ನಿಮ್ಮ ವಾಟ್ಸಾಪ್ ಅಕೌಂಟ್ ಗೆ ಇಮೇಲ್ ಅಡ್ರೆಸ್ ಲಿಂಕ್ ಮಾಡೋದು ಹೇಗೆ ಗೊತ್ತಾ? – ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ನಿಮ್ಮ ವಾಟ್ಸಾಪ್ ಅಕೌಂಟ್ ಗೆ ಇಮೇಲ್ ಅಡ್ರೆಸ್ ಲಿಂಕ್ ಮಾಡೋದು ಹೇಗೆ ಗೊತ್ತಾ? – ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣಗಳು ಅದೆಷ್ಟೇ ಮುಂದುವರೆದರೂ, ಹೊಸ ಹೊಸ ಆ್ಯಪ್ ಗಳು ಪರಿಚಯವಾಗುತ್ತಿದ್ದರೂ ಕೂಡಾ ವಾಟ್ಸಾಪ್ ನ ಗುಣಮಟ್ಟ ಕುಸಿದಿಲ್ಲ. ಇಂದಿಗೂ ಬಳಕೆದಾರರು ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ನವೀನ ವೈಶಿಷ್ಟ್ಯಗಳನ್ನು ಹೊರತರುವುದು ಹೊಸದೇನೂ ಅಲ್ಲ. ಸದಾ ಒಂದಲ್ಲ ಒಂದು ಹೊಸ ಹೊಸ ಫೀಚರ್‌ಗಳನ್ನು ವಾಟ್ಸಾಪ್ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಮತ್ತೊಂದು ಇಂತಹದ್ದೇ ಪ್ರಯತ್ನದಲ್ಲಿ ವಾಟ್ಸಾಪ್ ಇದೆ. ಸದ್ಯ ವಾಟ್ಸಾಪ್ ಬಳಕೆದಾರರಿಗೆ ಅವರ ವಾಟ್ಸಾಪ್ ಖಾತೆಯೊಂದಿಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ.

ಏನಿದು ಹೊಸ ಫೀಚರ್…?

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ನವೀನ ವೈಶಿಷ್ಟ್ಯಗಳನ್ನು ಹೊರತರುವುದು ಹೊಸದೇನೂ ಅಲ್ಲ. ಸದಾ ಒಂದಲ್ಲ ಒಂದು ಹೊಸ ಹೊಸ ಫೀಚರ್‌ಗಳನ್ನು ವಾಟ್ಸಾಪ್ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಮತ್ತೊಂದು ಇಂತಹದ್ದೇ ಪ್ರಯತ್ನದಲ್ಲಿ ವಾಟ್ಸಾಪ್ ಇದೆ. ಸದ್ಯ ವಾಟ್ಸಾಪ್ ಬಳಕೆದಾರರಿಗೆ ಅವರ ವಾಟ್ಸಾಪ್ ಖಾತೆಯೊಂದಿಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ.

ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಆ ಕ್ಷಣದಲ್ಲಿ ಎಸ್‌ಎಂಎಸ್ ಮೂಲಕ ಒಟಿಪಿ ಪರಿಶೀಲನಾ ಕೋಡ್ ಅನ್ನು ಸ್ವೀಕರಿಸಲು ಸಾಧ್ಯವಾಗದ ಸಂದರ್ಭದಲ್ಲಿ ನೆರವಾಗುವಂತಹ ಗುರಿಯನ್ನು ಹೊಂದಿದೆ. 6-ಅಂಕಿಯ ಕೋಡ್ ಅನ್ನು ಎಸ್‌ಎಂಎಸ್ ಮೂಲಕ ಸ್ವೀಕರಿಸಲು ಆಗದಿದ್ದಾಗ ಅಥವಾ ಬಳಕೆದಾರರು ವಾಟ್ಸಾಪ್ ಲಾಗಿನ್‌ನೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ವೈಶಿಷ್ಟ್ಯವು ಸಹಾಯಕ್ಕೆ ಬರಲಿದೆ.

