ವಕ್ಫ್ ಕಾಯ್ದೆಗೆ ಕೈ ಹಾಕಿದ್ರೆ ನಿಮ್ಮ ಪೀಳಿಗೆ ಇರಲ್ಲ ಹುಷಾರ್: SDPI ಕಾರ್ಯಕರ್ತ ಇಮ್ರಾನ್ ಬೆದರಿಕೆ..!

Spread the love
Uyuy

ನ್ಯೂಸ್ ಆ್ಯರೋ : ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರ ಇಡೀ ರಾಷ್ಟ್ರಾದ್ಯಂತ ಸದ್ದು ಮಾಡ್ತಿರೋ ವಿಚಾರ. ಈ ಕುರಿತು ಬಹಳಷ್ಟು ರಾಜಕೀಯ ನಿಪುಣರು, ಧುರೀಣರು, ಚಿಂತಕರು ತಮ್ಮ ಪರ ವಿರೋಧ ವ್ಯಾಖ್ಯಾನಗಳನ್ನ ನೀಡ್ತಾನೆ ಇದ್ದಾರೆ ಆದ್ರೆ SDPI ಕಾರ್ಯಕರ್ತ ಇಮ್ರಾನ್ ವಕ್ಫ್ ಕಾಯ್ದೆಗೆ ಅಡ್ಡಿಪಡಿಸಿದ್ರೆ ನಿಮ್ಮ ಪೀಳಿಗೆ ಇಲ್ಲದಂತೆ ಮುಸ್ಲಿಂ ಸಮುದಾಯ ಮಾಡುತ್ತೆ ಅಂತ ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಯಾರ್ಯಾರಿಗೆ..?

ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ಕಾರ್ಯಕರ್ತ ಇಮ್ರಾನ್, ‘ಭಾಜಪ ಮತ್ತು ಆರ್.ಎಸ್.ಎಸ್ ಸಂಘಕ್ಕೆ, ವಕ್ಫ್ ಕಾಯ್ದೆಗೆ ಅಡ್ಡಿಪಡಿಸಿದರೆ ಮುಸ್ಲಿಂ ಸಮುದಾಯದವರು ನಿಮ್ಮ ಕಥೆ ಮುಗಿಸುತ್ತಾರೆ ಎಂದು ಬೆದರಿಕೆಯೊಡ್ಡಲಾಗಿದೆ.

ಮುಂದುವರೆದು ಮುಸ್ಲಿಂ ಸಮಾಜವು ನಿಮ್ಮನ್ನು ಅಥವಾ ನಿಮ್ಮ ಪೀಳಿಗೆಯನ್ನು ಕೊನೆಗೊಳಿಸುತ್ತದೆ. ‘ನಾಗ್ಪುರದಿಂದ ಸಾವರ್ಕರ್‌ಗಳ ತಲೆಮಾರು ಬಂದಿದ್ದರೂ ಮುಸ್ಲಿಮರ ವಕ್ಫ್ ಆಸ್ತಿಯನ್ನು ಮುಟ್ಟಲು ಸಾಧ್ಯವಿಲ್ಲ’, ಎಂದು ಅವರು ಹೇಳಿದರು.

ಇಮ್ರಾನ್‌ ಮಾತು ಮುಂದುವರೆಸಿ, ಪ್ರಸ್ತುತ ಮುಸ್ಲಿಂ ಸಮುದಾಯವು ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದೆ; ಆದರೆ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತಂದಾಗ, ಮಹಿಳೆಯರು ನಿಮ್ಮನ್ನು ಸರಿಯಾಗಿ ಬೆಂಡೆತ್ತಿದ್ದರು. ಈಗ ಮಕ್ಕಳೂ ಮೈದಾನಕ್ಕೆ ಬಂದರೆ ನೀವು ಯಾವ ದೇಶದಿಂದ ಬಂದಿದ್ದೀರಿ ಎಂಬುದು ನಿಮಗೆ ಗೊತ್ತಾಗಲ್ಲ ಮತ್ತು ಮುಸ್ಲಿಂ ಸಮಾಜವು ಅವರನ್ನು ಕೊನೆಗೊಳಿಸುತ್ತಾರೆ, ಎಂದು ಭಾಜಪ ಮತ್ತು RSS ಸಂಘಕ್ಕೆ ಬೆಂಡೆತ್ತಿ ಬಿಡ್ತೀವಿ ಅಂತ ಎಚ್ಚರಿಸಿದ್ದಾನೆ.

ಈ ಸುದ್ದಿಯನ್ನು ಸಹ ಓದಿ: ರಾಜ್ಯ ಸರ್ಕಾರ v/s ರಾಜ್ಯಪಾಲರ ಕದನಕ್ಕೆ ಬಿಗ್ ಟ್ವಿಸ್ಟ್: ಪುನಃ ಕಿಚ್ಚಿನ ಪತ್ರ ಬರೆದ ರಾಜ್ಯಪಾಲ ಗೆಹ್ಲೋಟ್..!

ಕೋಮುವಾದವನ್ನ ಹುಟ್ಟು ಹಾಕುವ ಹಾಗೂ ಸೌಹಾರ್ದ ಭಾವನೆಗೆ ಧಕ್ಕೆ ತರುವ ಇಂತ ಕೋಮು ಕ್ರಿಮಿಗಳನ್ನ ಆದಷ್ಟು ಬೇಗ ಮಟ್ಟ ಹಾಕಬೇಕಿದೆ ಇಲ್ಲದೆ ಹೋದಲ್ಲಿ ಮುಂದೆ ಇದರಿಂದಾಗುವ ಅನಾಹುತಗಳು ಬಹಳ ಭಯಾನಕ..

Leave a Comment

Leave a Reply

Your email address will not be published. Required fields are marked *

error: Content is protected !!