ಸಿಂಗಲ್ ಆಗಿ ಟ್ರಿಪ್ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ – ಕೇರಳದಲ್ಲಿ ರೂಪುಗೊಳ್ತಾ ಇದೆ ‘she’ ತಾಣಗಳು…!!

ಸಿಂಗಲ್ ಆಗಿ ಟ್ರಿಪ್ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ – ಕೇರಳದಲ್ಲಿ ರೂಪುಗೊಳ್ತಾ ಇದೆ ‘she’ ತಾಣಗಳು…!!

ನ್ಯೂಸ್ ಆ್ಯರೋ : ಕೆಲವು ಮಹಿಳೆಯರು ಹೆಚ್ಚಾಗಿ ಸೋಲೋ ಟ್ರಿಪ್ ಇಷ್ಟಪಡುತ್ತಾರೆ. ಬೇರೆ ಬೇರೆ ಸ್ಥಳಗಳನ್ನು Explore ಮಾಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬೇರೆ ಬೇರೆ ದೇಶಗಳಿಗೆ ಒಬ್ಬಂಟಿಯಾಗಿ ಪ್ರಯಾಣಿಸುವ ಅದೆಷ್ಟೋ ಯುವತಿಯರು ಈಗ ಇದ್ದಾರೆ. ಅಂಥವರಿಗೆ ಇದೀಗ ಕೇರಳ ಸರ್ಕಾರ ಶುಭಸುದ್ದಿಯೊಂದನ್ನು ನೀಡಿದೆ. ಮಹಿಳಾ ಸ್ನೇಹಿ ಯೋಜನೆಯೊಂದನ್ನು ರೂಪಿಸಿದೆ. She ತಾಣಗಳು ಹೆಸರಿನಲ್ಲಿ ಹೊಸ ಯೋಜನೆಯೊಂದನ್ನು ರೂಪಿಸುವ ಮೂಲಕ ಕೇರಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದೆ.

ಕೇರಳ ಸರ್ಕಾರದ ವಿಶೇಷ ಯೋಜನೆ

ಪುರುಷರಾದರೆ ಸರಿ, ಆದರೆ ಮಹಿಳೆಯರು ಒಬ್ಬಂಟಿಯಾಗಿ ಟ್ರಿಪ್‌ ಹೋಗುವುದು ಎಷ್ಟು ಸೇಫ್‌ ಎಂದು ನೀವು ಕೇಳಬಹುದು. ಕೆಲವೊಂದು ಸ್ಥಳಗಳಿಗೆ ಮಹಿಳೆಯರು ಯಾವುದೇ ಭಯವಿಲ್ಲದೆ ಸೋಲೋ ಟ್ರಿಪ್‌ ಹೋಗಿ ಬರಬಹುದು. ದೇವರ ನಾಡು ಎಂದೇ ಕರೆಯುವ ಕೇರಳದಲ್ಲಿ ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಮಹಿಳೆಯರ ಸೋಲೋ ಟ್ರಿಪ್‌ಗಾಗಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.

She ತಾಣಗಳ ಪ್ಯಾಕೇಜ್‌:

ಕೇರಳದಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೆ ಸುರಕ್ಷಿತವಾಗಿ ಒಬ್ಬಂಟಿಯಾಗಿ ಟ್ರಾವೆಲ್‌ ಮಾಡಬಹುದು. ಇದು ಪ್ರವಾಸೋದ್ಯಮದ ಹೊಸ ಬ್ರ್ಯಾಂಡಿಂಗ್ ಆಗಿದ್ದು, ಕಾರವಾನ್ ಪ್ರವಾಸೋದ್ಯಮದ ನಂತರ, ನಾವು ಮಹಿಳಾ ಸೋಲೋ ಟ್ರಾವೆಲರ್‌ಗಳಿಗೆ ಪ್ರತ್ಯೇಕವಾಗಿ ಕಸ್ಟಮೈಸ್ ಮಾಡಿದ She ತಾಣಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದೇವೆ ಎಂದು ಕೇರಳ ರಾಜ್ಯ ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಮ್ಮ ಪ್ರವಾಸೋದ್ಯಮ ಮಿಷನ್ ಅಡಿಯಲ್ಲಿ ಆರಂಭವಾಗುತ್ತಿರುವ ಈ ಪರಿಕಲ್ಪನೆಯು ಕೇರಳದ ವಿವಿಧ ತಾಣಗಳಲ್ಲಿ ಸುರಕ್ಷಿತ ಮತ್ತು ಮಹಿಳಾ ಸ್ನೇಹಿ ಪ್ರವಾಸೋದ್ಯಮ ವಲಯಗಳನ್ನು ರಚಿಸಲು ಯೋಜಿಸಿದೆ. ಇಲ್ಲಿ ಆಹಾರ, ವಸತಿ, ಸಾರಿಗೆ ಮತ್ತು ಮಾರ್ಗದರ್ಶಿಯನ್ನು ಒಳಗೊಂಡಿರುವ ಎಲ್ಲಾ ಮಹಿಳಾ ಪ್ರವಾಸ ಪ್ಯಾಕೇಜ್‌ಗಳನ್ನು ಮಹಿಳೆಯರೇ ನಿರ್ವಹಿಸುತ್ತಾರೆ.

