ಉಡುಪಿಯಲ್ಲಿ ಸಿದ್ಧವಾಗುತ್ತಿದೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ರಿಸ್ ಮಸ್ ಕೇಕ್ – ಈ ಕೇಕ್ ಗೆ ಏನೆಲ್ಲಾ ಹಾಕ್ತಾರೆ ಗೊತ್ತಾ?

ಉಡುಪಿಯಲ್ಲಿ ಸಿದ್ಧವಾಗುತ್ತಿದೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ರಿಸ್ ಮಸ್ ಕೇಕ್ – ಈ ಕೇಕ್ ಗೆ ಏನೆಲ್ಲಾ ಹಾಕ್ತಾರೆ ಗೊತ್ತಾ?

ನ್ಯೂಸ್ ಆ್ಯರೋ : ಕ್ರಿಸ್ ಮಸ್ ಗೆ ಇನ್ನೇನು ಕೆಲ ದಿನಗಳಾಷ್ಟೇ ಬಾಕಿ ಇದೆ. ಹೀಗಾಗಿ ತಯಾರಿ ಕಾರ್ಯ ಎಲ್ಲೆಡೆ ಪ್ರಾರಂಭವಾಗಿದೆ. ಮುಖ್ಯವಾಗಿ ಕ್ರಿಸ್ ಮಸ್ ನಲ್ಲಿ ಎಲ್ಲರ ಗಮನ ಸೆಳೆಯುವುದು ಬಗೆಬಗೆಯ ಕೇಕ್ ಗಳು.

ಕಪ್ ಕೇಕ್ ನಿಂದ ಹಿಡಿದು ಬೃಹತ್ ಗಾತ್ರದ ಲಕ್ಷಾಂತರ ಮೌಲ್ಯದ ಕೇಕ್ ಗಳು ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯುವುದು. ಈಗಾಗಲೇ ಕ್ರಿಸ್‌ಮಸ್‌ ಗೆ ಉಡುಪಿಯಲ್ಲಿ ಕೇಕ್ ತಯಾರಿ ಶುರುವಾಗಿದೆ.

ಇತ್ತೀಚೆಗೆ ಉಡುಪಿಯಲ್ಲೂ ತಿಂಗಳ ಮೊದಲೇ ಕ್ರಿಸ್ಮಸ್ ತಯಾರಿ ಪ್ರಾರಂಭಿಸಲಾಗುತ್ತಿದ್ದು, ವೈನ್‌, ರಮ್‌ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್‌ ತಯಾರಿಸಲಾಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ಇರುವ ಕೆಲವು ಅಪರೂಪದ ಸಂಪ್ರದಾಯಗಳನ್ನು ನಮ್ಮ ನಾಡಿನಲ್ಲೂ ಆಚರಿಸಲಾಗುತ್ತಿದೆ. ಇದರಲ್ಲಿ ಕೃಷಿ ಸಂಸ್ಕೃತಿಯೊಂದಿಗೆ ಬೆರೆತಿರುವ ಈ ಆಚರಣೆ ತುಂಬಾ ವಿಶಿಷ್ಟ.

ಹಲವಾರು ಬಗೆಯ ರುಚಿಯಾದ ಒಣ ಹಣ್ಣುಗಳಿಗೆ ಆಲ್ಕೋಹಾಲ್ ಸೇರಿಸಿ ಕ್ರಿಸ್ ಮಸ್ ಕೇಕ್ ತಯಾರಿಗೆ ತಿಂಗಳ ಮೊದಲೇ ಚಾಲನೆ ನೀಡಲಾಗುತ್ತದೆ.

ಭಾರೀ ಪ್ರಮಾಣದ ಡ್ರೈ ಫ್ರುಟ್ಸ್ ಗಳನ್ನು ಗುಡ್ಡೆ ಹಾಕಿ ಇದಕ್ಕೆ ರಮ್, ವಿಸ್ಕಿ, ಬ್ಲಾಕ್ ವೈನ್, ರೆಡ್ ವೈನ್ ಸೇರಿದಂತೆ ಬಗೆಬಗೆಯ ಹಣ್ಣಿನ ರಸಗಳನ್ನು ಸುರಿಯುತ್ತಾರೆ. ಬಳಿಕ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಹದ ಮಾಡಲಾಗುತ್ತದೆ.

ಈ ಮಿಶ್ರಣವನ್ನು ಮುಚ್ಚಿ ಪೆಟ್ಟಿಗೆಯೊಳಗೆ ಇಟ್ಟು ಹುಳಿ ಬಂದ ಬಳಿಕ ತೆಗೆದು ಬಳಿಕ ರುಚಿರುಚಿಯಾದ ಕೇಕ್ ತಯಾರಿಸೋದು ನೋಡುವುದು ಚಂದ, ಮಾಡುವುದು ಹಾಗೂ ಸವಿಯುವುದು ಚಂದ.

ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ತೆನೆ ಕಟಾವಿನ ಸೀಸನ್ ಕಳೆದ ಬಳಿಕ ಈ ಆಚರಣೆ ನಡೆಯುತ್ತದೆ. ನಮ್ಮ ದೇಶದಲ್ಲಿ ಬ್ರಿಟಿಷರ ಕಾಲದಿಂದಲೂ ಇದು ನಡೆದು ಬಂದಿರುವ ಸಂಪ್ರದಾಯ. ವೈನ್ ಮತ್ತು ರಮ್ ಬೆರೆಸಿದ ಈ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್ ಅನ್ನು ಸಿದ್ದ ಮಾಡಲಾಗುತ್ತದೆ.

ಕರಾವಳಿ ಭಾಗದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಆಚರಿಸುವ ಕ್ರಿಸ್ ಮಸ್ ಸಂಪ್ರದಾಯದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ವಿಶೇಷವೆಂದೇ ಹೇಳಬಹುದು. ಉಡುಪಿಯ ಮಣಿಪಾಲದಲ್ಲಿರುವ ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಒಣ ಹಣ್ಣುಗಳನ್ನು ಹುಳಿ ಮಾಡುವ ಕಾಯಕಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *