ದೊಡ್ಮನೆಯಲ್ಲಿ ಮುತ್ತಿನ ಸುರಿಮಳೆ; ಜಾಸ್ತಿ ಕಿಸ್ ಕೊಟ್ಟವರು ಇವರೇ ನೋಡಿ
ನ್ಯೂಸ್ ಆ್ಯರೋ: ಬಿಗ್ ಬಾಸ್ ಈ ವಾರ ಒಂದು ಹೊಸ ಆಟ ಕೊಟ್ಟಿದ್ದಾರೆ. ಇದು ಮುತ್ತು ಕೊಡುವ ಆಟವೇ ಆಗಿದೆ. ಇಲ್ಲಿ ತುಟಿಗೆ ಲಿಪ್ಸ್ಟಿಕ್ ಹಂಚಿಕೊಂಡು ಎದುರಿಗೆ ಇರುವ ವೈಟ್ ಬೋರ್ಡ್ಗೆ ಮುತ್ತು ಕೊಡಬೇಕಾಗುತ್ತದೆ. ಧನರಾಜ್, ಚೈತ್ರಾ ಕುಂದಾಪುರ, ಸಿಂಗರ್ ಹನುಮಂತ ಮುತ್ತು ಕೊಡುವ ಟಾಸ್ಕ್ ಅಲ್ಲಿದ್ದಾರೆ.
ಈ ಒಂದು ಟಾಸ್ಕ್ ಅನ್ನ ಚೈತ್ರಾ ಫ್ಯಾಮಿಲಿ ನೋಡುತ್ತಿದೆ. ಹನುಮಂತನ ಅಪ್ಪ-ಅಮ್ಮ ಕೂಡ ಇದ್ದಾರೆ. ಇವರ ಮುಂದೇನೆ ಮುತ್ತಿನ ಆಟ ಆಡಿದ್ದಾರೆ. ರಜತ್ ಕಿಶನ್ ಆಗಾಗ ಈ ಆಟದ ಮಧ್ಯೆ ಕಾಲು ಎಳೆದಿರೋದು ಇದೆ.
ಮುತ್ತಿನ ಆಟವನ್ನ ನೋಡುಗರೇ ಹೆಚ್ಚು ಎಂಜಾಯ್ ಮಾಡಿದ್ದಾರೆ. ಮನೆಯಲ್ಲಿ ಕುಳಿತ ಮೋಕ್ಷಿತಾ ಪೈ, ಚೈತ್ರಾ ತಂಗಿ ಮಾನ್ಯ , ಹನುಮಂತನ ತಂದೆ-ತಾಯಿ ಸೇರಿದಂತೆ ರಜತ್ ಈ ಒಂದು ಮುತ್ತಿನ ಆಟವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಈ ಮೂಲಕ ದೊಡ್ಮನೆಯಲ್ಲಿ ಮುತ್ತಿನ ಟಾಸ್ಕ್ ಶುರು ಆಗಿದೆ.
ದಿನದ ಪ್ರೋಮೋದಲ್ಲಿ ಇದೇ ಹೆಚ್ಚು ಹೈಲೈಟ್ ಆಗಿದೆ. ಮುತ್ತಿನ ಆಟದಲ್ಲಿ ಒಂದು ಪ್ರೋಸೆಸ್ ಇದೆ. ಒಂದು ಕಡೆಗೆ ಆಯಾ ಸ್ಪರ್ಧಿಗಳು ಕೋಲಿನ ತುದಿಗೆ ಲಿಪ್ಸ್ಟಿಕ್ ಅಂಟಿಸಿಕೊಂಡು ನಿಂತಿದ್ದಾರೆ. ಅದನ್ನ ಮುತ್ತು ಕೊಡುವ ಸ್ಪರ್ಧಿಗಳು ತಮ್ಮ ತುಟಿಗೆ ತಾವೇ ಕೈ ಟಚ್ ಮಾಡದೆ ಹಚ್ಚಿಕೊಂಡು ಎದುರಿಗೆ ಇರೋ ಬಿಳಿ ಬೋರ್ಡ್ಗೆ ಕಿಸ್ ಕೊಡಬೇಕಾಗುತ್ತದೆ.
ಮುತ್ತಿನ ಆಟದಲ್ಲಿ ಚೈತ್ರಾ ಕುಂದಾಪುರ ಇದ್ದಾರೆ. ಸಿಂಗರ್ ಹನುಮಂತ್ ಕೂಡ ಭಾಗಿ ಆಗಿದ್ದಾರೆ. ಧನರಾಜ್ ಕೂಡ ಈ ಒಂದು ಆಟದಲ್ಲಿದ್ದಾರೆ. ಇವರ ಈ ಒಂದು ಟಾಸ್ಕ್ ಅಲ್ಲಿ ಹೆಚ್ಚಿನ ಮುತ್ತು ಕೊಟ್ಟವರೇ ವಿನ್ನರ್ ಅನ್ನೋದು ಒಟ್ಟು ಆಟದ ನಿಯಮ ಆಗಿದೆ.
ಆದರೆ, ಈ ಒಂದು ಆಟದಲ್ಲಿ ಯಾರು ವಿನ್ನರ್ ಆಗಿದ್ದಾರೆ ಅನ್ನುವ ಕುತೂಹಲ ಇದೆ. ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಮುತ್ತು ಕೊಟ್ಟಿದ್ದಾರೆ. ಹಾಗಾಗಿಯೇ ಎಲ್ಲರ ಮುತ್ತಿನ ಸಂಖ್ಯೆಗಳು ಜಾಸ್ತಿನೇ ಇವೆ. ಹಾಗೇ ಕೋಲು ಹಿಡಿದು ಲಿಪ್ಸ್ಟಿಕ್ ಹಚ್ಚಿದ ಸ್ಪರ್ಧಿಗಳಿಗೂ ಮುತ್ತು ಕೊಡುವ ಚಾನ್ಸ್ ಸಿಗುತ್ತದೆ ಅಂತಲೇ ಸದ್ಯ ಗೆಸ್ ಮಾಡಬಹುದು.
ನಿಮ್ಮ ಮಗ ಮುತ್ತು ಕೊಡ್ತಿದ್ದಾನೆ. ಬೋರ್ಡ್ ಇರೋ ಜಾಗದಲ್ಲಿ ಹುಡುಗಿ ಇದ್ದರೆ ಏನ್ ಮಾಡ್ತಾ ಇದ್ದೀರಿ. ನಿಮಗೆ ಪರವಾಗಿಲ್ವೇ? ಹೀಗೆ ಪಕ್ಕದಲ್ಲಿಯೇ ಕುಳಿತ ಹನುಮಂತನ ಅಪ್ಪ ಮತ್ತು ಅಮ್ಮನನ್ನ ರಜತ್ ಕೇಳ್ತಾರೆ. ಆಗ ಹನುಮಂತನ ಅಮ್ಮ ಓಕೆ ಅಂತ ಸ್ಮೈಲ್ ಮಾಡ್ತಾರೆ. ಈನ್ನು ಈ ಆಟದಲ್ಲಿ ಹನುಮಂತ ಗೆದ್ದಿರುವ ಹಾಗೆ ಕಾಣುತ್ತಿದೆ. ಸದ್ಯ ಇಂದು ರಾತ್ರಿ ಪ್ರಸಾರವಾಗುವ ಎಪಿಸೊಡ್ ನಲ್ಲಿ ರಿಸಲ್ಟ್ ಸಿಗಲಿದೆ.
Leave a Comment