ಮೃತ ತಂದೆಯ ಫೋಟೋ ಫ್ರೇಮ್ ಮುಂದೆ ಮಗಳ ರೀಲ್ಸ್ ಕ್ರೇಜ್ – ಸ್ನ್ಯಾಪ್ ಚಾಟ್ ಗೆ ಹೀಗೂ ಎಡಿಕ್ಟ್ ಆಗ್ತಾರಾ…? ಈ ವೀಡಿಯೋ ನೋಡಿ..

ಮೃತ ತಂದೆಯ ಫೋಟೋ ಫ್ರೇಮ್ ಮುಂದೆ ಮಗಳ ರೀಲ್ಸ್ ಕ್ರೇಜ್ – ಸ್ನ್ಯಾಪ್ ಚಾಟ್ ಗೆ ಹೀಗೂ ಎಡಿಕ್ಟ್ ಆಗ್ತಾರಾ…? ಈ ವೀಡಿಯೋ ನೋಡಿ..

ನ್ಯೂಸ್ ಆ್ಯರೋ : ಇದು ತಾಂತ್ರಿಕ ಯುಗ. ಕಾಲ ಬದಲಾದಂತೆ ಜನರೂ ಬದಲಾಗುತ್ತಾ ಹೋಗುತ್ತಾರೆ.‌ ತಂತ್ರಜ್ಞಾನಗಳು ಮಾನವೀಯ ಸಂಬಂಧದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ ಎಂಬುವುದಕ್ಕೆ ಈ ಹುಡುಗಿಯ ಫೋಟೋ ಹುಚ್ಚಾಟವೇ ನೈಜ ನಿದರ್ಶನ ಬಿಡಿ….

ಇನ್ಸ್ಟಾಗ್ರಾಮ್‌ ರೀಲ್ಸ್ ನೋಡುವುದರಲ್ಲಿ, ಸ್ನ್ಯಾಪ್‌ ಚಾಟ್‌ ಫಿಲ್ಟರ್‌ ಗಳನ್ನು ಬಳಸುವುದರಲ್ಲಿ ಟ್ರೆಂಡ್‌ಗೆ ತಕ್ಕ ಈಗಿನ ಯೂತ್ಸ್‌ ಬದಲಾಗುತ್ತಾರೆ. ಯುವತಿಯೊಬ್ಬಳು ಸ್ನ್ಯಾಪ್‌ ಚಾಟ್‌ ಲೈವ್‌ ಫಿಲ್ಟರ್‌ ನಲ್ಲಿ ಸೆರೆ ಹಿಡಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸ್ನ್ಯಾಪ್‌ ಚಾಟ್‌ ಬಹುತೇಕರ ಮೆಚ್ಚಿನ ಫೋಟೋ ತೆಗೆಯುವ ಸೋಶಿಯಲ್‌ ಮೀಡಿಯಾ ಎಂದರೆ ತಪ್ಪಾಗದು. ಇದರಲ್ಲಿ ನೂರಾರು ಫಿಲ್ಟರ್‌ ಗಳಿವೆ. ಅವುಗಳಲ್ಲಿ ವ್ಯಂಗ್ಯ ನೋಟ, ಆಳುವ ಮುಖ, ನಗುವ ಮುಖ ಹೀಗೆ ನಾನಾ ರೀತಿಯ ಫಿಲ್ಟರ್‌ ಗಳಿವೆ. ಹುಡುಗನ ಮುಖ ಹುಡುಗಿಯಂತೆ ಮಾಡುವ ಫಿಲ್ಟರ್‌ ಕೂಡ ಇಲ್ಲಿದೆ.

ನಾಯಿಯಂತೆ ನಾಲಗೆ ಉದ್ದವಾಗಿ ಕಾಣುವ ಫಿಲ್ಟರ್‌ ವೊಂದಿದೆ. ಈ ಫಿಲ್ಟರ್‌ ನಲ್ಲಿ ಯುವತಿಯೊಬ್ಬಳು ಸೆರೆ ಹಿಡಿದ ವಿಡಿಯೋ ವೈರಲ್‌ ಆಗಿದೆ.

ವೀಡಿಯೋದಲ್ಲಿ ಏನಿದೆ..?

ಯುವತಿಯೊಬ್ಬಳು ತನ್ನ ದಿವಂಗತ ತಂದೆಯ ಫೋಟೋ ಫ್ರೇಮ್‌ ಮುಂದೆ ಹೋಗಿ ಡಾಗ್‌ ಫಿಲ್ಟರ್‌ ಬಳಸಿದ್ದಾಳೆ. ಇದರಿಂದ ಯುವತಿಯ ಕಿವಿ ಬಳಿ ನಾಯಿ ಕಿವಿ ಮೂಡಿವೆ. ಮೂಗು ಕೂಡ ನಾಯಿಯಂತೆ ಬಂದಿವೆ. ಇನ್ನು ನಾಲಗೆಯೂ ಹಾಗೆ ನಾಯಿಯಂತೆ ಬಂದಿದೆ. ಈ ಫಿಲ್ಟರ್‌ ತಮಾಷೆಯ ರೀತಿಯಿದ್ದು. ಈ ವಿಡಿಯೋ ವೈರಲ್‌ ಆಗಲು ಕಾರಣವೆಂದರೆ ತೀರಿ ಹೋದ ತಂದೆಯ ಫೋಟೋ ಮುಂದೆ ಹೋಗಿ ಈ ರೀತಿ ಮಾಡಿದ್ದು, ಫೋಟೋದಲ್ಲಿರುವ ತಂದೆ ಮುಖದಲ್ಲೂ ಫಿಲ್ಟರ್‌ ಎಫೆಕ್ಟ್‌ ಕಾಣಿಸಿದೆ.

