Driver.. If the bus stops, I will also come..!! - Gajaraj's struggle to stop the bus

ಡ್ರೈವರಣ್ಣ.. ಬಸ್ ನಿಲ್ಸೋ ನಾನು ಕೂಡ ಬರ್ತೀನಿ..!! – ಬಸ್ ನಿಲ್ಲಿಸಲು ಗಜರಾಜನ ಹರಸಾಹಸ : ವೈರಲ್ ವಿಡಿಯೋ ವೀಕ್ಷಿಸಿ..

ನ್ಯೂಸ್ ಆ್ಯರೋ : ಕಾಡುಪ್ರಾಣಿಗಳೆಂದರೆ ಎಲ್ಲರಿಗೂ ಪ್ರೀತಿ ಇದ್ದೇ ಇರುತ್ತದೆ. ಕೆಲವೊಮ್ಮೆ ಅವುಗಳ ವರ್ತನೆ ಭಯ ತರಿಸಿದರೆ ಇನ್ನು ಕೆಲವೊಮ್ಮೆ ನಗು ತರಿಸುವಂತೆ ಮಾಡುತ್ತದೆ.

ಕಾಡು ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಆಪ್ತ ಎಂದೆನಿಸುವುದು ಆನೆಗಳು. ಮದವೇರಿದರೂ ಅವುಗಳು ಹೆಚ್ಚು ಶಾಂತವಾಗಿರುವ ಪ್ರಾಣಿಗಳು. ಆದರೆ ಕೆಲವು ಬಾರಿ ಈ ಆನೆಗಳು ಮಾಡುವ ಚೇಷ್ಟೆ ನೋಡಲು ಖುಷಿಕೊಡುತ್ತದೆ.

ಇತರ ಪ್ರಾಣಿಗಳಿಗೆ ಆನೆಗಳು ಕೀಟಲೆ ಮಾಡುವ, ನೀರಿನಲ್ಲಿ ಆಟವಾಡುವ, ಮಾವುತನೊಂದಿಗೆ ಆಡುವ ಅದೆಷ್ಟೋ ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ.

View this post on Instagram

A post shared by $AħArA vÏ✿し㉫† 💜 (@sahara_rider16)

ಈಗ ಅಂತಹದ್ದೇ ಒಂದು ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಸ್ ನಿಲ್ಲಿಸಲು ಯತ್ನಿಸುವ ರೀತಿಯಲ್ಲಿ ಇರುವ ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆಗಳು ಬರುತ್ತಿವೆ.

ಡ್ರೈವರಣ್ಣ ಬಸ್ ನಿಲ್ಸೋ ನಾನು ಬರ್ತೀನಿ… ಎನ್ನುತ್ತಾ ರಸ್ತೆಯಲ್ಲಿ ಹೋಗಿ ಬರೋ ಬಸ್ಸುಗಳನ್ನೆಲ್ಲ ಆನೆಯೊಂದು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಗಜರಾಜ ರಸ್ತೆಯಲ್ಲಿ ಹೋಗಿ ಬರುವ ಬಸ್ಸುಗಳನ್ನೆಲ್ಲ ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಕಾಣಬಹುದು.

ರಸ್ತೆಯ ಬದಿಯಲ್ಲಿ ನಿಂತಿದ್ದ ಆನೆಯೊಂದು ಬಸ್ಸು ಬರುತ್ತಿದ್ದಂತೆ ತಕ್ಷಣವೇ ರಸ್ತೆ ಮಧ್ಯೆ ಬಂದು ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸುತ್ತದೆ. ಆದರೆ ಚಾಲಾಕಿ ಬಸ್ ಚಾಲಕ ಆನೆ ಈ ಕಡೆ ಬರುವಾಗ ಆ ಕಡೆಯಿಂದ ಬಸ್ಸನ್ನು ಸ್ಪೀಡ್ ಆಗಿ ಓಡಿಸಿಕೊಂಡು ಹೋಗುತ್ತಾನೆ.

ಈ ವಿಡಿಯೋವನ್ನು ಈಗಾಗಲೇ 17.5 ಮಿಲಿಯನ್ ಜನರು ನೋಡಿದ್ದು, 1.2 ಮಿಲಿಯನ್ ಜನರು ಇಷ್ಟಪಟ್ಟಿದ್ದಾರೆ. ಒಬ್ಬ ಕಾಮೆಂಟ್ ಮಾಡಿ, ಪಾಪ ಆ ಆನೆಗೆ ಏನು ಸಹಾಯ ಬೇಕಾಗಿತ್ತೋ ಏನೋ ಎಂದು ಹೇಳಿದ್ದಾರೆ. ಇನ್ನೊಬ್ಬರು ಆನೆಗೆ ಬಸ್ ಹತ್ತಿ ಊರು ಸುತ್ತಬೇಕೆನ್ನುವ ಆಸೆಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.