ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದ ಕಿಲಾಡಿಗಳು – ಬಿಗ್ ಬಾಸ್ ಪ್ರವೇಶಿಸಿದ ಈ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿಯ ಹಿನ್ನೆಲೆ ಏನ್ ಗೊತ್ತಾ?

ನ್ಯೂಸ್ ಆ್ಯರೋ : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 50 ದಿನಗಳನ್ನು ಪೂರೈಸಿದೆ. ಇದರೊಂದಿಗೆ ದೊಡ್ಮನೆ ಸದಸ್ಯರ ನಡುವೆ ಉಳಿವಿಗಾಗಿ ಫೈಟ್ ಕೂಡ ತುಸು ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ 6 ಮಂದಿ ಔಟ್ ಆಗಿದ್ದು, ಸ್ಪರ್ಧಿಗಳ ಸಂಖ್ಯೆ 11ಕ್ಕೆ ಇಳಿದಿದೆ. ಈ ನಡುವೆ ಪ್ರತೀ ಸೀಸನ್ ರೀತಿಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು, ಬಿಗ್ ಬಾಸ್ ಮನೆಯ ಕಾವು ಏರಿದೆ.

ಆದರೆ ಈ ಬಾರಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಯಾರು ಅನ್ನೋ ಪ್ರಶ್ನೆ ನಿಮ್ಮಲ್ಲಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬಿಗ್ ಬಾಸ್ 8 ರಲ್ಲೂ ಹೀಗೆ ಆಗಿತ್ತು!

ಬಿಗ್ ಬಾಸ್ನ ಪ್ರತೀ ಸೀಸನ್ ನಲ್ಲೂ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಗಳು ಎಂಟ್ರಿ ಪಡೆಯುತ್ತಾರೆ. ಎಂಟನೇ ಸೀಸನ್ನಲ್ಲಿ ಇಬ್ಬರು ಒಟ್ಟೊಟ್ಟಿಗೆ ದೊಡ್ಮನೆಗೆ ಬಂದಿದ್ದರು.

ಈ ಬಾರಿಯೂ ಕೂಡ ಇಬ್ಬರು ಕಿಲಾಡಿಗಳು ಒಟ್ಟಿಗೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಇವರಿಬ್ಬರೂ ಕೂಡ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ದೊಡ್ಮನೆಗೆ ಇವರಿಬ್ಬರ ಆಗಮನವಾಗಿದ್ದು, ಅಭಿಮಾನಿಗಳು‌ ಖುಷಿಯಾಗಿದ್ದಾರೆ.

ಯಾರು ಈ ಇಬ್ಬರು‌ ಕಿಲಾಡಿಗಳು?

ಈಗಾಗಲೇ ಬಿಗ್‌ಬಾಸ್ ಮನೆಗೆ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ರಾಯಲ್ ಆಗಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಒಂದು ಕ್ಷಣ ದೊಡ್ಮನೆ ಸ್ಪರ್ಧಿಗಳು ಇವರನ್ನು ಕಂಡು ಶಾಕ್ ಆಗಿದ್ದರು.

ಮಾಡೆಲ್ ಆಗಿ ಗುರುತಿಸಿಕೊಂಡಿರುವ ಪವಿ ಪೂವಪ್ಪ ಇನ್ಸ್ಟ್ರಾಗ್ರಾಮ್ ನಲ್ಲಿ ಬರೋಬ್ಬರಿ 1 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಜೊತೆಗೆ ಅವಿನಾಶ್ ಶೆಟ್ಟಿ ಕೂಡ ಒಬ್ಬ ಮಾಡೆಲ್ ಹಾಗೂ ಕ್ರಿಕೆಟರ್ ಆಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಸದ್ಯ, ಈ ಇಬ್ಬರು‌ ಕಿಲಾಡಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.