Simrath Kaur : ಬೋಲ್ಡ್ ಸೀನ್ ಮಾಡಿ ಟ್ರೋಲ್‌ ಆಗಿದ್ಲು ಈ ನಟಿ‌ – ಆದರೆ.. ಅತಿ ಹೆಚ್ಚು ಗಳಿಕೆಯ ಹಿಂದಿ ಸಿನಿಮಾ ಕೂಡ ಈಕೆಯದ್ದೇ…!!

Simrath Kaur : ಬೋಲ್ಡ್ ಸೀನ್ ಮಾಡಿ ಟ್ರೋಲ್‌ ಆಗಿದ್ಲು ಈ ನಟಿ‌ – ಆದರೆ.. ಅತಿ ಹೆಚ್ಚು ಗಳಿಕೆಯ ಹಿಂದಿ ಸಿನಿಮಾ ಕೂಡ ಈಕೆಯದ್ದೇ…!!

ನ್ಯೂಸ್ ಆ್ಯರೋ : ಮನೆ ಮಗಳಾಗಿದ್ದವಳು ಏಕಾಏಕಿ ಬಿ-ಗ್ರೇಡ್ ಚಿತ್ರದಲ್ಲಿ ಕಾಣಿಸಿಕೊಂಡರೆ ಎಲ್ಲರಿಗೂ ಒಮ್ಮೆ ಶಾಕ್ ಆಗೋದು ಖಂಡಿತಾ. ಇದರಿಂದ ಆಕೆ ಮಾತ್ರವಲ್ಲ ಆಕೆಯ ಕುಟುಂಬವೂ ಮುಜುಗರಕ್ಕೆ ಈಡಾಗುವುದು.

ಈ ವಿಷಯ ಯಾಕೆಂದರೆ ಬಾಲಿವುಡ್ ಅಂಗಳದಲ್ಲಿ ಮನೆ ಮಗಳಂಥಾ ಪಾತ್ರಗಳಲ್ಲೇ ಹೆಸರು ವಾಸಿಯಾಗಿದ್ದ ನಟಿಯೊಬ್ಬಳು ದಿಢೀರ್ ಆಗಿ ಅಶ್ಲೀಲ ದೃಶ್ಯಗಳಲ್ಲಿ ಅಭಿನಯಿಸಿದ್ದರಿಂದ ಸಾಕಷ್ಟು ಟ್ರೋಲ್‌ಗೆ ಗುರಿಯಾಗಬೇಕಾಯಿತು. ಆದರೆ ಮತ್ತೆ ಹಲವು ವರ್ಷಗಳ ಬಳಿಕ ಆಕೆ ನಟಿಸಿದ ಚಿತ್ರ ಅತೀ ಹೆಚ್ಚು ಗಳಿಕೆ ಮಾಡಿದ್ದು ಚಿತ್ರರಂಗದಲ್ಲಿ ಆಕೆಗೆ ದೊಡ್ಡ ಬ್ರೇಕ್ ಕೊಟ್ಟಿತು.

ಒಂದು ನಿರ್ದಿಷ್ಟ ಪಾತ್ರಕ್ಕಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನಟಿ ಸಿಮ್ರತ್ ಕೌರ್. ಆಕೆಯನ್ನು ಮನೆ ಮಗಳೇ ಎಂದು ಪ್ರೇಕ್ಷಕರು ನೆಚ್ಚಿಕೊಂಡಿದ್ದರು. ಅವರ ಈ ಆನ್-ಸ್ಕ್ರೀನ್ ಇಮೇಜ್‌ ಬದಲಾವಣೆ ಒಪ್ಪಿಕೊಳ್ಳುವುದು ಎಲ್ಲರಿಗೂ ಸುಲಭವಾಗಿರಲಿಲ್ಲ. ಆದರೆ ಆಕೆ ದಿಢೀರ್ ಆಗಿ ಬಿ-ಗ್ರೇಡ್ ಕಾಮಪ್ರಚೋದಕ ಥ್ರಿಲ್ಲರ್‌ನಲ್ಲಿ ಅಭಿನಯಿಸಿ ಸಾಕಷ್ಟು ಟ್ರೋಲ್‌ಗೆ ಗುರಿಯಾದಳು.

