ಮಂಜುಗೆ ಬಿಗ್ ಶಾಕ್ ಕೊಟ್ಟ ಗೌತಮಿ; ಕ್ಯಾಪ್ಟನ್ಸಿ ಓಟದಿಂದ ಗೆಳೆಯನ ಹೊರಗಿಟ್ಟ ಗೆಳತಿ
ನ್ಯೂಸ್ ಆ್ಯರೋ: ಗೆಳೆಯ-ಗೆಳತಿ ಎಂದೇ ಫೇಮಸ್ ಪಡೆದುಕೊಂಡಿದ್ದ ಗೌತಮಿ ಜಾಧವ್ ಹಾಗೂ ಮುಂಜು ನಡುವೆ ಬಿರುಸು ಮೂಡಿದೆ. ಮಂಜು ವಿರುದ್ಧ ಕ್ಯಾಪ್ಟನ್ ಗೌತಮಿ ಸಿಟ್ಟಿಗೆದ್ದಿದ್ದು, ಇಬ್ಬರ ಸ್ನೇಹ ಕಟ್ ಎಂದಿದ್ದಾರೆ.
ಇಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ಎಪಿಸೋಡ್ನ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಅದರಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವೈಸ್ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಂತರ ನಡೆದ ಟಾಸ್ಕ್ ಮಧ್ಯದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಗೌತಮಿ, ಮಂಜು ಅವರ ನಾನು 20 ಸಾರಿ ಹೇಳಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಇಲ್ಲ ಎಂದು ಮಂಜುಗೆ ಟಾಂಟ್ ಕೊಟ್ಟಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೌತಮಿ, ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನು ಹೊರಗೆ ಇಟ್ಟಿದ್ದಾರೆ. ಇಲ್ಲಿ ಗೆಳೆಯ, ಗೆಳತನ ಇರಲ್ಲ ಅದೆಲ್ಲ ಮುಗಿಸುತ್ತ ಇದ್ದೀನಿ ಅನ್ನುವ ಮೂಲಕ ಗೌತಮಿ ಶಾಕ್ ನೀಡಿದ್ದಾರೆ.
Leave a Comment