ದೆಹಲಿ ವಿಧಾನಸಭಾ ಚುನಾವಣೆ​​ಗೆ ಇಂದು ದಿನಾಂಕ ನಿಗದಿ; ಮಧ್ಯಾಹ್ನ 2 ಗಂಟೆಗೆ ಮಹತ್ವದ ಘೋಷಣೆ

delhi election
Spread the love

ನ್ಯೂಸ್ ಆ್ಯರೋ: ದೆಹಲಿ ವಿಧಾನಸಭಾ ಚುನಾವಣಾ ಅಖಾಡಕ್ಕೆ ಮತ್ತಷ್ಟು ರಂಗು ನೀಡಲು ಚುನಾವಣಾ ಆಯೋಗ ಮುಂದಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಚುನಾವಣೆ ದಿನಾಂಕ ನಿಗಧಿ ಮಾಡಲು ನಿರ್ಧರಿಸಿದೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಸದ್ಯ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಆಡಳಿತದಲ್ಲಿದೆ. ಸತತ ಮೂರನೇ ಬಾರಿಗೆ ದೆಹಲಿ ಚುಕ್ಕಾಣಿ ಹಿಡಿಯಲು ಅರವಿಂದ್ ಕೇಜ್ರಿವಾಲ್ ರಾಜಕೀಯ ಗಾಳ ಉರುಳಿಸುತ್ತಿದ್ದಾರೆ. ಮತ್ತೊಂದು ಕಡೆ ಕೇಜ್ರಿವಾಲ್​ಗೆ ಬಿಗ್ ಶಾಕ್ ನೀಡಿ, ಆಡಳಿತಕ್ಕೆ ಬರಲು ಬಿಜೆಪಿ ಸರ್ಕಸ್ ನಡೆಸ್ತಿದೆ.

ಅದೇ ರೀತಿ ಈ ಎರಡೂ ಪಕ್ಷಗಳಿಗೂ ಕಾಂಗ್ರೆಸ್​ ಪ್ರಬಲ ಪೈಪೋಟಿ ನೀಡ್ತಿದೆ. ಹಾಗಾಗಿ ಈ ಬಾರಿಯ ದೆಹಲಿ ದಂಗಲ್​​ ಭಾರೀ ಕುತೂಹಲ ಮೂಡಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!