ಹೆಗಲ ಮೇಲೆಯೇ ಮಕ್ಕಳ ಶವ ಹೊತ್ತೊಯ್ದ ದಂಪತಿ; ಮಹಾರಾಷ್ಟ್ರದಲ್ಲೊಂದು ಕರುಣಾಜನಕ ಘಟನೆ…
ನ್ಯೂಸ್ ಆ್ಯರೋ : ದೇಶವು ಸ್ಮಾರ್ಟ್ ಸಿಟಿಯತ್ತ ಸಾಗುತ್ತಿದೆ. ಆದರೆ ಕೆಲವೊಂದು ಪ್ರದೇಶಗಳು ಮೂಲ ಸೌಲಭ್ಯಗಳ ಕೊರತೆಯಿಂದ ಕುಗ್ರಾಮವಾಗಿಯೇ ಉಳಿದಿದೆ. ಈ ವಿಚಾರಕ್ಕೆ ಸಂಬಂಧಿಸಿದ ಕರುಣಾಚಲಕ ಘಟನೆಯೊಂದು ನಡೆದಿದೆ.
ಹೌದು, ಮಹಾರಾಷ್ಟ್ರದ ಗಡ್ಚಿರೋಲಿಯ ಆಹೇರಿ ತಾಲೂಕಿನ ಹಳ್ಳಿಯೊಂದರ ದಂಪತಿಗಳು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ತಮ್ಮ ಇಬ್ಬರು ಗಂಡು ಮಕ್ಕಳ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಯಿಂದ 15 ಕಿಲೋಮೀಟರ್ ದೂರದಲ್ಲಿರುವ ತಮ್ಮ ಮನೆಗೆ ಕಾಲ್ನಡಿಗೆಯ ಮೂಲಕ ಬಂದಿರುವ ಘಟನೆ ಗುರುವಾರ ನಡೆದಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದು, ದಂಪತಿಗಳು ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ತಮ್ಮ ಮನೆಗೆ ನಡೆದು ಸಾಗಿದ್ದಾರೆ.
ಈ ಘಟನೆಯ ವಿಡಿಯೋವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ದಂಪತಿಗಳು ಕಣ್ಣೀರಿಟ್ಟು, ಕೆಸರುಮಯವಾದ ಹಾದಿಯಲ್ಲಿ ಮಕ್ಕಳ ಮೃತದೇಹ ಹೊತ್ತು ಸಾಗುತ್ತಿದ್ದಾರೆ.
Leave a Comment