ಅಬ್ಬಾಬ್ಬಾ.. ಕಾಟೇರನಿಗೆ ಜೈಲಿನಲ್ಲಿ ರಾಜ ವೈಭೋಗ‌ – ಸಿಗರೇಟ್ ಆಯ್ತು, ಜೈಲಿನಿಂದಲೇ ದರ್ಶನ್ ಮಾಡ್ತಾನೆ ವಿಡಿಯೋ ಕಾಲ್..!!

20240825 205557
Spread the love

ನ್ಯೂಸ್ ಆ್ಯರೋ : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಬೆನ್ನಲ್ಲೇ ನಟ ದರ್ಶನ್ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿರುವ ವಿಡಿಯೋ ಹರಿದಾಡಿದ್ದು, ಜೈಲಾಧಿಕಾರಿಗಳ ಮೇಲೆ ಪೋಲಿಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಭೀತಿ ಎದುರಾಗಿದೆ.

ಇಂದು ರೌಡಿಶೀಟರ್‌ಗಳ ಜೊತೆ ಆರಾಮಾಗಿ ಚೇರ್ ಮೇಲೆ ಕುಳಿತು ಟೀ ಸೇವಿಸುತ್ತಾ ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಇದೀಗ ದರ್ಶನ್ ತನ್ನ VIP ಸೆಲ್ ನಿಂದಲೇ ತಮ್ಮ ಆಪ್ತರಿಗೆ ವಿಡಿಯೋ ಮಾಡಿರುವುದು ಬಹಿರಂಗಗೊಂಡಿದೆ. ಜೈಲಿನಲ್ಲಿರುವ ದರ್ಶನ್ ತನ್ನ ಆಪ್ತರಿಗೆ ಊಟಾ ಆಯ್ತಾ..ಇತ್ಯಾದಿ ದಿನಚರಿಗಳ ಬಗ್ಗೆ ಸನ್ನೆ ಮೂಲಕ ಕೇಳಿರುವುದು ವಿಡಿಯೋದಲ್ಲಿ ಕಂಡುಬಂದಂತಿದೆ.

ರೌಡಿಶೀಟರ್‌ಗಳಾದ ಕುಳ್ಳ ಸೀನು, ವಿಲ್ಸನ್ ಗಾರ್ಡನ್ ನಾಗ ಮತ್ತು ದರ್ಶನ್ ಮ್ಯಾನೇಜರ್ ಹಾಗೂ ಕೊಲೆ ಆರೋಪಿಯೂ ಆದ ನಾಗರಾಜನೊಂದಿಗೆ ಬಿಂದಾಸ್ ಆಗಿ ಜೈಲಿನ ಬ್ಯಾರಕ್ ಹೊರಗೆ ಕುಂತಿದ್ದ ಫೋಟೋ ಲೀಕ್ ಆಗಿ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿಡಿಯೋ ಕೂಡ ವೈರಲ್ ಆಗಿದೆ.

ದರ್ಶನ್ ಜೈಲಿಗೆ ಹೋದಾಗ ಆತನಿಗೆ‌ ಜೈಲಿನ ಯಾರ ಜೊತೆಯೂ ಸಂಪರ್ಕಕ್ಕೆ ಬಿಡುತ್ತಿಲ್ಲ, ಆತನ ಚಲನವಲನಗಳ ಬಗ್ಗೆ ಎಲ್ಲವೂ ಸಿಸಿ ಕ್ಯಾಮೆರಾಗಳ ಮೂಲಕ ವೀಕ್ಷಣೆ ಮಾಡುತ್ತಿರುವುದಾಗಿ ಪೋಲಿಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆದರೆ ಇದೀಗ ಈ ಮಾತು ಸಂಪೂರ್ಣ ಸುಳ್ಳೆಂಬುದು ಸಾಬೀತಾಗಿದೆ.

Leave a Comment

Leave a Reply

Your email address will not be published. Required fields are marked *