ಮತ್ತೆ ವೈರಲ್ ಆದ ಯುವ ಸಂಸದೆ ಹನಾ; ಮಸೂದೆಯ ಪ್ರತಿ ಹರಿದು ಡಾನ್ಸ್ ಮಾಡಿದ್ದು ಯಾಕೆ?
ನ್ಯೂಸ್ ಆ್ಯರೋ: ನ್ಯೂಜಿಲೆಂಡ್ನ ಸಂಸತ್ತಿನಲ್ಲಿ ನಡೆದು ಒಂದು ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ. ನ್ಯೂಜಿಲೆಂಡ್ನ ಅತ್ಯಂತ ಕಿರಿಯ ಸಂಸದೆ ಎಂದು ಗುರುತಿಸಿಕೊಂಡಿರುವ ಹನಾ ರವೈಟಿಯ ವಿಡಿಯೋ ಸದ್ದು ಮಾಡಿದೆ. ಪಾರ್ಲಿಮೆಂಟ್ನಲ್ಲಿ ಸ್ಥಳೀಯ ಒಪ್ಪಂದದ ಮಸೂದೆಯನ್ನು ಪಾಸ್ ಮಾಡಲು ಆಡಳಿತ ಸರ್ಕಾರ ನಿರ್ಧರಿಸಿತ್ತು. ಸರ್ಕಾರದ ಮಸೂದೆಯ ಪ್ರತಿಯನ್ನು ಹರಿದು ಆಕ್ರೋಶ ಹೊರ ಹಾಕಿದ್ದಾರೆ ಹನಾ ರವೈಟಿ.
ಮಸೂದೆ ಪ್ರತಿಯನ್ನು ಹರಿಯುವುದರ ಜೊತೆಗೆ ನ್ಯೂಜಿಲೆಂಡ್ನ ಸಾಂಪ್ರದಾಯಿಕ ನೃತ್ಯವಾದ ಹಕಾ ಡಾನ್ಸ್ ಮಾಡುತ್ತಾ ತಮ್ಮ ಸ್ಥಳದಿಂದ ಎದ್ದು ಬಂದಿದ್ದಾರೆ ಹನಾ. ಅವರ ಜೊತೆ ಉಳಿದ ಕೆಲವು ವಿಪಕ್ಷಗಳ ಸಂಸದರು ಕೂಡ ಹೆಜ್ಜೆ ಹಾಕಿದ್ದಾರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಹೌದು. . 1840ರ ವೈಟಾಂಗಿ ಒಪ್ಪಂದದ ಬಗ್ಗೆ ಮಸೂದೆ ಮಂಡನೆ ಮಾಡಿತ್ತು ನ್ಯೂಜಿಲೆಂಡ್ ಸರ್ಕಾರ ಮೌರಿ ಬುಡಕಟ್ಟು ಸಮುದಾಯದೊಂದಿಗೆ ಹಾಗೂ ಸರ್ಕಾರದೊಂದಿಗೆ ಒಂದು ಉತ್ತಮ ಬಾಂಧವ್ಯ ಸೃಷ್ಟಿಸುವ ಸಲುವಾಗಿ ಈ ಒಂದು ಮಸೂದೆಯನ್ನು ಮಂಡನೆ ಮಾಡಲಾಗಿತ್ತು.
ಅದೇ ಸಮುದಾಯದ ಎಂಪಿ ಆಗಿರುವ ಹನಾ ರವೈಟಿ ಈ ಮಸೂದೆಯನ್ನು ವಿರೋಧಿಸಿದ್ದಾರೆ. ಅದನ್ನು ವಿರೋಧಿಸುವ ಭರದಲ್ಲಿಯೇ ಮಸೂದೆಯ ಪ್ರತಿಯನ್ನು ಹರಿದು ನ್ಯೂಜಿಲೆಂಡ್ನ ಸಾಂಪ್ರದಾಯಿಕ ನೃತ್ಯವಾದ ಹಕಾ ಡಾನ್ಸ್ ಮಾಡಿದ್ದಾರೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
Leave a Comment