ದಿನಾ ತುಳಸಿ ಚಹಾ ಕುಡಿದರೆ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ; ಮಿಸ್ ಮಾಡದೇ ಕುಡಿಯುವಿರಿ ಆರೋಗ್ಯ ವೃದ್ದಿಸಿಕೊಳ್ಳಿ

Tulsi tea
Spread the love

ನ್ಯೂಸ್ ಆ್ಯರೋ: ನೀವು ಚಹಾ ಪ್ರೇಮಿಯಾಗಿದ್ದರೆ ಇದ ಬದಲಿಗೆ ತುಳಸಿ ಟೀ ಪ್ರಯತ್ನಿಸಿ. ಅದು ನಿಮ್ಮ ನಿತ್ಯದ ಹಂಬಲವನ್ನು ಪೂರೈಸುವುದು ಮಾತ್ರವಲ್ಲದೆ ಸಾಮಾನ್ಯ ಚಹಾ ನೀಡದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಸಹ ನೀಡುತ್ತದೆ.

ಸಕ್ಕರೆ ಬೆರೆಸದೇ ತಯಾರಿಸಿದ ತುಳಸಿ ಚಹಾವನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಈ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸುತ್ತದೆ. ಅಲ್ಲದೇ ಇದರಲ್ಲಿರುವ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತವೆ.

ನೀವು ಖಿನ್ನತೆಯಿಂದ ಬಳಲುತ್ತಿದ್ದರೆ, ತುಳಸಿ ಚಹಾ ಸೇವನೆಯು ನಿಮಗೆ ಹೆಚ್ಚಿನ ಸಹಾಯವನ್ನು ನೀಡುತ್ತದೆ ಏಕೆಂದರೆ ಅದರಲ್ಲಿರುವ ಪೊಟ್ಯಾಸಿಯಮ್ ಅಂಶವು ನಿಮ್ಮ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಮಟ್ಟವನ್ನು ಹೆಚ್ಚಿಸುತ್ತದೆ. ಈ ಸೆರೋಟೋನಿನ್ ಮೆದುಳಿಗೆ ಮುದ ನೀಡುವ ರಸದೂತವಾಗಿದ್ದು ಧನಾತ್ಮಕ ಭಾವನೆ ಹಾಗೂ ನಿರಾಳತೆಗಾಗಿ ಅವಶ್ಯವಾಗಿದೆ.

ವಯಸ್ಸಾಗುತ್ತಿದ್ದಂತೆಯೇ ಚರ್ಮದ ಸೆಳೆತವೂ ಕೊಂಚ ಕುಗ್ಗುವ ಕಾರಣ ಚರ್ಮದಲ್ಲಿ ನೆರಿಗೆಗಳು ಮೂಡ ತೊಡಗುತ್ತವೆ. ಹಾಗಾಗಿ ಈ ನೆರಿಗೆಗಳು ಮೂಡುವ ನೈಸರ್ಗಿಕ ಪ್ರಕ್ರಿಯೆ ತಡವಾದಷ್ಟೂ ತಾರುಣ್ಯವನ್ನು ಉಳಿಸಿಕೊಳ್ಳಲು ಸಾಧ್ಯ. ಇದನ್ನು ಸಾಧ್ಯವಾಗಿಸಲು ನಿತ್ಯವೂ ತುಳಸಿ ಟೀ ಕುಡಿದರೆ ಸಾಕು. ಇದರಲ್ಲಿರುವ ಪೋಷಕಾಂಶಗಳು ಚರ್ಮದಲ್ಲಿ ಕೊಲ್ಯಾಜೆನ್ ಉತ್ಪಾದನೆಯನ್ನು ಹೆಚ್ಚು ಕಾಲ ಉಳಿಸಿ ಸೆಳೆತದ ಶಕ್ತಿಯನ್ನು ಹೆಚ್ಚಿನ ವಯಸ್ಸಿನವರೆಗೆ ಕಾಪಾಡುತ್ತವೆ. ಅಲ್ಲದೇ ಆಂಟಿ ಆಕ್ಸಿಡೆಂಟುಗಳು ಚರ್ಮದ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡಿ ಯೌವನದ ವರ್ಷಗಳನ್ನು ಇನ್ನಷ್ಟು ಹೆಚ್ಚಾಗಿಸುತ್ತವೆ.

