ಅಮರನಾಥ ಗುಹೆ ಬಳಿ ವಾಹನಗಳ ಅಟ್ಟಹಾಸ – ಕರಗುತ್ತಿದೆ ಪವಿತ್ರ ಶಿವಲಿಂಗ : ಕಾರಣವೇನು?

ಅಮರನಾಥ ಗುಹೆ ಬಳಿ ವಾಹನಗಳ ಅಟ್ಟಹಾಸ – ಕರಗುತ್ತಿದೆ ಪವಿತ್ರ ಶಿವಲಿಂಗ : ಕಾರಣವೇನು?

ನ್ಯೂಸ್ ಆ್ಯರೋ : ಪವಿತ್ರ ಧಾರ್ಮಿಕ ಕ್ಷೇತ್ರ ಎನಿಸಿಕೊಂಡಿರುವ ಅಮರನಾಥ ಗುಹೆಯ ಪಕ್ಕದಲ್ಲಿ ವಾಹನಗಳ ಅಟ್ಟಹಾಸ ಹೆಚ್ಚಾಗಿದ್ದು, ಶಿವಲಿಂಗ ಜರಗುತ್ತಿದೆ ಎಂಬ ಕೂಗು ಹೆಚ್ಚಾಗಿದೆ. ಈ ನಡುವೆ ಗಡಿ ರಸ್ತೆಗಳ ಸಂಸ್ಥೆಯು ಅಮರನಾಥ ಗುಹೆಗೆ ತೆರಳುವ ರಸ್ತೆ ಸಂಪರ್ಕವನ್ನು ವಿಸ್ತರಿಸಿದ್ದರಿಂದ ಮೊದಲ ಬಾರಿಗೆ ವಾಹನಗಳು ಅಮರನಾಥ ಗುಹೆಯನ್ನು ತಲುಪಿವೆ ಇದರೊಂದಿಗೆ ಪಾದಾಚಾರಿ ಮಾರ್ಗದ ಸುಧಾರಣೆಯನ್ನು ನಡೆಸಲಾಗಿದೆ ಎಂದು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ತಿಳಿಸಿದೆ.

ವಾಹನಗಳಿಂದ ಕಾಲ್ನಡಿಗೆಗೆ ಮುಕ್ತಿ!

ಕೇಂದ್ರ ಕಾಶ್ಮೀರದ ಗಂದ‌ಬಾಲ್ ಜಿಲ್ಲೆಯ ಬಲ್ಟಾಲ್ ಬೇಸ್ ಕ್ಯಾಂಪ್ ಮೂಲಕ ದುಮೈಲ್‌ನಿಂದ ಅಮರನಾಥ ಗುಹೆಯವರೆಗಿನ ರಸ್ತೆಯ ಅಗಲೀಕರಣ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಗುಹಾ ದೇಗುಲಕ್ಕೆ ಹೋಗುವ ಅವಳಿ ರಸ್ತೆಗಳ ನಿರ್ವಹಣಾ ಜವಾಬ್ದಾರಿಯನ್ನು ಬಿಆರ್‌ಒಗೆ ವಹಿಸಲಾಗಿತ್ತು. ಸಾಂಪ್ರದಾಯಿಕವಾಗಿ ಕಾಲ್ನಡಿಗೆಯಲ್ಲಿ ಗುಹಾ ದೇಗುಲಕ್ಕೆ ತೆರಳಬೇಕಿದ್ದ ಯಾತ್ರಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಬಿ.ಆರ್.ಓ ರಸ್ತೆ ವಿಸ್ತರಣೆಯ ಜವಾಬ್ದಾರಿ ಕೈಗೆತ್ತಿಕೊಂಡಿದೆ. ಇದರಿಂದಾಗಿ ಕಾಲ್ನಡಿಗೆಯ ಯಾತ್ರೆಗೆ ಮುಕ್ತಿ ದೊರೆಯಲಿದೆ.

ಐತಿಹಾಸಿಕ ಹೆಜ್ಜೆಯಿಟ್ಟ ಬಿಆರ್‌ಒ

ಈ ಬಗ್ಗೆ ಮಾತನಾಡಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅಧಿಕಾರಿಯೊಬ್ಬರು, ‘ಕೇಂದ್ರದ ಯೋಜನೆ ಹಾಗೂ ಸಂಸ್ಥೆ ಮಾಡಿರುವ ಕಾಮಗಾರಿ ಬೇರೆ ಬೇರೆ. ಕೇಂದ್ರದ ಯೋಜನೆ ಇನ್ನಷ್ಟೇ ಜಾರಿಗೆ ಬರಬೇಕಿದೆ. ಪ್ರಾಜೆಕ್ಟ್ ಬೀಕನ್, ಅಮರನಾಥ ಯಾತ್ರಾ ರಸ್ತೆಗಳ ಮರುಸ್ಥಾಪನೆ ಹಾಗೂ ಸುಧಾರಣೆಯಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯ ಸಿಬ್ಬಂದಿಗಳು ಮಹತ್ತರವಾದ ಸಾಧನೆಯನ್ನು ಪೂರ್ಣಗೊಳಿಸಿ, ಪವಿತ್ರ ಗುಹೆಯತ್ತ ವಾಹನಗಳನ್ನು ತಲುಪಿಸಿ ಐತಿಹಾಸಿಕ‌ ಹೆಜ್ಜೆಯಿಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

ಕರಗುತ್ತಿದೆ ಶಿವಲಿಂಗ..!

ಆದರೆ ಈ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೆಲವು ಪರಿಸರವಾದಿಗಳು ಕಾಮಗಾರಿ ನಿಲ್ಲಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಯೋಜನೆ ಪೂರ್ಣಗೊಂಡರೆ ಅಮರನಾಥ ಗುಹೆಯತ್ತ ಹೆಚ್ಚಿನ ವಾಹನಗಳು ಆಗಮಿಸುತ್ತದೆ‌. ಜೊತೆಗೆ ಈ ರೀತಿ ವಾಹನಗಳ ಸಂಖ್ಯೆ ಹೆಚ್ಚಾದ ಅವುಗಳು ಹೊರ ಸೂಸುವ ಹೊಗೆಯಿಂದಾಗಿ ಸುತ್ತಮುತ್ತಲಿನ ವಾತಾವರಣ ಬಿಸಿಸಯಾಗುತ್ತದೆ ಮತ್ತು ಅಮರನಾಥ ಗುಹೆಯಲ್ಲಿರುವ ಶಿವಲಿಂಗ ಕರಗುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಈ ಯೋಜನೆಯನ್ನು ‘ಇದು ಹಿಂದೂಗಳ ನಂಬಿಕೆಗೆ ಮಾಡಿದ ದೊಡ್ಡ ಅವಮಾನ’ ಎಂದು ಟೀಕಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *