ಕೇವಲ‌ 2.5 ವರ್ಷದಲ್ಲಿ 100,000 ಯುನಿಟ್ ಉತ್ಪಾದನೆ – ವಾಹನೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಮಹೀಂದ್ರಾ‌ ಥಾರ್..!!

ಕೇವಲ‌ 2.5 ವರ್ಷದಲ್ಲಿ 100,000 ಯುನಿಟ್ ಉತ್ಪಾದನೆ – ವಾಹನೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಮಹೀಂದ್ರಾ‌ ಥಾರ್..!!

ನ್ಯೂಸ್ ಆ್ಯರೋ : ವಾಹನೋದ್ಯಮ ಅಂದರೆ ಹಾಗೆಯೇ.. ಅಲ್ಲಿ ಯಾವ ವಾಹನಕ್ಕೂ ಶಾಶ್ವತವಾದ ಸ್ಥಾನ ಎಂಬುದಿಲ್ಲ. ದಿನಕ್ಕೊಂದು ಅತ್ಯದ್ಭುತ ವಾಹನಗಳ ಆವಿಷ್ಕಾರವಾಗುತ್ತಲೇ ಇರುತ್ತದೆ ಮತ್ತು ಆಧುನಿಕ ಜಗತ್ತಿಗೆ ತಕ್ಕಂತಹ ವಾಹನಗಳು ಲಗ್ಗೆ ಇಡುತ್ತಲೇ ಇರುತ್ತದೆ. ಸದ್ಯಕ್ಕೆ,
ಭಾರತೀಯ ವಾಹನ‌ ಮಾರುಕಟ್ಟೆಯಲ್ಲಿ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್ ಬಹುಬೇಡಿಕೆಯನ್ನು ಪಡೆದುಕೊಂಡಿದ್ದು ಇದರ ಆಕರ್ಷಕ ಲುಕ್, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಪ್ರತಿ ವಾಹನ‌ ಪ್ರೀಯರನ್ನು ಸೆಳೆಯುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು ಆ ಬಗೆಗಿನ ವರದಿ ಇಲ್ಲಿದೆ.

ಪ್ರಮುಖ ವಾಹನ‌ ಉತ್ಪಾದನಾ ಕಂಪೆನಿ ಎನಿಸಿಕೊಂಡಿರುವ ಮಹೀಂದ್ರಾ, ಕಳೆದ 2.5 ವರ್ಷಗಳಲ್ಲಿ ಬರೋಬ್ಬರಿ 100,000 ಯುನಿಟ್ ಥಾರ್ ಎಸ್‌ಯುವಿಗಳನ್ನು ಉತ್ಪಾದಿಸುವ ಮೂಲಕ ಅತಿದೊಡ್ಡ ಹೊಸಾ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಬೆಳವಣಿಗೆಯಿಂದಲೇ ಮಹೀಂದ್ರಾ ಥಾರ್ ಎಷ್ಟರಮಟ್ಟಿಗೆ ಜನಪ್ರಿಯತೆಯನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಅಚ್ಚರಿಯೆಂದರೆ ಈ ಎಸ್‌ಯುವಿಯನ್ನು ಬಹುತೇಕ ಯುವ ಜನತೆಯೇ ಇಷ್ಟಪಟ್ಟು ಖರೀದಿಸುತ್ತಿದ್ದು, ಭಾರತದ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.

ಮಹೀಂದ್ರಾ ಕಂಪನಿ ಬಹುನಿರೀಕ್ಷಿತ ಥಾರ್, ಲಾಂಚ್ ಆದ ಕೆಲವೇ ದಿನಗಳಲ್ಲಿ 15,000ಕ್ಕೂ ಹೆಚ್ಚು ಬುಕಿಂಗ್‌ನ್ನು ಪಡೆದುಕೊಂಡಿತ್ತು. ಇದರೊಂದಿಗೆ ಮಾರುಕಟ್ಟೆಗೆ ಬಂದ ಮೊದಲ 12 ತಿಂಗಳಲ್ಲಿಯೇ 75,000ಕ್ಕೂ ಅಧಿಕ ಬುಕಿಂಗ್‌ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಆಫ್-ರೋಡ್ ಎಸ್‌ಯುವಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಥಾರ್ ಕೊಂಡುಕೊಳ್ಳಲು ಇವತ್ತು ಬುಕ್ ಮಾಡಿದರೂ ಕನಿಷ್ಠವೆಂದರೂ ನಾಲ್ಕು ತಿಂಗಳು ಕಾಯಬೇಕು ಅನ್ನುವುದು ಅಚ್ಚರಿಯ ಸಂಗತಿ.

