ಕೆನಡಾ ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ: ಈ ನಿರ್ಧಾರಕ್ಕೆ ಕಾರಣವೇನು ?
ನ್ಯೂಸ್ ಆ್ಯರೋ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಮಂತ್ರಿಯಾಗಿ ಸುಮಾರು 1 ದಶಕದ ಆಳ್ವಿಕೆ ನಂತರ ಪ್ರಧಾನಿ ಸ್ಥಾನಕ್ಕೆ ಜ.06 ರ ರಂದು ರಾಜೀನಾಮೆ ನೀಡಿದ್ದಾರೆ. ಕೆನಡಾದಲ್ಲಿ ಅವರ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದು ಅವರ ಸರ್ಕಾರದ ಹಣಕಾಸು ಸಚಿವರ ಹಠಾತ್ ನಿರ್ಗಮನದ ನಂತರ ಅವರ ಸರ್ಕಾರದೊಳಗೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯದ ಸಂಕೇತವಾಗಿದೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇಂದು ತಮ್ಮ ಪಕ್ಷದೊಳಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ನಡುವೆ ರಾಜೀನಾಮೆ ಘೋಷಿಸಿದರು. “ಪಕ್ಷವು ತನ್ನ ಮುಂದಿನ ನಾಯಕನನ್ನು ದೃಢವಾದ, ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿದ ನಂತರ ನಾನು ಪ್ರಧಾನ ಮಂತ್ರಿಯಾಗಿ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ.
ಮುಂದಿನ ಚುನಾವಣೆಯಲ್ಲಿ ಈ ದೇಶವು ಇನ್ನೂ ಉತ್ತಮ ಆಯ್ಕೆಗೆ ಅರ್ಹವಾಗಿದೆ ಎಂದು ನಾನು ಭಾವಿಸುತ್ತೇನೆ. ಆ ಚುನಾವಣೆಯಲ್ಲಿ ನಾನು ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಿದೆ ಎಂದು ಟ್ರುಡೊ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ತಮ್ಮ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಜಸ್ಟಿನ್ ಟ್ರುಡೊ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಲಿಬರಲ್ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಟ್ರುಡೊ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 53 ವರ್ಷದ ಟ್ರುಡೊ ಅವರು ನವೆಂಬರ್ 2015ರಲ್ಲಿ ಕೆನಡಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಎರಡು ಬಾರಿ ಮರುಚುನಾವಣೆಯಲ್ಲಿ ಗೆದ್ದರು. ಈ ಮೂಲಕ ಕೆನಡಾದ ದೀರ್ಘಾವಧಿಯ ಪ್ರಧಾನ ಮಂತ್ರಿಗಳಲ್ಲಿ ಟ್ರುಡೊ ಕೂಡ ಒಬ್ಬರಾಗಿದ್ದಾರೆ.
Leave a Comment