Shocking.. ಸದ್ಯದಲ್ಲೇ ರಾಜ್ಯದ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೋ ರಿಲೀಸ್ – ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮಾಜಿ ಶಾಸಕನ ಹೊಸ ಬಾಂಬ್..!!

Spread the love

ನ್ಯೂಸ್ ಆ್ಯರೋ‌ : ರಾಜಕೀಯಕ್ಕೂ ಅಶ್ಲೀಲ ವಿಡಿಯೋಗಳಿಗೂ ಬಿಡದ ನಂಟಿದೆ. ಹತ್ತು ಹಲವು ರಾಜಕಾರಣಿಗಳ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅವರ ರಾಜಕೀಯ ಜೀವನವೇ ಮುಗಿದು ಹೋಗಿರುವ ಇತಿಹಾಸವೇ ಇದೆ.‌ ಇದೀಗ ಮತ್ತೊಂದು ಅಶ್ಲೀಲ ವಿಡಿಯೋ ವೈರಲ್ ಆಗುವ ಮುನ್ಸೂಚನೆ ಸಿಕ್ಕಿದೆ.

ರಾಜ್ಯದ ಮಾಜಿ ಸಿಎಂ ಒಬ್ಬರಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಶೀಘ್ರವೇ ರಿಲೀಸ್ ಆಗಲಿದೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಹೇಳಿಕೆ ನೀಡಿದ್ದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವಾಗುತ್ತಿದೆ.

ಜಮಖಂಡಿಯಲ್ಲಿ ಮಾತನಾಡಿದ ಅವರು, ಹೀಗೊಂದು ಸುದ್ದಿ ಇವತ್ತೇ ಬಂದಿದೆ. ನಮ್ಮ ರಾಜ್ಯದ ಅದರಲ್ಲೂ ಬಿಜೆಪಿಯ ಮಾಜಿ ಸಿಎಂ ಒಬ್ಬರ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಅಲ್ಲದೇ ಆ ಸಿಡಿ ಯು ಬಿಜೆಪಿ ಅಂದರೆ ಭಾರತೀಯ ಜನತಾ ಪಕ್ಷದ ನಾಯಕನದ್ದೇ ಎಂದು ಅವರು ಒತ್ತಿ-ಒತ್ತಿ ಹೇಳಿದ್ದಾರೆ. ಅದು ಯಾರಿಗೆ ಸಂಬಂಧಿಸಿದ ಸಿಡಿ ಎಂಬುವುದು ನ್ಯಾಮಗೌಡ ಅವರು ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಆದರೆ ಈ ಬಾಂಬ್ ರಾಜ್ಯ ರಾಜಕಾರಣದ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗುತ್ತಾ ಕಾದು ನೋಡಬೇಕಿದೆ.

Leave a Comment

Leave a Reply

Your email address will not be published. Required fields are marked *