ಪತಿಯ ಗೆಳೆಯನನ್ನೇ ಮದುವೆಯಾದ ಖ್ಯಾತ ಕ್ರಿಕೆಟಿಗನ ಮಾಜಿ ಪತ್ನಿ; ಯಾರಿದು ಖ್ಯಾತ ಕ್ರಿಕೆಟಿಗ…!?
ನ್ಯೂಸ್ ಆ್ಯರೋ : ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದ ದಿನೇಶ್ ಕಾರ್ತಿಕ್ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ವಿಚಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಇತ್ತೀಚೆಗಷ್ಟೇ ತಮ್ಮ ನೂತನ ಮನೆಯ ಗೃಹಪ್ರವೇಶ ಕೂಡಾ ಮಾಡಿಕೊಂಡಿದ್ದರು.
2007ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೂರು ವರ್ಷಗಳ ನಂತರ ಬಾಲ್ಯ ಸ್ನೇಹಿತೆ ನಿಕಿತಾ ವಂಜಾರರನ್ನು ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ಸುಮಾರು ಐದು ವರ್ಷಗಳ ಕಾಲ ಸಂತೋಷವಾಗಿ ನಡೆಯುತ್ತಿದ್ದ ಇವರ ದಾಂಪತ್ಯ ಜೀವನಕ್ಕೆ 2012ರಲ್ಲಿ ವಿಚ್ಛೇದನದ ಮೂಲಕ ಪೂರ್ಣ ವಿರಾಮ ಹಾಕಲಾಯಿತು.
ದಿನೇಶ್ ಮತ್ತು ನಿಕಿತಾರಾ ಸುಖ ಸಂಸಾರದ ನಡುವೆ ದಿನೇಶ್ ಕಾರ್ತಿಕ್ ಸಹ ಆಟಗಾರ ಮುರಳಿ ವಿಜಯ್ ಅವರ ಭೇಟಿಯಾಯಿತು. ಈ ಭೇಟಿಯು ಇವರಿಬ್ಬರ ಬದುಕಿನಲ್ಲಿ ಮಹತ್ವದ ತಿರುವು ಪಡೆದುಕೊಂಡಿತು. ನಂತರ ಮುರಳಿ ಹಾಗೂ ನಿಕಿತಾರ ನಡುವೆ ಆತ್ಮೀಯತೆ ಬೆಳೆದು, ಪ್ರೀತಿಯಲ್ಲಿ ಬಿದ್ದಿದರು. ಈ ವಿಷಯ ತಿಳಿದ ಬಳಿಕ ದಿನೇಶ್ ಕಾರ್ತಿಕ್ 2012ರಲ್ಲಿ ನಿಕಿತಾಗೆ ವಿಚ್ಛೇದನ ನೀಡಿದ್ದರು.
ಮುಂದೆ ನಿಕಿತಾ ಹಾಗೂ ಮುರಳಿ ವಿಜಯ್ ತಮ್ಮ ದಾಂಪತ್ಯ ಜೀವನವನ್ನು ಆರಂಭಿಸಿದ್ದರು. ಈ ವಿಚಾರದಿಂದ ಕುಗ್ಗಿ ಹೋಗಿದ್ದ ದಿನೇಶ್ ಕಾರ್ತಿಕ್ ಎಲ್ಲಾ ವಿಚಾರದಲ್ಲೂ ದೂರ ಸರಿದಿದ್ದರು.
ಇದಾದ ನಂತರ 2013ರಲ್ಲಿ ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಭೇಟಿಯಾಯಿತು. ಮುಂದೆ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ನಡುವೆ ಆತ್ಮೀಯತೆ ಬೆಳೆದು, 2015 ರಲ್ಲಿ ಇಬ್ಬರೂ ವಿವಾಹವಾಗುವ ಮೂಲಕ ವೈವಾಹಿಕ ಜೀವನಕ್ಕೆ ಮುದ್ರೆ ಒತ್ತಿದ್ದರು. ದೀಪಿಕಾರನ್ನು ಬಾಳ ಸಂಗಾತಿಯಾಗಿ ಪಡೆದ ಬಳಿಕ ದಿನೇಶ್ ಕಾರ್ತಿಕ್ ರ ಬದುಕು ಸುಧಾರಿಸಿದ್ದು, ದಂಪತಿಗಳಿಗೆ ಅವಳಿ ಗಂಡು ಮಕ್ಕಳಿದ್ದು ಸಂತೋಷದ ಜೀವನ ನಡೆಸುತ್ತಿದ್ದಾರೆ.
Leave a Comment