ಸೋಲೋ ಮಹಿಳಾ ಟ್ರಾವೆಲರ್‌ಗಳಿಗೆ ಸುರಕ್ಷಿತ:

2022-2027 ಅವಧಿಯ ಕೇರಳದ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ರಾಜ್ಯ ಯೋಜನಾ ಮಂಡಳಿಯ ಕಾರ್ಯನಿರತ ಗುಂಪು She ತಾಣಗಳ ಕಾರ್ಯತಂತ್ರಗಳನ್ನು ರೂಪಿಸಿದೆ. ಪ್ರಪಂಚದ ಯಾವುದೇ ಮೂಲೆಯಿಂದ ಬರುವ ಪ್ರವಾಸಿಗರಿಗೆ ಕೇರಳವು ಸುರಕ್ಷಿತವಾಗಿದೆ. ನಾವು ಅದನ್ನು ಮಹಿಳಾ ಸ್ನೇಹಿಯನ್ನಾಗಿ ಮಾಡಲು ಬಯಸುತ್ತೇವೆ. ಇದಕ್ಕಾಗಿ, ಮಹಿಳಾ ಟ್ರಾವೆಲ್ ಆಪರೇಟರ್‌ಗಳಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಕಳೆದ 2 ವರ್ಷಗಳಲ್ಲಿ, ಕೇರಳದ ಅನೇಕ ಹಳ್ಳಿಗಳು She ತಾಣಗಳಾಗಿ ಹೊರ ಹೊಮ್ಮಿವೆ. ಕಂದಲ್ಲೂರು, ವಟ್ಟವಾಡ, ಮರವಂತುರುತ್ತು, ಕಡಲುಂಡಿ ಹಾಗೂ ಅನೇಕ ಗ್ರಾಮಗಳು ಈ ಪಟ್ಟಿಯಲ್ಲಿ ಸೇರಿವೆ.

ಶೀಘ್ರದಲ್ಲೇ ಹೊಸ ಆ್ಯಪ್ ಬಿಡುಗಡೆ:

ನಾವು ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಸ್ಥಳಗಳನ್ನು ಶಾರ್ಟ್‌ ಲಿಸ್ಟ್ ಮಾಡುತ್ತಿದ್ದೇವೆ. ಇದಕ್ಕಾಗೇ ಮಹಿಳಾ ಪ್ರಯಾಣಿಕರಿಗಾಗಿ ಹೊಸ ಆ್ಯಪ್ ರೂಪಿಸಲಾಗುವುದು. ಈ ಯೋಜನೆಯನ್ನು 1 ವರ್ಷದೊಳಗೆ ಹೊರ ತರಲಾಗುವುದು. ಪ್ರವಾಸೋದ್ಯಮ ಇಲಾಖೆಯು ಏಕಾಂಗಿ ಮಹಿಳಾ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು 10,000 ಮಹಿಳಾ ಉದ್ಯಮ ಜಾಲವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಸುಮಾರು 1,800 ಮಹಿಳೆಯರು ಆನ್‌ಲೈನ್ ತರಬೇತಿ ಪಡೆದಿದ್ದಾರೆ.

ಹೆಚ್ಚು ಹೆಚ್ಚು ಮಹಿಳೆಯರು ಸೋಲೋ ಟ್ರಿಪ್‌ ಆಯ್ಕೆ ಮಾಡಿಕೊಂಡಾಗ ನಮ್ಮ ರಾಜ್ಯಕ್ಕೆ ಭೇಟಿ ನೀಡಲು ನಾವು ಅವರಿಗೆ ಬೇಕಾದ ಅನುಕೂಲ ಮಾಡಿಕೊಡಲು ಬಯಸುತ್ತೇವೆ. ಯಾವುದೇ ಭಯವಿಲ್ಲದೆ ಸುರಕ್ಷಿತವಾಗಿ ಪ್ರಯಾಣಿಸಲು ಅಗತ್ಯವಿರುವ ಸ್ಥಳಗಳ ಪ್ಯಾಕೇಜ್‌ ಒದಗಿಸಲಿದ್ದೇವೆ. ಇತರ ರಾಜ್ಯಗಳಂತೆ ಕೇರಳದ ಪ್ರವಾಸೋದ್ಯಮವು ಕೋವಿಡ್ ಸಮಯದಲ್ಲಿ ಅಪಾರ ನಷ್ಟವನ್ನು ಅನುಭವಿಸಿತು. ಇದೀಗ She ತಾಣಗಳು ಕೇರಳ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕನ್ನು ನೀಡಲಿವೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ.

ಒಟ್ಟಾರೆಯಾಗಿ ಇನ್ಮುಂದೆಯಂತೂ ಯಾವುದೇ ಆತಂಕಗಳಿಲ್ಲದೆ ಯುವತಿಯರು ಸೋಲೋ ಟ್ರಿಪ್ ಎಂಜಾಯ್ ಮಾಡಬಹುದು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಕೇರಳ ಸರ್ಕಾರ ಅತ್ಯುತ್ತಮ ಯೋಜನೆಯನ್ನು ರೂಪಿಸಿದೆ.

Related post

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 13-05-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ…

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…

Leave a Reply

Your email address will not be published. Required fields are marked *