Renukaswamy Murder Case : ಸಿನಿಮಾ ಸ್ಟೈಲಲ್ಲಿ ಕುತ್ತಿಗೆ ಮೇಲೆ ಕಾಲಿಟ್ಟಿದ್ದ ‘ಡೆವಿಲ್’ – ಕಿಲ್ಲಿಂಗ್ ಸ್ಟಾರ್ ತಪ್ಪೊಪ್ಪಿಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ
ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾರ್ಜ್ ಶೀಟ್ ನಲ್ಲಿ 20 ಪುಟಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ಉಲ್ಲೇಖ ಮಾಡಲಾಗಿದೆ.
ಸಿನಿಮಾ ಸ್ಟೈಲಲ್ಲಿ ರೇಣುಕಾಸ್ವಾಮಿ ಕುತ್ತಿಗೆ ಮೇಲೆ ಕಾಲಿಟ್ಟ ನಟ ದರ್ಶನ್ ಅಟ್ಟಹಾಸ ಮೆರೆದಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದು, ಗುಪ್ತಾಂಗಕ್ಕೆ ಒದ್ದಿದ್ದು ನಾನೇ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಾರಂಭದ ತನಿಖಾ ಹಂತದಲ್ಲಿ ತಾನೇನು ಮಾಡಿಲ್ಲ ಎಂದು ದರ್ಶನ್ ಹೇಳಿದ್ದರು ಎನ್ನಲಾಗಿದ್ದು ಸಾಕ್ಷಿ ಸಮೇತ ಪೊಲೀಸರು ದರ್ಶನ್ ವಿಚಾರಣೆ ಮಾಡಿದಾಗ ನಟ ತಪ್ಪೊಪ್ಪಿಕೊಂಡಿದ್ದಾರೆ.
ರೇಣುಕಾಸ್ವಾಮಿ ತಲೆಗೆ ಶೂನಿಂದ ಒದ್ದಿರೋದು ನಿಜ. ಟೀ ತರಿಸಿಕೊಂಡು ಚೇರ್ ಮೇಲೆ ಕುಳಿತು ರೇಣುಕಾಸ್ವಾಮಿ ಕುತ್ತಿಗೆ ಹಾಗೂ ತಲೆ ಮೇಲೆ ಕಾಲು ಇಟ್ಟು ಆತನನ್ನು ಹಿಂಸಿಸಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪೊಲೀಸರು ದರ್ಶನ್ ರಿಂದ ಸ್ವಇಚ್ಚಾ ಹೇಳಿಕೆ ಪಡೆದು ಚಾರ್ಜ್ ಶೀಟ್‌ನಲ್ಲಿ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
Leave a Comment