ತುಳಸಿ ಚಹಾವು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ, ಏಕೆಂದರೆ ಇದೊಂದು ನೈಸರ್ಗಿಕ ನೋವು ನಿವಾರಕವಾಗಿದ್ದು ಅದು ಜ್ವರ ಶೀತ ಮೊದಲಾದವುಗಳಿಗೆ ಕಾರಣವಾದ ವೈರಸ್ಸುಗಳ ವಿರುದ್ದ ಹೋರಾಡುವ ಮೂಲಕ ಸೋಂಕನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡುತ್ತದೆ.

ತುಳಸಿ ಚಹಾವನ್ನು ನಿಯಮಿತವಾಗಿ ಸೇವಿಸುವುದು ನಿಮ್ಮ ಹೃದಯಕ್ಕೆ ಒಳ್ಳೆಯದು ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ಬೀಟಾ ಕ್ಯಾರೊಟೀನುಗಳಿದ್ದು ಇವು ನರಗಳ ಸೆಡೆತವನ್ನು ನಿವಾರಿಸಿ ರಕ್ತಪರಿಚಲನೆ ಸುಗಮವಾಗುವಂತೆ ಮಾಡುತ್ತವೆ ಹಾಗೂ ಪರೋಕ್ಷವಾಗಿ ಹೃದಯದ ಮೇಲಿನ ಒತ್ತಡವನ್ನು ತಗ್ಗಿಸುತ್ತವೆ.

ತುಳಸಿ ಚಹಾದಲ್ಲಿ ಅತಿ ಸೂಕ್ಷ್ಮಜೀವಿ ನಿವಾರಕ ಗುಣಗಳಿರುವ ಕಾರಣ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೇ ಬಾಯಿಯ ದುರ್ವಾಸನೆ ಹೋಗಲಾಡಿಸುವ ದ್ರಾವಣವಾಗಿಯೂ ಆಗಿ ಕಾರ್ಯನಿರ್ವಹಿಸುವುದರಿಂದ ಅದು ಉಸಿರಿನಲ್ಲಿ ತಾಜಾತನ ತುಂಬುತ್ತದೆ.

ತುಳಸಿ ಚಹಾವನ್ನು ತಯಾರಿಸುವುದು ಹೇಗೆ?


ನೀವು ಮಾಡಬೇಕಾದುದೆಂದರೆ ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ ಅದರಲ್ಲಿ 2-3 ತಾಜಾ ತುಳಸಿ ಎಲೆಗಳನ್ನು ಬೆರಳುಗಳಿಂದ ಕೊಂಚವೇ ಜಜ್ಜಿ ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಸಿ.
ನೀರು ಅದರ ಬಣ್ಣ ಮತ್ತು ಪರಿಮಳವನ್ನು ಹೀರಿಕೊಳ್ಳಲಿ. ಸುಮಾರು ಮೂರು ನಿಮಿಷಗಳ ನಂತರ, ಚಹಾವನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಿ
ಈ ಚಹಾವನ್ನು ನೀವು ಹಾಗೆಯೇ ಬಿಸಿಬಿಸಿಯಾಗಿ ಕುಡಿಯಬಹುದು ಅಥವಾ ಇನ್ನೂ ಹೆಚ್ಚಿನ ರುಚಿ ಮತ್ತು ಪ್ರಯೋಜನಗಳಿಗಾಗಿ ಅದರಲ್ಲಿ ಒಂದು ಟೀಚಮಚದಷ್ಟು ಜೇನುತುಪ್ಪ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಸೇರಿಸಿ.
ಪರ್ಯಾಯವಾಗಿ ಚಹಾವನ್ನು ತಯಾರಿಸುವಾಗ ನೀವು ಏಲಕ್ಕಿ ಮತ್ತು ಶುಂಠಿಯನ್ನು ಸಹಾ ಸೇರಿಸಬಹುದು.
ತಾಜಾ ತುಳಸಿ ಎಲೆಗಳು ಲಭ್ಯವಿಲ್ಲದಿದ್ದರೆ ತುಳಸಿ ಎಲೆಗಳನ್ನು ಒಣಗಿಸಿದ ಪುಡಿಯನ್ನೂ ಬಳಸಬಹುದು. ಆದರೆ ಈ ಪುಡಿಯನ್ನು ಒಂದೆರಡು ನಿಮಿಷಕ್ಕಿಂತ ಹೆಚ್ಚು ಕುದಿಸಬಾರದು.
ಹಾಲು ಸೇರಿಸದೇ ಸೇವಿಸಿ.

Leave a Comment

Leave a Reply

Your email address will not be published. Required fields are marked *

error: Content is protected !!