ಈ ವೈಶಿಷ್ಟ್ಯವು ಈಗ ಐಫೋನ್ ಬಳಕೆದಾರರಿಗೆ ಹೊರತರಲಾಗುತ್ತಿದ್ದು, ಇದು ಆಂಡ್ರಾಯ್ಡ್‌ನಲ್ಲಿಯೂ ಲಭ್ಯವಿದೆ. ಆದರೆ ಸದ್ಯಕ್ಕೆ ಇದು ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಇದೆ. ಹೀಗಾಗಿ, ನೀವು ಆಂಡ್ರಾಯ್ಡ್‌ ಬಳಕೆದಾರರಾಗಿದ್ದರೆ, ನಿಮ್ಮ ಡಿವೈಸ್‌ನಲ್ಲಿ ಬೀಟಾ ಆವೃತ್ತಿಯನ್ನು ಹೊಂದಲು ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ವಾಟ್ಸಾಪ್ ಬೀಟಾ ಪ್ರೋಗ್ರಾಂಗೆ ಎನ್‌ರೋಲ್ ಆಗಬೇಕು. ಇದನ್ನು ಪ್ಲೇ ಸ್ಟೋರ್‌→ ಸರ್ಚ್ → ವಾಟ್ಸಾಪ್ ಮೂಲಕ ಮಾಡಬಹುದು.

ವಾಟ್ಸಾಪ್ ಖಾತೆಯೊಂದಿಗೆ ಇಮೇಲ್ ವಿಳಾಸವನ್ನು ನೋಂದಾಯಿಸುವುದು ಹೇಗೆ…?

  1. ನಿಮ್ಮ ಮೊಬೈಲ್ ಡಿವೈಜ್‌ನಲ್ಲಿ ವಾಟ್ಸಾಪ್ ಅಪ್ಲಿಕೇಷನ್ ತೆರೆಯಿರಿ.
    ಸ್ಕ್ರೀನ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡುವ ಮೂಲಕ ಸೆಟ್ಟಿಂಗ್ಸ್ ಮೆನುವಿಗೆ ಹೋಗಿ.
  2. ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್‌' ಆಯ್ಕೆಯನ್ನು ಕ್ಲಿಕ್ ಮಾಡಿ ಅಕೌಂಟ್‌ ಮೆನುವಿನಡಿಯಲ್ಲಿ ಇಮೇಲ್ ವಿಳಾಸ’ ಆಯ್ಕೆಯನ್ನು ಆರಿಸಿ. ಇಲ್ಲಿ ನೀವು ನಿಮ್ಮ ಇಮೇಲ್ ಅನ್ನು ನಿಮ್ಮ ವಾಟ್ಸಾಪ್ ಖಾತೆಯೊಂದಿಗೆ ಲಿಂಕ್ ಮಾಡಬಹುದು.
  3. ಹೀಗಾಗಿ ನಿಮ್ಮ ವಾಟ್ಸಾಪ್ ಖಾತೆಯೊಂದಿಗೆ ನೀವು ಲಿಂಕ್ ಮಾಡಲು ಬಯಸುವ ಇಮೇಲ್ ವಿಳಾಸವನ್ನು ಇಲ್ಲಿ ನಮೂದಿಸಿ.
  4. ಇಮೇಲ್ ಅನ್ನು ನಮೂದಿಸಿದ ಬಳಿಕ ಒದಗಿಸಿದ ಇಮೇಲ್ ವಿಳಾಸದಲ್ಲಿ ನೀವು ಒಟಿಪಿ ಯನ್ನು ಸ್ವೀಕರಿಸುತ್ತೀರಿ.
  5. ನಿಮ್ಮ ವಾಟ್ಸಾಪ್ ಖಾತೆಯೊಂದಿಗೆ ಇಮೇಲ್ ಅನ್ನು ಪರಿಶೀಲಿಸಲು ಮತ್ತು ಯಶಸ್ವಿಯಾಗಿ ಲಿಂಕ್ ಮಾಡಲು ನಿಮ್ಮ ಇಮೇಲ್‌ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ವಾಟ್ಸಾಪ್‌ನಲ್ಲಿ ಗೊತ್ತುಪಡಿಸಿದ ಜಾಗದಲ್ಲಿ ನಮೂದಿಸಿ.

ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ವಾಟ್ಸಾಪ್ ಖಾತೆಗೆ ನಿಮ್ಮ ಇಮೇಲ್ ವಿಳಾಸವನ್ನು ಲಿಂಕ್ ಮಾಡಬಹುದು.ಅತ್ಯಂತ ಸುಲಭ ವಿಧಾನ ಇದಾಗಿದ್ದು ಮುಂಜಾಗೃತೆಯಿಂದ ಅನುಸರಿಸಿ ಇಮೇಲ್ ಗೆ ಲಿಂಕ್ ಮಾಡಿಕೊಳ್ಳಬಹುದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *