ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಉಪೇಂದ್ರ; “ಯುಐ” ರಿವೀಲ್ ಕುರಿತು ಬಿಗ್ ಅಪ್ ಡೇಟ್
ನ್ಯೂಸ್ ಆ್ಯರೋ: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ (UI) ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ವಿಶ್ವದಾದ್ಯಂತ ಡಿ.20ಕ್ಕೆ ‘ಯುಐ’ ಸಿನಿಮಾ ರಿಲೀಸ್ ಆಗೋದಾಗಿ ಉಪೇಂದ್ರ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹಲವು ವರ್ಷಗಳ ನಂತರ ಉಪೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಯುಐ’ ಚಿತ್ರ ನೋಡಲು ಪ್ರೇಕ್ಷಕರು ಎದುರು ನೋಡ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಮೂಲಕ ಕಮಾಲ್ ‘ಯುಐ’ ಇದೇ ಡಿಸೆಂಬರ್ 20ರಂದು ರಿಲೀಸ್ ಆಗುತ್ತಿದೆ.
ಡಿಫರೆಂಟ್ ಕಥೆ, ವಿಭಿನ್ನ ಪಾತ್ರದ ಮೂಲಕ ಬರುತ್ತಿರುವ ಉಪೇಂದ್ರಗೆ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಹೀರೋಯಿನ್ ಆಗಿ ನಟಿಸಿದ್ದಾರೆ. ಈ ಚಿತ್ರವನ್ನು ಲಹರಿ ಸಂಸ್ಥೆ ನಿರ್ಮಾಣ ಮಾಡಿದೆ. ಉಪ್ಪಿ ಡೈರೆಕ್ಟ್ ಮಾಡಿದ ಚಿತ್ರ ಎಂದರೆ ಆ ಸಿನಿಮಾಕ್ಕೆ ಅಭಿಮಾನಿಗಳ ಬಳಗವು ಹೆಚ್ಚಾಗಿ ಇರುತ್ತದೆ. ಹೀಗಾಗಿ ಯುಐ ಸಕ್ಸಸ್ ಆಗುವುದರಲ್ಲಿ ಎರಡು ಮಾತಿಲ್ಲ.
ಬಹುನಿರೀಕ್ಷಿತ ಸಿನಿಮಾ ಯುಐ ಟೈಟಲ್, ಪೋಸ್ಟರ್ ಹಾಗೂ ಸಾಂಗ್ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ. ಯುಐ ಸಿನಿಮಾದ ಟ್ರೋಲ್ ಆಗುತ್ತೆ ಎನ್ನುವ ಹಾಡು ಸಖತ್ ಟ್ರೆಂಡ್ ಸೆಟ್ ಮಾಡಿತ್ತು. ಉಪ್ಪಿ ಸದ್ದಿಲ್ಲದೆ ಈ ಹಾಡನ್ನು ರಿಲೀಸ್ ಮಾಡಿ, ಎಲ್ಲರಿಗೂ ಶಾಕ್ ನೀಡಿದ್ದರು. ಸದ್ಯ ಇದೀಗ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದರಿಂದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇದು ಪ್ಯಾನ್ ಇಂಡಿಯಾ ಮೂವಿ ಆಗಿದ್ದು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.
Leave a Comment