ಮತ್ತೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಮಠ ಸ್ವಾಮೀಜಿ – ಜಗತ್ತಿನ ಮೂರು ಪ್ರಧಾನಿಗಳಿಗಿದೆಯಂತೆ ಗಂಡಾಂತರ..!!

20240626 075844
Spread the love

ನ್ಯೂಸ್ ಆ್ಯರೋ : ನಿಖರ ಭವಿಷ್ಯ ನುಡಿಯುವ ಮೂಲಕ ಸದಾ ಸುದ್ದಿಯಲ್ಲಿರುವ ಕೋಡಿ ಮಠ ಸ್ವಾಮೀಜಿ ಇದೀಗ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದು, ಅಂತರಾಷ್ಟ್ರೀಯ ಮಟ್ಟದ ಬಗ್ಗೆ ಮತ್ತು ರಾಜಕೀಯ ಆಸಕ್ತಿ ಇರುವವರಿಗೆ ಈ ಸುದ್ದಿ ಶಾಕ್ ನೀಡಿದೆ.

ಈ ಮೊದಲು ಇದೇ ಸ್ವಾಮೀಜಿ ಮುಂದೆ ರಾಜ್ಯದಲ್ಲಾಗುವ ಅನಾಹುತ, ರಾಜ್ಯ ರಾಜಕಾರಣದ ಬಗ್ಗೆ ಹೇಳಿದ್ದರು. ಇದೀಗ ಮತ್ತೆ ಸ್ಪೋಟಕವಾದಂತಹ ಭವಿಷ್ಯ ನುಡಿದಿದ್ದು, ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗುತ್ತದೆ ಎಂದು ಕ್ರೋಧಿ ನಾಮ ಸಂವತ್ಸರದ ಭವಿಷ್ಯ ನುಡಿದಿದ್ದಾರೆ.

ಧಾರವಾಡದಲ್ಲಿ ಸ್ಪೋಟಕವಾದ ಭವಿಷ್ಯ ನುಡಿದ ಅವರು, ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದೆ. ಈ ಸಂವತ್ಸರದಲ್ಲಿ ಒಳಿತಿಗಿಂತ ಕೆಡಕು ಹೆಚ್ಚು ಎನ್ನಬಹುದು. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ ಎಂದಿದ್ದಾರೆ.

ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನು ಅನ್ನೋದನ್ನು ಸಮಗ್ರವಾಗಿ ಶ್ರಾವಣದಲ್ಲಿ ಹೇಳುವೆ. ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಎಂದು ಶ್ರಾವಣದಲ್ಲಿ ಹೇಳುವೆ ಎಂದು ಸ್ಪಷ್ಟಪಡಿಸಿದರು.

ಅಷ್ಟೇ ಅಲ್ಲದೇ ರಾಜಕೀಯದ ಬಗ್ಗೆ ಮಾತನಾಡಿರುವ ಕೋಡಿಶ್ರೀ, ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ, ಇನ್ನೂ ಅಂಗಡಿ ಓಪನ್ ಆಗಿಲ್ಲ. ವ್ಯಾಪಾರ ಶುರುವಾಗಲಿ. ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುವೆ. ಜಗತ್ತಿನಲ್ಲಿ ಎರಡ್ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಆಗಲಿದೆ ಎಂದು ಆಘಾತಕಾರಿ ಭವಿಷ್ಯವಾಣಿ ನುಡಿದಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!