ದುಬೈಗೆ ಕರೆಸಿ ಲೈಂಗಿಕ ಕಿರುಕುಳ; ನಟ ನಿವಿನ್ ಪೌಲಿ ವಿರುದ್ಧ ದೂರು
ನ್ಯೂಸ್ ಆ್ಯರೋ : ಕೆಲವು ದಿನಗಳ ನಂತರ ಮಾಲಿವುಡ್ ನಲ್ಲಿ ಕೆಲವು ಲೈಂಗಿಕ ಕಿರುಕುಳದ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಇದು ಮಲಯಾಳಂ ಚಿತ್ರರಂಗದ ಕರಾಳತೆಯನ್ನು ತೆರೆದಿಡುತ್ತಿದೆ.
ಕೆ. ಹೇಮಾ ಕಮಿಟಿಯ ವರದಿ ಹೊರಬಿದ್ದ ಬಳಿಕ ಮಲಯಾಳಂ ಅನೇಕ ನಟಿಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಈ ಎಲ್ಲಾ ಆರೋಪಗಳು ಮಾಲಿವುಡ್ ನ ಘನತೆ ಹಾಗೂ ಗೌರವವನ್ನು ಹಾಳುಗೆಡವುತ್ತಿದೆ. ಈ ಆರೋಪವು ದಿನದಿಂದ ದಿನಕ್ಕೆ ಬೆಳವಣಿಗೆ ಪಡೆಯುತ್ತಿದೆ.
ಇದೀಗ ನಟ ನಿವಿನ್ ಪೌಲಿ ವಿರುದ್ಧ ನಟಿಯೊಬ್ಬರು ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ನನ್ನನ್ನು ದುಬೈಗೆ ಕರೆಸಿಕೊಂಡಿದ್ದರು. ಈ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಲಾಯಿತು ಎಂದು ನಟಿ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿಯಾಗಿದೆ.
ಈ ದೂರಿನ ಅನ್ವಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ, ನಿವಿನ್ ಪೌಲಿ ಸೇರಿದಂತೆ ಆರು ಮಂದಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ನಿರ್ಮಾಪಕರೂ ಎಂದು ಹೇಳಲಾಗಿದೆ.
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ನಟ ನಿವಿನ್, ‘ ನನ್ನ ಬಗ್ಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಆ ಸುದ್ದಿಯು ಶುದ್ಧ ಸುಳ್ಳು. ನನ್ನ ಮೇಲಿನ ಈ ಆಧಾರರಹಿತ ಆರೋಪವನ್ನು ನಿರಾಕರಿಸುತ್ತೇನೆ. ಈ ಬಗ್ಗೆ ನಾನು ಕಾನೂನು ಹೋರಾಟ ನಡೆಸುತ್ತೇನೆ’ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಟ ಪೋಸ್ಟ್ ಮಾಡಿದ್ದಾರೆ.
Leave a Comment