ಇದರಿಂದ ಬಾಲಿವುಡ್ ನಲ್ಲಿ ಮತ್ತೆ ಆಕೆ ಹೊಸ ಆರಂಭ ಮಾಡಲು ಸಾಕಷ್ಟು ವರ್ಷಗಳೇ ಬೇಕಾಯಿತು. ಅಂತಿಮವಾಗಿ ಆಕೆ ನಟಿಸಿದ ಈ ಒಂದು ಚಿತ್ರ ಅತೀ ಹೆಚ್ಚು ಗಳಿಸಿದ ಹಿಂದಿ ಚಲನಚಿತ್ರವೆಂದು ಕರೆಸಿಕೊಂಡಿತು.

ಸಿನಿಮಾ ರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಎದುರಿಸಿದ ಸಿಮ್ರತ್ ಕೌರ್ 1997ರಲ್ಲಿ ಮುಂಬೈನಲ್ಲಿ ಜನಿಸಿದರು. 20ನೇ ವಯಸ್ಸಿನಲ್ಲಿ ತೆಲುಗು ಚಿತ್ರ ‘ಪ್ರೇಮಥೋ ಮೀ ಕಾರ್ತಿಕ್’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಸಿಮ್ರತ್‌, ಸೋನಿ ಮತ್ತು ಬಂಗಾರರಾಜು ಚಿತ್ರಗಳಲ್ಲಿ ಪೋಷಕ ಪಾತ್ರ ಮತ್ತು ಅತಿಥಿ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ಸಿಮ್ರತ್ 2020ರಲ್ಲಿ ತೆಲುಗು ಚಲನಚಿತ್ರ ಡರ್ಟಿ ಹರಿಯಲ್ಲಿ ಪ್ರಮುಖ ಪಾತ್ರವನ್ನು ಗಳಿಸಿದರು. ಇದು ಕಾಮಪ್ರಚೋದಕ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವಾಗಿತ್ತು. ಇದರಲ್ಲಿ ಶ್ರವಣ್ ರೆಡ್ಡಿ ನಟಿಸಿದ್ದು, ಹಲವು ಅಶ್ಲೀಲ ದೃಶ್ಯಗಳಿಂದ ಕೂಡಿತ್ತು. ಹೀಗಾಗಿ ಈ ಸಿನಿಮಾ ಮತ್ತು ಸಿಮ್ರತ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.

ಅನಂತರ 2022ರಲ್ಲಿ ಸನ್ನಿ ಡಿಯೋಲ್ ನಟಿಸಿದ ಬ್ಲಾಕ್‌ಬಸ್ಟರ್‌ ಸಿನಿಮಾ ಗದರ್-2 ನಲ್ಲಿ ನಟಿಸಿದ ಸಿಮ್ರತ್ ಗೆ ಈ ಚಿತ್ರ ದೊಡ್ಡ ಬ್ರೇಕ್ ಕೊಟ್ಟಿತು. ಇಲ್ಲಿ ನಿರ್ದೇಶಕ ಅನಿಲ್ ಶರ್ಮಾ ಅವರು ಸಿಮ್ರತ್ ಅವರ ಆನ್-ಸ್ಕ್ರೀನ್ ಇಮೇಜ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದರು. ಆಕೆಗೆ ಪಾಕಿಸ್ತಾನಿ ಹುಡುಗಿಯ ಪಾತ್ರ ಕೊಟ್ಟು ಚಿತ್ರ ರಂಗದಲ್ಲಿ ಆಕೆ ಮತ್ತೆ ಗೆಲ್ಲುವಂತೆ ಮಾಡಿದರು.

ಗದರ್-2 ಚಿತ್ರ ಜಾಗತಿಕವಾಗಿ 691 ಕೋಟಿ ರೂ. ಗಳಿಸಿ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವೆಂದು ಗುರುತಿಸಿಕೊಂಡಿತು. ಬಳಿಕ ಶಾರೂಕ್‌ ಖಾನ್ ಅವರ ಪಠಾಣ್ ಇದರ ದಾಖಲೆಯನ್ನು ಮುರಿಯಿತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *