ಶಕ್ತಿಕಾಂತ್ ದಾಸ್ ಅಧಿಕಾರಾವಧಿ ಮುಕ್ತಾಯ; ಆರ್‌ಬಿಐಗೆ ನೂತನ ಗವರ್ನರ್‌ ಘೋಷಣೆ

RBI
Spread the love

ನ್ಯೂಸ್ ಆ್ಯರೋ: ಭಾರತೀಯ ರಿಸರ್ವ್ ಬ್ಯಾಂಕ್​ಗೆ ನೂತನ ಗವರ್ನರ್ ನೇಮಕವಾಗಿದೆ. ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ಆರ್​ಬಿಐನ ಗವರ್ನರ್ ಆಗಿ ಸರ್ಕಾರ ನೇಮಕ ಮಾಡಿದೆ.

Sanjay Malhotra

ಪ್ರಸಕ್ತ ಆರ್​ಬಿಐ ಗವರ್ನರ್ ಆಗಿರುವ ಶಕ್ತಿಕಾಂತ ದಾಸ್ ಅವರ ಸೇವಾವಧಿ ಡಿಸೆಂಬರ್ 10, ನಾಳೆ ಮಂಗಳವಾರ ಅಂತ್ಯವಾಗುತ್ತಿದೆ. ಡಿಸೆಂಬರ್ 11ಕ್ಕೆ ಸಂಜಯ್ ಮಲ್ಹೋತ್ರಾ ಆರ್​ಬಿಐ ಗವರ್ನರ್ ಆಗಿ ಪದಗ್ರಹಣ ಮಾಡಲಿದ್ದಾರೆ. ಮೂರು ವರ್ಷ ಕಾಲ ಅವರ ಸೇವಾವಧಿ ಇದೆ.

ಸಂಜಯ್ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್​ನ 1990ರ ಬ್ಯಾಚ್​ನ ಐಎಎಸ್ ಅಧಿಕಾರಿಯಾಗಿದ್ದಾರೆ. ರೆವೆನ್ಯೂ ಕಾರ್ಯದರ್ಶಿಯಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ.

ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್​ಇಸಿಯ ಛೇರ್ಮನ್ ಮತ್ತು ಎಂಡಿಯಾಗಿ ಕೆಲಸ ಮಾಡಿದ್ದರು. ಜಿಎಸ್​ಟಿ ಮಂಡಳಿಯಲ್ಲೂ ಅವರಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!