ಎಲ್ಲಾ ದೇವರು ಆಯ್ತು. ಈಗ ಏಲಿಯನ್ ದೇವರು…! ಈ ದೇವಸ್ಥಾನಕ್ಕೆ ಅನ್ಯಗ್ರಹ ಜೀವಿಗಳ ಅಸ್ತು…!
ನ್ಯೂಸ್ ಆ್ಯರೋ : ಎಲ್ಲ ದೇವರ ಸ್ಥಾಪನೆ ಆಯ್ತು ಈಗ ಕಂಡು ಕೇಳರಿಯದ ದೇವಸ್ಥಾನದ ಸ್ಥಾಪನೆಯೊಂದಾಗಿದೆ. ಏನಪ್ಪಾ, ಅಂಥಾ ಯೋಚಿಸುತ್ತಿದ್ದೀರಾ..! ಹೌದು, ತಮಿಳುನಾಡಿನ ವ್ಯಕ್ತಿಯೊಬ್ಬ ಏಲಿಯನ್ ದೇವಸ್ಥಾನವನ್ನು ಸ್ಥಾಪಿಸಿದ್ದಾನೆ.
ವಿಚಿತ್ರ ಏನಪ್ಪಾ ಅಂದ್ರೆ..ತಮಿಳುನಾಡಿನ ಸೇಲಂನ ಮಲ್ಲ ಮೂಪಂಬಟ್ಟಿಯ ಲೋಗನಾಥನ್ ಎಂಬ ವ್ಯಕ್ತಿ ಆತನ ಮುಕ್ಕಾಲು ಎಕರೆ ಭೂಭಾಗದಲ್ಲಿ ಏಲಿಯನ್ ದೇವಸ್ಥಾನದ ನಿರ್ಮಿಸಿದ್ದಾನೆ. ಇದರ ಜೊತೆಗೆ ಶಿವ, ಪಾರ್ವತಿ, ಮುರುಗನ್, ಕಾಳಿ ದೇವಿಯ ಮೂರ್ತಿಯನ್ನು ಸ್ಥಾಪಿಸಿದ್ದಾನೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಜಗತ್ತಿನಲ್ಲಿ ಮುಕ್ಕಣ್ಣನೂ ಸೃಷ್ಟಿಸಿದ ದೇವತೆಗಳಲ್ಲಿ ಏಲಿಯನ್ ದೇವರು ಮೊದಲನೆಯವರು. ಈ ದೇವತೆಗಳು ತಮ್ಮ ಆರಾಧಕರನ್ನು ಎಂದಿಗೂ ಕೈ ಬಿಡದೆ ಏಳಿಗೆಯತ್ತ ಅವರ ಜೀವನವನ್ನು ಕೊಂಡೊಯ್ಯುತ್ತಾರೆ. ನಾನು ಎರಡು ಬಾರಿ ಅನ್ಯಗ್ರಹದ ಈ ದೇವತೆಗಳ ಬಳಿ ಸಂಭಾಷಣೆಯನ್ನ ನಡೆಸಿದ್ದೇನೆ ಹಾಗೂ ಅನ್ಯಗ್ರಹ ಜೀವಿಗಳು ಸಹ ನನ್ನ ಈ ನಿರ್ಧಾರಕ್ಕೆ ಅಸ್ತು ಎಂದು ಸೂಚನೆಯನ್ನು ನೀಡಿದ್ದಾರೆ. ಈ ವಿಚಾರವನ್ನು ನಂಬಬೇಕು ಎಂದು ಲೋಗನಾಥನ್ ಹೇಳುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಯಾವ ವಿಷಯವನ್ನಾದರೂ ಜನರು ನಂಬುತ್ತಾರೆ. ಜಗತ್ತಿನಲ್ಲಿರುವ ಪ್ರಾಕೃತಿಕ ವಿಕೋಪಗಳಿಗೆ ಪರಿಹಾರ ನೀಡುತ್ತಾರೆ. ಇಂತಹ ಘಟನೆಗಳನ್ನು ತಡೆಯುವ ಶಕ್ತಿ ಅನ್ಯಗ್ರಹ ದೇವತೆಗಳಿಗೆ ಇದೆ ಎಂದು ದಿನನಿತ್ಯ ಈ ಏಲಿಯನ್ ದೇವರಿಗೆ ಆರತಿ ಬೆಳಗಿ ಪೂಜೆ ಮಾಡುತ್ತಾರೆ.
ಇದೀಗ ಜನರೆಲ್ಲಾ ಏಲಿಯನ್ ದೇವರು ನಿಜವಾಗಿಯೂ ಇದ್ದಾರಾ ಎಂದು ಮೂಗಿನ ಮೇಲೆ ಬೆರಳಿಟ್ಟು ಯೋಚಿಸುತ್ತಿದ್ದಾರೆ.
Leave a Comment