“ಬ್ರಾಹ್ಮಿಣ್ ಜೀನ್” ಹ್ಯಾಷ್‌ಟ್ಯಾಗ್ ಟ್ರೆಂಡ್ ಯಾಕೆ ? : ಮತ್ತೆ ಸುದ್ದಿಯಲ್ಲಿ ಅನುರಾಧಾ ತಿವಾರಿ
ನ್ಯೂಸ್ ಆ್ಯರೋ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅನುರಾಧಾ ತಿವಾರಿ ಎನ್ನುವ ಯುವತಿ ಮತ್ತೆ ಟ್ರೆಂಡ್‌ನಲ್ಲಿ ಇದ್ದಾರೆ. ಅನುರಾಧಾ ತಿವಾರಿ ಈಚೆಗೆ ಬ್ರಾಹ್ಮಿಣ್ ಜೀನ್ಸ್'(ಬ್ರಾಹ್ಮಣ ವಂಶವಾಹಿ) ಹ್ಯಾಷ್ ಟ್ಯಾಗ್‌ನಿಂದ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದರು. ಅವರ ಹ್ಯಾಷ್‌ಟ್ಯಾಗ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ವಿವಾದ ತಣ್ಣಗಾಗುವ ಮೊದಲೇ ಅವರು ಮತ್ತೊಂದು ಹೊಸ ಕಿಡಿಯನ್ನು ಹೊತ್ತಿಸಿದ್ದಾರೆ.
ಹೌದು. . ಅನುರಾಧಾ ತಿವಾರಿ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. “ನನ್ನ ಕಾರಿಗೆ ಬ್ರಾಹ್ಮಿಣ್ ಜೀನ್ಸ್'(ಬ್ರಾಹ್ಮಣ ವಂಶವಾಹಿ) ಎನ್ನುವ ಸ್ಟಿಕ್ಕರ್ ಅಂಟಿಸಿದ್ದೇನೆ” ಎಂದು ಪೋಟೋ ಶೇರ್ ಮಾಡಿದ್ದಾರೆ. ಮುಂದುವರಿದು ಅರಿವಿನಿಂದ ಬೆಳೆದು, ಶಕ್ತಿಯಿಂದ ಬೆಳೆದು ಹಾಗೂ ಹಿಂದೂತ್ವದ ದ್ವೀಪ ಹೊತ್ತು ಸಾಗುತ್ತಿದ್ದೇವೆ. ಬ್ರಾಹ್ಮಿಣ ಸಮುದಾಯಕ್ಕೆ ಸೇರಿರುವುದಕ್ಕೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ತನ್ನ ಕಾರಿನ ಮೇಲೆ ಬ್ರಾಹ್ಮಿಣ್ ಜೀನ್ ಎನ್ನುವ ಸ್ಟಿಕ್ಕರ್ ಅಂಟಿಸಿರುವುದಕ್ಕೆ ಜಲತಜ್ಞ ಹಾಗೂ ಫ್ರೋಫೆಸರ್ ಡಾ.ಕ್ಷಿತಿಜ್ ಅರಸ್ ಅವರು ಕಾಲೆಳೆದಿದ್ದಾರೆ. ಅದು ಜಪಾನ್ ಮೇಡ್ ಕಾರ್, ಡಿಸೈನರ್ ಜರ್ಮನ್ ಔಟ್‌ಲುಕ್ಕರ್, ಫ್ರೆಂಚ್‌ನ ಟೈರ್, ಜೈನ್ ಫ್ಯಾಕ್ಟರಿಯಲ್ಲಿ ತಯಾರಿಸಿದ ಸ್ಟೀಲ್, ದಲಿತ ಸ್ಪೇರ್ ಪಾರ್ಟ್ ಅಸೆಂಬ್ಲರ್ ಹಾಗೂ ಅರಬ್ ದೇಶಗಳ ಪೆಟ್ರೋಲ್‌ನಿಂದ ಚಲಿಸುವ ಕಾರಿಗೆ ಬ್ರಾಹ್ಮಿಣ್ ಜೀನ್ ಎನ್ನುವ ಸ್ಟಿಕರ್.. ವಂಡರ್‌ಫುಲ್ ಎಂದು ವ್ಯಂಗ್ಯವಾಡಿದ್ದಾರೆ.
ಈ ಪೋಸ್ಟರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಪೋಸ್ಟ್‌ಗೆ 3.7ಕೆ ಜನ ಕಾಮೆಂಟ್ ಮಾಡಿದ್ದರೆ. 4.7ಕೆ ಜನ ಈ ಟ್ವೀಟ್‌ಅನ್ನು ರೀ ಪೋಸ್ಟ್ ಮಾಡಿದ್ದಾರೆ.ಅನುರಾಧಾ ತಿವಾರಿ ಎನ್ನುವ ಯುವತಿ ಮೂಲತಃ ಹೊಸ ದೆಹಲಿಯ ಯುವತಿ. ಈಕೆ ಮೆಕಾನಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ವಿಶಿಷ್ಟ ಉದ್ಯಮಿ ಎನ್ನುವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಕಂಟೆಂಟ್ ಮಾರ್ಕೆಟಿಂಗ್‌ಗೆ ಸಂಬಂಧಪಟ್ಟಂತೆ ಖಾಸಗಿ ಕಂಪನಿಯೊಂದರಲ್ಲಿ ಸಿಇಒ ಆಗಿದ್ದಾರೆ.
Leave a Comment