ಬಿಗ್ ಬಾಸ್ ಮನೆಯೊಳಗೆ ರೊಮ್ಯಾನ್ಸ್: ನಟಿಯ ಸೊಂಟಕ್ಕೆ ಮುತ್ತಿಟ್ಟ ಸಹಸ್ಪರ್ಧಿ
ನ್ಯೂಸ್ ಆ್ಯರೋ: ಬಿಗ್ ಬಾಸ್ ಮನೆ ಅಂದ್ರೆ ಶಿಸ್ತು, ನಿಯಮ ಪಾಲಿಸೋದು ಕಡ್ಡಾಯ. ಈ ಶೋ ನೋಡುವವರು ಒಬ್ಬರಲ್ಲ, ಇಬ್ಬರಲ್ಲ… ಲಕ್ಷ ಲಕ್ಷ ಮಂದಿ ವೀಕ್ಷಣೆ ಮಾಡುವ ಕಾರ್ಯಕ್ರಮ ಇದಾಗಿದೆ. ಅಂತಹ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡವಳಿಕೆಗಳ ಮೇಲೂ ಬಿಗ್ ಬಾಸ್ ತಂಡ ನಿಗಾ ಇಟ್ಟುಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಶೋ ನಲ್ಲಿ ಅಸಹ್ಯ ಸಂಗತಿಗಳು ಕಾಣಿಸಿಕೊಳ್ಳುತ್ತಿವೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಟ್ರೋಲ್ ಪೇಜ್‌ವೊಂದು ಹಂಚಿಕೊಂಡಿದ್ದು, ಇದು ಬಿಗ್ ಬಾಸ್ ಮನೆಯಲ್ಲ… ಓಯೋ ಎಂದು ಬರೆದುಕೊಂಡಿದೆ. ಇನ್ನು ಇನ್ನು ಕನ್ನಡ ಬಿಗ್ ಬಾಸ್‌ನಲ್ಲಿ ಇದುವರೆಗೆ ಅಸಹ್ಯ ಘಟನೆಗಳು ನಡೆದಿಲ್ಲ. ಆದರೆ, ಇತರ ಭಾಷೆಗಳ ಶೋನಲ್ಲಿ ಸ್ಪರ್ಧಿಗಳು ತಮ್ಮ ಹದ್ದು ಮೀರಿ ವರ್ತಿಸಿರುವುದು ಈ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋದ ಒಂದು ತುಣುಕನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಬಿಗ್ ಬಾಸ್ ಹಿಂದಿ ಸೀಸನ್ 17ರಲ್ಲಿ ಸಮರ್ಥ್ ಜುರೆಲ್ ಮತ್ತು ಇಶಾ ಮಾಳವೀಯಾ ಎಂಬ ಇಬ್ಬರು ಸ್ಪರ್ಧಿಗಳಿದ್ದರು. ಅವರ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಒಂದೊಮ್ಮೆ ಸಮರ್ಥ್, ಇಶಾ ಅವರ ಸೀರೆಯನ್ನು ಎತ್ತಿ ಸೊಂಟಕ್ಕೆ ಮುತ್ತಿಟ್ಟಿದ್ದರು. ಈ ದೃಶ್ಯ ಪ್ರಸಾರವಾಗುತ್ತಿದ್ದಂತೆ, ಸ್ಪರ್ಧಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಹಿಂದಿ ಬಿಗ್ ಬಾಸ್‌ನಲ್ಲಿ ಇದೊಂದೇ ಅಲ್ಲ, ಸಹಸ್ಪರ್ಧಿಗೆ ಒಬ್ಬ ಸ್ಪರ್ಧಿ ಲಿಪ್ ಟು ಲಿಪ್ ಕಿಸ್ ಮಾಡೋದು, ಯಾವ್ಯಾವುದೇ ಪಾರ್ಟ್‌ಗಳನ್ನು ಮುಟ್ಟೋದು, ಟಚ್ ಮಾಡೋದು ಹೀಗೆಲ್ಲಾ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇವೆ.
ಇನ್ನು ಬಾಲಿವುಡ್ ನಟ ಅನಿಲ್ ಕಪೂರ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ ಬಿಗ್ ಬಾಸ್ ಓಟಿಟಿ ಸೀಸನ್ 3 ದಿನೇ ದಿನೇ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಕಾರಣ ಆಗಿರೋದು ಅರ್ಮಾನ್ ಮಲಿಕ್ ನಡೆ. ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ಗೆ ಬಂದಿದ್ದ ಅರ್ಮಾನ್ ಮಲ್ಲಿಕ್ ಎರಡನೇ ಪತ್ನಿ ಕೃತಿಕಾ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ರೀತಿಯ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಅನೇಕರು ಆಕ್ರೋಶ ಹೊರ ಹಾಕಿದ್ದರು.
Leave a Comment