ಈ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಮಹೀಂದ್ರಾ & ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಅವರು, ‘ಥಾರ್‌ ಎಸ್‌ಯುವಿಯ ಉತ್ಪಾದನೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಸಾಧಿಸಿರುವುದು ಸಂತೋಷದ ವಿಚಾರ. ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದು, ವಾರಾಂತ್ಯದಲ್ಲಿ ಲಾಂಗ್ ಡ್ರೈವ್ ಹೋಗುವವರಿಗೆ ಹೇಳಿ ಮಾಡಿಸಿದಂತಿದ್ದು ಹೆಚ್ಚಿನ ಜನರ ಮನಗೆದ್ದಿದೆ. ನಮ್ಮ ಗ್ರಾಹಕರು ಥಾರ್‌ ಮೇಲಿಟ್ಟಿರುವ ನಂಬಿಕೆ ಹಾಗೂ ಪ್ರೀತಿಗೆ ಕೃತಜ್ಞರಾಗಿರುತ್ತೇವೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಥಾರ್ 3 ಡೋರ್ ಹೊಂದಿದ್ದು, ರೂ.9.99 ಲಕ್ಷದಿಂದ ರೂ.16.49 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಒಟ್ಟು ಆರು ಬಣ್ಣಗಳ ಆಯ್ಕೆಯಲ್ಲಿ AX(O) ಹಾಗೂ LX ಎಂಬ ಎರಡು ರೂಪಾಂತರಗಳಲ್ಲಿ ದೊರೆಯಲಿದೆ. ಸದ್ಯ, ಮಹೀಂದ್ರಾ ಕಂಪನಿ ಈ ಎಸ್‌ಯುವಿಯ 5 ಡೋರ್ ಆವೃತ್ತಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

ಈ ವಾಹನದ 3 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ನೋಡುವುದಾದರೆ, ಇದು ‘ರೇರ್ ವೀಲ್ ಡ್ರೈವ್ ವೇರಿಯೆಂಟ್’ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 118 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 15.2 kmpl ಮೈಲೇಜ್ ನೀಡಲಿದೆ.

ಮಹೀಂದ್ರಾ ಥಾರ್ ಫೋರ್ ವೀಲ್ ಡ್ರೈವ್ ವೇರಿಯೆಂಟ್ ನ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 PS ಗರಿಷ್ಠ ಪವರ್, 320 Nm ಪೀಕ್ ಟಾರ್ಕ್, 2.2 ಲೀಟರ್ ಡೀಸೆಲ್ ಎಂಜಿನ್ 130 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮ್ಯಾನುವಲ್ ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆ ಈ ವಾಹನದಲ್ಲಿ‌ ಲಭ್ಯವಿದೆ.

ಇದಿಷ್ಟೇ ಅಲ್ಲದೇ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ, ಕ್ರೂಸ್ ಕಂಟ್ರೋಲ್, ಎಲ್ಇಡಿ DRLs, ಹ್ಯಾಲೊಜೆನ್ ಹೆಡ್ ಲೈಟ್ಸ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳು ಈ ಥಾರ್ ನಲ್ಲಿ ಲಭ್ಯವಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಮಹೀಂದ್ರಾ ಥಾರ್ ಅದ್ಭುತವಾಗಿ ವಿನ್ಯಾಸ ಹೊಂದಿದ್ದು, ಡ್ಯೂಯಲ್ ಏರ್‌ಬ್ಯಾಗ್ಸ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್,ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಈ ವಾಹನದಲ್ಲಿ ಲಭ್ಯವಿದೆ. ಮಹೀಂದ್ರಾ ಥಾರ್ ಭಾರತದ ಮಾರುಕಟ್ಟೆಯಲ್ಲಿ ಆಫ್-ರೋಡ್ ಎಸ್‌ಯುವಿಗಾಳದ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಸದ್ಯಕ್ಕೆ ವಾಹನೋದ್ಯಮದ ಚಕ್ರವರ್ತಿಯಂತೆ ಮೆರೆಯುತ್ತಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *