ಉಡುಪಿಯಲ್ಲಿ ಸಿದ್ಧವಾಗುತ್ತಿದೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ರಿಸ್ ಮಸ್ ಕೇಕ್ – ಈ ಕೇಕ್ ಗೆ ಏನೆಲ್ಲಾ ಹಾಕ್ತಾರೆ ಗೊತ್ತಾ?
- ವೈರಲ್ ನ್ಯೂಸ್
- November 30, 2023
- No Comment
- 73
ನ್ಯೂಸ್ ಆ್ಯರೋ : ಕ್ರಿಸ್ ಮಸ್ ಗೆ ಇನ್ನೇನು ಕೆಲ ದಿನಗಳಾಷ್ಟೇ ಬಾಕಿ ಇದೆ. ಹೀಗಾಗಿ ತಯಾರಿ ಕಾರ್ಯ ಎಲ್ಲೆಡೆ ಪ್ರಾರಂಭವಾಗಿದೆ. ಮುಖ್ಯವಾಗಿ ಕ್ರಿಸ್ ಮಸ್ ನಲ್ಲಿ ಎಲ್ಲರ ಗಮನ ಸೆಳೆಯುವುದು ಬಗೆಬಗೆಯ ಕೇಕ್ ಗಳು.
ಕಪ್ ಕೇಕ್ ನಿಂದ ಹಿಡಿದು ಬೃಹತ್ ಗಾತ್ರದ ಲಕ್ಷಾಂತರ ಮೌಲ್ಯದ ಕೇಕ್ ಗಳು ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯುವುದು. ಈಗಾಗಲೇ ಕ್ರಿಸ್ಮಸ್ ಗೆ ಉಡುಪಿಯಲ್ಲಿ ಕೇಕ್ ತಯಾರಿ ಶುರುವಾಗಿದೆ.
ಇತ್ತೀಚೆಗೆ ಉಡುಪಿಯಲ್ಲೂ ತಿಂಗಳ ಮೊದಲೇ ಕ್ರಿಸ್ಮಸ್ ತಯಾರಿ ಪ್ರಾರಂಭಿಸಲಾಗುತ್ತಿದ್ದು, ವೈನ್, ರಮ್ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್ ತಯಾರಿಸಲಾಗುತ್ತದೆ.
ಪಾಶ್ಚಾತ್ಯ ದೇಶಗಳಲ್ಲಿ ಇರುವ ಕೆಲವು ಅಪರೂಪದ ಸಂಪ್ರದಾಯಗಳನ್ನು ನಮ್ಮ ನಾಡಿನಲ್ಲೂ ಆಚರಿಸಲಾಗುತ್ತಿದೆ. ಇದರಲ್ಲಿ ಕೃಷಿ ಸಂಸ್ಕೃತಿಯೊಂದಿಗೆ ಬೆರೆತಿರುವ ಈ ಆಚರಣೆ ತುಂಬಾ ವಿಶಿಷ್ಟ.
ಹಲವಾರು ಬಗೆಯ ರುಚಿಯಾದ ಒಣ ಹಣ್ಣುಗಳಿಗೆ ಆಲ್ಕೋಹಾಲ್ ಸೇರಿಸಿ ಕ್ರಿಸ್ ಮಸ್ ಕೇಕ್ ತಯಾರಿಗೆ ತಿಂಗಳ ಮೊದಲೇ ಚಾಲನೆ ನೀಡಲಾಗುತ್ತದೆ.
ಭಾರೀ ಪ್ರಮಾಣದ ಡ್ರೈ ಫ್ರುಟ್ಸ್ ಗಳನ್ನು ಗುಡ್ಡೆ ಹಾಕಿ ಇದಕ್ಕೆ ರಮ್, ವಿಸ್ಕಿ, ಬ್ಲಾಕ್ ವೈನ್, ರೆಡ್ ವೈನ್ ಸೇರಿದಂತೆ ಬಗೆಬಗೆಯ ಹಣ್ಣಿನ ರಸಗಳನ್ನು ಸುರಿಯುತ್ತಾರೆ. ಬಳಿಕ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಹದ ಮಾಡಲಾಗುತ್ತದೆ.
ಈ ಮಿಶ್ರಣವನ್ನು ಮುಚ್ಚಿ ಪೆಟ್ಟಿಗೆಯೊಳಗೆ ಇಟ್ಟು ಹುಳಿ ಬಂದ ಬಳಿಕ ತೆಗೆದು ಬಳಿಕ ರುಚಿರುಚಿಯಾದ ಕೇಕ್ ತಯಾರಿಸೋದು ನೋಡುವುದು ಚಂದ, ಮಾಡುವುದು ಹಾಗೂ ಸವಿಯುವುದು ಚಂದ.
ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ತೆನೆ ಕಟಾವಿನ ಸೀಸನ್ ಕಳೆದ ಬಳಿಕ ಈ ಆಚರಣೆ ನಡೆಯುತ್ತದೆ. ನಮ್ಮ ದೇಶದಲ್ಲಿ ಬ್ರಿಟಿಷರ ಕಾಲದಿಂದಲೂ ಇದು ನಡೆದು ಬಂದಿರುವ ಸಂಪ್ರದಾಯ. ವೈನ್ ಮತ್ತು ರಮ್ ಬೆರೆಸಿದ ಈ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್ ಅನ್ನು ಸಿದ್ದ ಮಾಡಲಾಗುತ್ತದೆ.
ಕರಾವಳಿ ಭಾಗದಲ್ಲಿ ಜಾತಿ, ಧರ್ಮ ಬೇಧವಿಲ್ಲದೆ ಆಚರಿಸುವ ಕ್ರಿಸ್ ಮಸ್ ಸಂಪ್ರದಾಯದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ವಿಶೇಷವೆಂದೇ ಹೇಳಬಹುದು. ಉಡುಪಿಯ ಮಣಿಪಾಲದಲ್ಲಿರುವ ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಒಣ ಹಣ್ಣುಗಳನ್ನು ಹುಳಿ ಮಾಡುವ ಕಾಯಕಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.