ಮೃತ ತಂದೆಯ ಫೋಟೋ ಫ್ರೇಮ್ ಮುಂದೆ ಮಗಳ ರೀಲ್ಸ್ ಕ್ರೇಜ್ – ಸ್ನ್ಯಾಪ್ ಚಾಟ್ ಗೆ ಹೀಗೂ ಎಡಿಕ್ಟ್ ಆಗ್ತಾರಾ…? ಈ ವೀಡಿಯೋ ನೋಡಿ..

ಮೃತ ತಂದೆಯ ಫೋಟೋ ಫ್ರೇಮ್ ಮುಂದೆ ಮಗಳ ರೀಲ್ಸ್ ಕ್ರೇಜ್ – ಸ್ನ್ಯಾಪ್ ಚಾಟ್ ಗೆ ಹೀಗೂ ಎಡಿಕ್ಟ್ ಆಗ್ತಾರಾ…? ಈ ವೀಡಿಯೋ ನೋಡಿ..

ನ್ಯೂಸ್ ಆ್ಯರೋ : ಇದು ತಾಂತ್ರಿಕ ಯುಗ. ಕಾಲ ಬದಲಾದಂತೆ ಜನರೂ ಬದಲಾಗುತ್ತಾ ಹೋಗುತ್ತಾರೆ.‌ ತಂತ್ರಜ್ಞಾನಗಳು ಮಾನವೀಯ ಸಂಬಂಧದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ ಎಂಬುವುದಕ್ಕೆ ಈ ಹುಡುಗಿಯ ಫೋಟೋ ಹುಚ್ಚಾಟವೇ ನೈಜ ನಿದರ್ಶನ ಬಿಡಿ….

ಇನ್ಸ್ಟಾಗ್ರಾಮ್‌ ರೀಲ್ಸ್ ನೋಡುವುದರಲ್ಲಿ, ಸ್ನ್ಯಾಪ್‌ ಚಾಟ್‌ ಫಿಲ್ಟರ್‌ ಗಳನ್ನು ಬಳಸುವುದರಲ್ಲಿ ಟ್ರೆಂಡ್‌ಗೆ ತಕ್ಕ ಈಗಿನ ಯೂತ್ಸ್‌ ಬದಲಾಗುತ್ತಾರೆ. ಯುವತಿಯೊಬ್ಬಳು ಸ್ನ್ಯಾಪ್‌ ಚಾಟ್‌ ಲೈವ್‌ ಫಿಲ್ಟರ್‌ ನಲ್ಲಿ ಸೆರೆ ಹಿಡಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸ್ನ್ಯಾಪ್‌ ಚಾಟ್‌ ಬಹುತೇಕರ ಮೆಚ್ಚಿನ ಫೋಟೋ ತೆಗೆಯುವ ಸೋಶಿಯಲ್‌ ಮೀಡಿಯಾ ಎಂದರೆ ತಪ್ಪಾಗದು. ಇದರಲ್ಲಿ ನೂರಾರು ಫಿಲ್ಟರ್‌ ಗಳಿವೆ. ಅವುಗಳಲ್ಲಿ ವ್ಯಂಗ್ಯ ನೋಟ, ಆಳುವ ಮುಖ, ನಗುವ ಮುಖ ಹೀಗೆ ನಾನಾ ರೀತಿಯ ಫಿಲ್ಟರ್‌ ಗಳಿವೆ. ಹುಡುಗನ ಮುಖ ಹುಡುಗಿಯಂತೆ ಮಾಡುವ ಫಿಲ್ಟರ್‌ ಕೂಡ ಇಲ್ಲಿದೆ.

ನಾಯಿಯಂತೆ ನಾಲಗೆ ಉದ್ದವಾಗಿ ಕಾಣುವ ಫಿಲ್ಟರ್‌ ವೊಂದಿದೆ. ಈ ಫಿಲ್ಟರ್‌ ನಲ್ಲಿ ಯುವತಿಯೊಬ್ಬಳು ಸೆರೆ ಹಿಡಿದ ವಿಡಿಯೋ ವೈರಲ್‌ ಆಗಿದೆ.

ವೀಡಿಯೋದಲ್ಲಿ ಏನಿದೆ..?

ಯುವತಿಯೊಬ್ಬಳು ತನ್ನ ದಿವಂಗತ ತಂದೆಯ ಫೋಟೋ ಫ್ರೇಮ್‌ ಮುಂದೆ ಹೋಗಿ ಡಾಗ್‌ ಫಿಲ್ಟರ್‌ ಬಳಸಿದ್ದಾಳೆ. ಇದರಿಂದ ಯುವತಿಯ ಕಿವಿ ಬಳಿ ನಾಯಿ ಕಿವಿ ಮೂಡಿವೆ. ಮೂಗು ಕೂಡ ನಾಯಿಯಂತೆ ಬಂದಿವೆ. ಇನ್ನು ನಾಲಗೆಯೂ ಹಾಗೆ ನಾಯಿಯಂತೆ ಬಂದಿದೆ. ಈ ಫಿಲ್ಟರ್‌ ತಮಾಷೆಯ ರೀತಿಯಿದ್ದು. ಈ ವಿಡಿಯೋ ವೈರಲ್‌ ಆಗಲು ಕಾರಣವೆಂದರೆ ತೀರಿ ಹೋದ ತಂದೆಯ ಫೋಟೋ ಮುಂದೆ ಹೋಗಿ ಈ ರೀತಿ ಮಾಡಿದ್ದು, ಫೋಟೋದಲ್ಲಿರುವ ತಂದೆ ಮುಖದಲ್ಲೂ ಫಿಲ್ಟರ್‌ ಎಫೆಕ್ಟ್‌ ಕಾಣಿಸಿದೆ.

ವೀಡಿಯೋ ನೋಡಿದ ನೆಟ್ಟಿಗರ ಅಭಿಪ್ರಾಯವೇನು?

ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ಒಬ್ಬರು “ಗೆಳಯರೇ ಎಲ್ಲವನ್ನೂ ಬಳಸಿ, ಈ ಪೀಳಿಗೆಗೆ ಏನನ್ನೂ ಬಿಡಬೇಡಿ.” ಎಂದು ಒಬ್ಬರು ಬರೆದಿದ್ದಾರೆ. “ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಭೀತಿಯ ವಿಡಿಯೋ” ಎಂದು ಬರೆದಿದ್ದಾರೆ. “ನನಗೆ ಇದರಲ್ಲಿ ಏನು ಕೆಟ್ಟದು ಕಾಣಿಲ್ಲ. ಬಹುಶಃ ಅವಳು ತನ್ನ ಅಪ್ಪನನ್ನು ಮಿಸ್‌ ಮಾಡಿಕೊಳ್ಳುತ್ತಾ ಇರಬಹುದು” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇದು ವ್ಯಂಗ್ಯವಾಗುವುದರ ಜೊತೆ, ದುಃಖದ ಸಂಗತಿಯೂ ಆಗಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇನ್ನು ಏನೆಲ್ಲ ಹುಚ್ಚಾಟಗಳನ್ನು ನಾವು ನೋಡಬೇಕಿದೆಯೋ‌… ಮಿತಿಮೀರಿದ ಫೋಟೋ ಕ್ರೇಜ್ ನಮ್ಮನ್ನು ಅದೆಷ್ಟೋ ಕನಿಷ್ಟ ಮಟ್ಟಕ್ಕೂ ಕೊಂಡೊಯ್ಯಬಹುದು ಅಲ್ಲವೇ…?

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *