ತ್ರಿವಿಕ್ರಮ್ ಮೇಲೆ ಭವ್ಯಾಗೆ ನಿಜಕ್ಕೂ ಲವ್​ ಆಗಿದ್ಯಾ?; ರಹಸ್ಯ ಬಿಚ್ಚಿಟ್ಟ ಚೈತ್ರಾ ಕುಂದಾಪುರ

Chiaitra
Spread the love

ನ್ಯೂಸ್ ಆ್ಯರೋ: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಭಾನುವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಚೈತ್ರಾ ಕುಂದಾಪುರ ಆಚೆ ಬಂದಿದ್ದಾರೆ. 105 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಮನೆಗೆ ವಾಪಸ್​ ಆಗಿದ್ದಾರೆ.

ಇನ್ನೂ, ಬಿಗ್​ಬಾಸ್​ ಮನೆಯಿಂದ ಆಚೆ ಬರುತ್ತಿದ್ದಂತೆ ಖಾಸಗಿ ವಾಹಿನಿಯ​ ಸಂದರ್ಶನದಲ್ಲಿ ಭಾಗಿಯಾಗಿ ಕೆಲವೊಂದು ವಿಚಾರದ ಬಗ್ಗೆ ಹಾಗೂ ಈ ಹೊಸ ಜರ್ನಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ತ್ರಿವಿಕ್ರಮ್​ ಹಾಗೂ ಭವ್ಯಾ ಗೌಡ ಅವರ ಬಗ್ಗೆ ​ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿಗ್​ಬಾಸ್​ಗೆ ಬಂದ ಮೊದಲ ದಿನದಿಂದ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್​ ಮಧ್ಯೆ ಉತ್ತಮ ಬಾಂಧವ್ಯ ಇತ್ತು.

ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಭವ್ಯಾ ತ್ರಿವಿಕ್ರಮ್​ ಅವರನ್ನು ಕೇಳುತ್ತಾರೆ. ಟಾಸ್ಕ್​ ಮೂಗಿಸಿದ ಬಳಿಕವು ಮತ್ತೆ ಭವ್ಯಾ ತ್ರಿವಿಕ್ರಮ್ ಕುಳಿತುಕೊಂಡು ಮಾತಾಡುತ್ತಾರೆ. ಜೊತೆಗೆ ಅವರಿಗೆ ಬಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಆದ್ರೆ ಈ ಇಬ್ಬರ ಮಧ್ಯೆ ನಿಜಕ್ಕೂ ಲವ್​ ಇದ್ಯಾ ಎಂಬುವುದರ ಬಗ್ಗೆ ಚೈತ್ರಾ ಕುಂದಾಪುರ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತಾಡಿದ ಅವರು, ಇದರ ಬಗ್ಗೆ ಮಾತಾಡುವುದು ಎಷ್ಟು ಸರಿ ಅಥವಾ ತಪ್ಪು ಅಂತ ಗೊತ್ತಿಲ್ಲ. ಅವರ ಬದುಕಿನ ಪ್ರಶ್ನೆ ಆಗಿರುತ್ತೆ. ಆದ್ರೆ ಭವ್ಯಾ ಹತ್ತಿರ ತ್ರಿವಿಕ್ರಮ್ ಮಾತಾಡಿರುವುದು ಟೆಲಿಕಾಸ್ಟ್​ ಆಗಿರಲಿಕ್ಕಿಲ್ಲ. ​ಭವ್ಯಾ ಹತ್ತಿರ ತ್ರಿವಿಕ್ರಮ್ ಮಾತಾಡಿದ ಮೇಲೆ ನನ್ನ ಬಳಿ ಇಡೀ ರಾತ್ರಿ ಮಾತಾಡಿದ್ದಾರೆ. ಆಗ ತ್ರಿವಿಕ್ರಮ್​ ಇಷ್ಟು ದಿನಗಳ ಬಳಿಕ ನಾನು ಭವ್ಯಾ ಬಳಿ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದೀನಿ. ಆಟಕ್ಕೆ ಇದು ಅಡ್ಡಿ ಆಗಬಾರದು ಅಂತ ಸುಮ್ನೆ ಇದ್ದೇ. ಆಟಕ್ಕೆ ಅಡ್ಡಿ ಕೂಡ ಆಗೋದಿಲ್ಲ ಅಕ್ಕ.

ಬಿಗ್​ಬಾಸ್​ನಿಂದ ಆಚೆ ಹೋದ ಮೇಲೂ ಅವರಿಗೆ ಒಂದು ವಾರ ಸಮಯ ಕೊಡುತ್ತೇನೆ. ಅಲ್ಲಿಂದ ಆಚೆಗೆ ಏನಾಗುತ್ತೆ ಅಂತ ಗೊತ್ತಿಲ್ಲ ಅಂತ ಹೇಳಿದ್ದಾರಂತೆ. ಈ ವಿಚಾರ ನಿಮಗೆ ಅವಶ್ಯಕತೆ ಇದ್ಯಾ, ಇಂತಹ ಕೊನೆಯ ಸಂದರ್ಭದಲ್ಲಿ ನಿಮಗೆ ಇದೆಲ್ಲಾ ಬೇಕಾ ಅಂತ ಪ್ರಶ್ನೆ ಮಾಡಿದ್ದೇ. ಆಗ ತ್ರಿವಿಕ್ರಮ್​, ನಾನು ಈ ವಿಚಾರವನ್ನು ಹೇಳಿಕೊಳ್ಳಲಿಲ್ಲ ಅಂದ್ರೆ ಮುಂದೆ ಆಟಕ್ಕೆ ಯೂಸ್​ ಮಾಡಿಕೊಂಡ ಹಾಗೇ ಆಗುತ್ತೆ ಅದ್ಕೆ ನಾನು ಹೇಳಿದ್ದೇನಿ ಅಂತ ಎಂದಿದ್ದಾರಂತೆ.

Leave a Comment

Leave a Reply

Your email address will not be published. Required fields are marked *

error: Content is protected !!