ವೀಡಿಯೋ ನೋಡಿದ ನೆಟ್ಟಿಗರ ಅಭಿಪ್ರಾಯವೇನು?

ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ಒಬ್ಬರು “ಗೆಳಯರೇ ಎಲ್ಲವನ್ನೂ ಬಳಸಿ, ಈ ಪೀಳಿಗೆಗೆ ಏನನ್ನೂ ಬಿಡಬೇಡಿ.” ಎಂದು ಒಬ್ಬರು ಬರೆದಿದ್ದಾರೆ. “ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಭೀತಿಯ ವಿಡಿಯೋ” ಎಂದು ಬರೆದಿದ್ದಾರೆ. “ನನಗೆ ಇದರಲ್ಲಿ ಏನು ಕೆಟ್ಟದು ಕಾಣಿಲ್ಲ. ಬಹುಶಃ ಅವಳು ತನ್ನ ಅಪ್ಪನನ್ನು ಮಿಸ್‌ ಮಾಡಿಕೊಳ್ಳುತ್ತಾ ಇರಬಹುದು” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇದು ವ್ಯಂಗ್ಯವಾಗುವುದರ ಜೊತೆ, ದುಃಖದ ಸಂಗತಿಯೂ ಆಗಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇನ್ನು ಏನೆಲ್ಲ ಹುಚ್ಚಾಟಗಳನ್ನು ನಾವು ನೋಡಬೇಕಿದೆಯೋ‌… ಮಿತಿಮೀರಿದ ಫೋಟೋ ಕ್ರೇಜ್ ನಮ್ಮನ್ನು ಅದೆಷ್ಟೋ ಕನಿಷ್ಟ ಮಟ್ಟಕ್ಕೂ ಕೊಂಡೊಯ್ಯಬಹುದು ಅಲ್ಲವೇ…?

Related post

Summer Tips: ನೀವು ಬೇಸಿಗೆಯಲ್ಲಿ ಅತಿಯಾಗಿ ಬೆವರುತ್ತೀರಾ?; ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

Summer Tips: ನೀವು ಬೇಸಿಗೆಯಲ್ಲಿ ಅತಿಯಾಗಿ ಬೆವರುತ್ತೀರಾ?; ಹಾಗಾದ್ರೆ ಈ ಟಿಪ್ಸ್…

ಬೇಸಿಗೆಯು (Summer) ಐಸ್ ಕ್ಯಾಂಡಿಗಳನ್ನು ಸವಿಯಲು, ತಂಪು ಪಾನೀಯಗಳನ್ನು ಸವಿಯಲು ಮತ್ತು ಬೇಸಿಗೆಯ ತಾಜಾ ಹಣ್ಣುಗಳನ್ನು ತಿನ್ನಲು ಸೂಕ್ತವಾದ ಸಮಯವಾಗಿದೆ. ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ (Heat) ಹೆಚ್ಚಾಗಿ ದೇಹವು…
ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದ ಹಿರೋಯಿನ್ ದಾಂಪತ್ಯ ಬದುಕು ಅಂತ್ಯ – ಮದುವೆಯಾದ ನಾಲ್ಕೇ ವರ್ಷಕ್ಕೆ ‘ಮೊದಲಾ ಸಲ’ ಬೆಡಗಿಯ ಡೈವೋರ್ಸ್..!!

ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದ ಹಿರೋಯಿನ್ ದಾಂಪತ್ಯ ಬದುಕು ಅಂತ್ಯ…

ನ್ಯೂಸ್ ಆ್ಯರೋ : ಕೆಲದಿನಗಳಿಂದ ‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಶೈಲೂ’ ಚಿತ್ರದಲ್ಲಿ ನಟಿಸಿದ್ದ ನಟಿ ಭಾಮಾ ( Bhama ) ವೈಯಕ್ತಿಕ ಜೀವನದ ಬಗ್ಗೆಯೇ ಸಾಕಷ್ಟು ಚರ್ಚೆ…
ಸ್ಟಾರ್​ ನಟನೊಂದಿಗೆ 22ನೇ ವಯಸ್ಸಿನಲ್ಲಿ ಮೊದಲ ಕಿಸ್‌ ಮಾಡಿದ್ದರಂತೆ ಶಿಲ್ಪಾ ಶೆಟ್ಟಿ – ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿದ್ದು ಯಾರ ಜೊತೆ ಗೊತ್ತೇ?

ಸ್ಟಾರ್​ ನಟನೊಂದಿಗೆ 22ನೇ ವಯಸ್ಸಿನಲ್ಲಿ ಮೊದಲ ಕಿಸ್‌ ಮಾಡಿದ್ದರಂತೆ ಶಿಲ್ಪಾ ಶೆಟ್ಟಿ…

ನ್ಯೂಸ್ ಆ್ಯರೋ : ಫಿಟ್‌ನೆಸ್ ಹಾಗೂ ತಮ್ಮ ನಟನೆಯಿಂದಲೇ ಹೆಸರುವಾಸಿಯಾಗಿರುವ ನಟಿಯರ ಪೈಕಿ ಮೊದಲಿಗೆ ಕೇಳಿ ಬರುವ ಹೆಸರು ಎಂದರೆ ಅದು ಶಿಲ್ಪಾ ಶೆಟ್ಟಿ(Shilpa Shetty) ಅವರದ್ದು, ಸ್ಯಾಂಡಲ್‌ವುಡ್,…

Leave a Reply

Your email address will not be published. Required fields are marked *