ಯಾನ್ಸರ್ ವಿರೋಧಿ ರಕ್ತಗುಂಪು ಸಹ ಇದೆ ಎಂದರೆ ತಪ್ಪಾಗೊಲ್ಲ, ಸಂಶೋಧಕರೆ ಇ ವಿಷಯವನ್ನ ಖುದ್ದು ಬಟಾಬಯಲು ಮಾಡಿದ್ದಾರೆ..
“ಒ” ರಕ್ತದ ಗುಂಪು ಹೊಂದಿರುವ ಜನರು ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೃದ್ರೋಗ, ಕರುಳಿನ ಕ್ಯಾನ್ಸರ್, ಒತ್ತಡ ಸೇರಿದಂತೆ ಅನೇಕ ರೀತಿಯ ಕಾಯಿಲೆಗಳ ಅಪಾಯವನ್ನು ಕಡಿಮೆ ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ನ ತಜ್ಞರು ನಡೆಸಿದ ಅಧ್ಯಯನದಲ್ಲಿ ಒ ರಕ್ತದ ಗುಂಪು ಹೊಂದಿರುವ ಜನರು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಸರಿಯಾದ ಆಹಾರ ಪದ್ದತಿ, ಯೋಗ, ಲಘು ವ್ಯಾಯಾಮ ಇವೆಲ್ಲವು ಸಹ ಉತ್ತಮ ಆರೋಗ್ಯದ ಬುನಾದಿಗಳು. ಅನಗತ್ಯ ಆಹಾರಪದ್ದತಿ ಅಶಿಸ್ತಿನ ಜೀವನ ಎಂದಿಗಾದರು ಕಷ್ಟ ಕಟ್ಟಿಟ್ಟಬುತ್ತಿ ಆದ್ದರಿಂದ ದೇಹದ ಆರೋಗ್ಯದತ್ತ ಗಮನ ಹರಿಸಿ.
Leave a Comment