ಇಶಾ ಫೌಂಡೇಶನ್ಗೆ ಎದುರಾಗಿದ್ದ ಆತಂಕಕ್ಕೆ ತೆರೆ; ಸದ್ಗುರು ವಿರುದ್ಧದ ಪ್ರಕರಣವೇನು?
ನ್ಯೂಸ್ ಆ್ಯರೋ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪ್ರಸಿದ್ಧ ಇಶಾ ಫೌಂಡೇಶನ್ನ ಆಶ್ರಮದಲ್ಲಿ ತಮ್ಮ ಮಕ್ಕಳನ್ನು ಅಕ್ರಮವಾಗಿ ಇಟ್ಟಿಕೊಳ್ಳಲಾಗಿದೆ ಎಂಬ ಆರೋಪದಡಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ವಿರುದ್ದ ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿದೆ. ಸುಪ್ರೀ ಕೋರ್ಟ್ ತೀರ್ಪಿನಿಂದ ಸದ್ಗುರು ಅವರಿಗೆ ನಿರಾಳವಾಗಿದೆ.
ಸದ್ಗುರು ವಿರುದ್ಧದ ಪ್ರಕರಣವೇನು?
ಮಕ್ಕಳಿಬ್ಬರ ಬುದ್ದಿಯ ಮೇಲೆ ಮಂಕು ಬೂದಿ ಎರಚಿ ತಮ್ಮ ಆಶ್ರಮದಲ್ಲಿ ಜಗ್ಗಿ ವಾಸುದೇವ್ ಅಕ್ರಮವಾಗಿ ಇರಿಸಿಕೊಂಡಿದ್ದಾರೆ ಎಂದು ತಮಿಳುನಾಡಿನ ನಿವೃತ್ತ ಪ್ರಾಧ್ಯಾಪಕರೊಬ್ಬರು ದೂರು ನೀಡಿದ್ದರು. ಇವರ ದೂರಿನ ಮೇರೆಗೆ ಸದ್ಗುರು ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇನ್ನು ಮದ್ರಾಸ್ ಹೈಕೋರ್ಟ್ನಲ್ಲೂ ದೂರು ದಾಖಲಿಸಿದ್ದರಿಂದ ದಾಳಿಗೆ ಸೂಚಿಸಲಾಗಿತ್ತು. ಈ ಸಂಬಂಧ ಸದ್ಗುರು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಕೋರ್ಟ್ಗೆ ಸಲ್ಲಿಕೆಯಾದ ವರದಿ ಪ್ರಕಾರ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸದ್ಗುರು ಯಾರನ್ನೂ ಅಕ್ರಮವಾಗಿ ಇರಿಸಿಲ್ಲ:
ಕೊಯಮತ್ತೂರಿನ ಇಶಾ ಫೌಂಡೇಶನ್ಗೆ ಸೇರಿದ ಆಶ್ರಮದಲ್ಲಿ ಸದ್ಗುರು ಅವರು ಯಾರನ್ನೂ ಅಕ್ರಮವಾಗಿ ಇರಿಸಿಲ್ಲ ಎಂದು ಅಲ್ಲಿನ ಸ್ಥಳೀಯ ನಿವಾಸಿಗಳು ಹೇಳಿದ್ದರು. ಇನ್ನು ಸ್ಥಳೀಯರ ಹೇಳಿಕೆಯನ್ನು ಆಲಿಸಿದ ಸುಪ್ರೀಕೋರ್ಟ್, ಸದ್ಗುರು ಅವರು ಅಕ್ರಮವಾಗಿ ಮಕ್ಕಳನ್ನು ಇರಿಸಿರುವ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಅವರ ಪ್ರಕರಣವನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಇತರೆ ಪ್ರಕರಣಗಳಿಗೂ ಸುಪ್ರೀ ಕೋರ್ಟ್ ತೀರ್ಪು:
ಇಶಾ ಫೌಂಡೇಶನ್ ನಲ್ಲಿ ಒಂದೂವರೆ ದಶಕದಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಗಳು, ಅದರಲ್ಲಿ ಐದು ಪ್ರಕರಣ ವಿಲೇವಾರಿ ಆಗಿರುವುದು, ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿ ಈವರೆಗೂ ಕಾಣೆಯಾಗಿರುವ ಅಂಶವನ್ನೂ ಪ್ರಸ್ತಾಪಿಸಲಾಗಿತ್ತು. ಮೊಕದ್ದಮೆ ಸೇರಿ ಇತರೆ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿತು. ಕೆಲ ದಿನಗಳಿಂದ ಇಶಾ ಫೌಂಡೇಶನ್ನಲ್ಲಿ ಉಂಟಾಗಿದ್ದ ಆತಂಕಕ್ಕೆ ತೆರೆ ಬಿದ್ದಿದೆ.
Leave a Comment