ನ.14 ಮಕ್ಕಳ ದಿನಾಚರಣೆ: ಇದರ ಇತಿಹಾಸ ನಿಮಗೆಷ್ಟು ಗೊತ್ತು? ಮಕ್ಕಳಿಗೆ ಈ ಗಿಫ್ಟ್‌ ನೀಡಿ

Children's Day
Spread the love

ನ್ಯೂಸ್ ಆ್ಯರೋ: ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿತ್ತು. ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನವನ್ನು ಘೋಷಣೆ ಮಾಡಿತ್ತು. ಆದರೆ 1964 ರ ನಂತರ ಭಾರತದಲ್ಲಿ ಮಕ್ಕಳ ದಿನಾಚರಣೆ ನವೆಂಬರ್ 14 ರಂದು ಆಚರಣೆ ಆಗುತ್ತಿದೆ.

ಭಾರತದಲ್ಲಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಮಕ್ಕಳ ದಿನಾಚರಣೆ ಮಾಡುವ ಮೂಲಕ ಅವರ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ.

115246211

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದು ಜವಾಹರಲಾಲ್ ನೆಹರು ರವರು. ಅವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ನೆಹರು ರವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಭಾರತದಾದ್ಯಂತ ಮಕ್ಕಳಿಗಾಗಿ ಮತ್ತು ಅನೇಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

Childrens Day

ವಿದ್ಯಾರ್ಥಿಗಳ ನೆಚ್ಚಿನ ಚಾಚಾ – ಜವಾಹರಲಾಲ್ ನೆಹರು ರವರು ” Tomorrow is Yours” ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಇದರ ಅರ್ಥ ನಾಳೆ ನಿಮ್ಮದು ಎಂದು. ಭಾರತದ ತರುಣ ಪೀಳಿಗೆಯನ್ನು ಉದ್ದೇಶಿಸಿ ಅವರು ಹೀಗೆ ನುಡಿಯುತ್ತಿದ್ದದ್ದು ತುಂಬಾ ವಿಶೇಷವಾಗಿತ್ತು.
ಭಾರತದ ಸ್ವತಂತ್ರಕ್ಕೆ ಹೋರಾಡಿದ ಪ್ರಮುಖ ನಾಯಕರಲ್ಲಿ ನೆಹರು ಸಹ ಒಬ್ಬರಾಗಿದ್ದರು. ದೇಶದ ಪ್ರಪ್ರಥಮ ಪ್ರಧಾನಿಯಾಗಿ ಇವರ ಜೀವನ ಆದರ್ಶವಾದುದು ಎನ್ನಲಾಗುತ್ತದೆ.

ನೇಹರು ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕ, ಭಾರತದ ಪ್ರಥಮ ಪ್ರಧಾನ ಮಂತ್ರಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು. ಇವರು ಮೋತಿಲಾಲ್ ನೆಹರು ಮತ್ತು ಸ್ವರೂಪ್ ರಾಣಿ ಅವರ ಪುತ್ರರಾಗಿ ಜವಾಹರಲಾಲ್ ನೆಹರು ಅವರು ನವೆಂಬರ್ 14, 1889 ರಲ್ಲಿ ಅಲಹಬಾದ್‌ನಲ್ಲಿ ಜನಿಸಿದರು. ನೆಹರು ಅವರು ಎರಡು ಬಾರಿ ಭಾರತದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Jnehru

1916 ರಲ್ಲಿ ಕಮಲಾ ಕೌಲ್ ಅವರನ್ನು ವಿವಾಹವಾದರು. ಮಹಾತ್ಮ ಗಾಂಧೀಜಿ ಅವರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದ ನೆಹರು, ಗಾಂಧಿ ಅವರ ಅಹಿಂಸಾ ಹೋರಾಟವನ್ನು ಬೆಂಬಲಿಸಿದ್ದರು. ಮಕ್ಕಳನ್ನು ಹೆಚ್ಚಾಗಿ ಇಷ್ಟುಪಡುತ್ತಿದ್ದ ನೆಹರು ಅವರೇ ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ಹೇಳಿದರು.

1947 ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಾಗಿನಿಂದ 1964 ರ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಸೇವೆಸಲ್ಲಿಸಿದರು. ಇವರನ್ನು ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜ್ಯಾತ್ಯಾತೀತ ತತ್ವದ ಸಾರ್ವಭೌಮ ಎಂದು ಕರೆಯಲಾಗುತ್ತದೆ.

ಮಕ್ಕಳ ದಿನ ಆಚರಿಸುವುದು ಹೇಗೆ?

ಮಕ್ಕಳ ದಿನದಂದು ಮಕ್ಕಳಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಆಚರಿಸಬಹುದು. ಈ ದಿನ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬಹುದು. ರಸಪ್ರಶ್ನೆಗಳು, ಚರ್ಚೆ, ಚಿತ್ರಕಲೆ, ಹಾಡುಗಾರಿಕೆ ಮತ್ತು ನೃತ್ಯದಂತಹ ಸ್ಪರ್ಧೆಗಳನ್ನು ಏರ್ಪಡಿಸಬಹುದು. ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚುವ ಮೂಲಕ ಮಕ್ಕಳ ಆಚರಿಸಬಹುದು. ಅಲ್ಲದೇ ಈ ದಿನ ಜವಹಾರ್ ನೆಹರೂ ಅವರಿಗೆ ಸಂಬಂಧಿಸಿ ಪ್ರಬಂಧ ಸ್ಪರ್ಧೆ, ಛದ್ಮವೇಷ ಸ್ಪರ್ಧೆಗಳನ್ನು ಕೂಡ ಏರ್ಪಡಿಸಲಾಗುತ್ತದೆ. ಇಂದು ಮಕ್ಕಳಿಗೆ ಗಿಫ್ಟ್‌ ನೀಡಲು ಬಯಸುವವರು, ಪಿಗ್ಗಿ ಬ್ಯಾಂಕ್, ಕಥೆ, ಕವನಗಳು, ಆಕರ್ಷಕ ಚಿತ್ರಗಳ ಬುಕ್ಸ್ , ಚಾಕೊಲೇಟ್ಸ್‌, ಪಾಟೆಡ್‌ ಪ್ಲಾಂಟ್, ಇಷ್ಟವಾದ ತಿಂಡಿ ತಿನಿಸು ಗಳನ್ನು ನೀಡಬಹುದು.

Leave a Comment

Leave a Reply

Your email address will not be published. Required fields are marked *

error: Content is protected !!