ಬಳ್ಳಾರಿ ಪೊಲೀಸರ ನಡೆಗೆ ದರ್ಶನ್ ಬೇಸರ: ಯಾಕ್ ಗೊತ್ತಾ..?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸದ್ಯ ಬಳ್ಳಾರು ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಈ ವೇಳೆ ಜೈಲಾಧಿಕಾರಿಗಳ ಜೊತೆ ಹಲವಾರು ಬಾರಿ ಕಿರಿಕ್ ಮಾಡಿಕೊಂಡಿದ್ರು, ಆದ್ರೆ ಇದೀಗ ಬೇಸರದ ಮುಖ ಮಾಡಿಕೊಂಡಿದ್ದಾನಂತೆ ಕಾರಣ ಏನಪ್ಪ ಅಂತೀರಾ ಇಲ್ಲಿದೆ ನೋಡಿ ಫುಲ್ ಡೀಟೆಲ್ಸ್..
ಕುರ್ಚಿ ಬೇಕೆಂದು ಹಲವಾರು ಬಾರಿ ಕೇಳಿದರು ಕೊಡದ ಪೊಲೀಸ್ ಸಿಬ್ಬಂದಿ
ಕೋರ್ಟ್ ಆದೇಶ ನೀಡಿದರೂ ತಮಗೆ ಚೇರ್ ನೀಡಿಲ್ಲ. ಪದೇ ಪದೇ ಕೇಳಿದರೂ ಚೇರ್ ಕಲ್ಪಿಸಿಲ್ಲ ಎಂದು ಜೈಲು ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ ನಟ ದರ್ಶನ್.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವು ಹಿನ್ನೆಲೆ ಚೇರ್ ಗಾಗಿ ಮನವಿ ಮಾಡಿದ್ದರು. ಮನವಿ ಮಾಡಿ ವಾರ ಕಳೆದರೂ ಜೈಲು ಅಧಿಕಾರಿಗಳು ಚೇರ್ ಕೊಡದಿರುವುದಕ್ಕೆ ಗರಂ ಆಗಿದ್ದಾರೆ. ನ್ಯಾಯಾಲಯ ಕುರ್ಚಿ ಕೊಡಲು ಸೂಚನೆ ನೀಡಿದರೂ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. ಆರೋಪಿ ದರ್ಶನ್ ಗೆ ಖಡಕ್ಕಾಗಿ ತಿರುಗೇಟು ನೀಡಿದ ಜೈಲಿನ ಅಧಿಕಾರಿಗಳು ನ್ಯಾಯಾಲಯದ ಅಧಿಕೃತ ಆದೇಶ ಬಂದ ನಂತರವೇ ಕುರ್ಚಿ ಕೊಡುತ್ತೇವೆ ಎಂದಿದ್ದು, ಜೈಲು ಅಧಿಕಾರಿಗಳ ಮಾತಿಗೆ ದರ್ಶನ್ ಸಪ್ಪೆ ಮುಖ ಮಾಡಿ ಕೂತಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಕೆಲವು ಅವಶ್ಯಕ ವಸ್ತು ಕೊಡುವ ಬಗ್ಗೆ ನಿಯಮಗಳು ಇವೆ. ಕೋರ್ಟ್ ಆದೇಶ ಬೇಕು ಇದಕ್ಕೆಲ್ಲ ಎಂದು ಬಾಯಿ ಮುಚ್ಚಿಸಿದ್ದಾರೆ.
Leave a Comment